ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿನ್ನದ ಗೊಂಬೆ’ಯ ಬೆದರು ನೋಟ

Last Updated 1 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘ತಿಥಿ’ ಚಿತ್ರದ ಮೂಲಕ ಕನ್ನಡ ಸಿನಿಮಾ ವೀಕ್ಷಕರಿಗೆ ಪರಿಚಿತರಾದ ಗಡ್ಡಪ್ಪ ಈಗ ಒಂದಾದ ನಂತರ ಇನ್ನೊಂದರಂತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಅಭಿನಯಿಸಿರುವ ಚಿತ್ರ ‘ಚಿನ್ನದ ಗೊಂಬೆ’ ಶುಕ್ರವಾರ ತೆರೆಗೆ ಬರುತ್ತಿದೆ. ಪಂಕಜ್ ಬಾಲನ್ ನಿರ್ದೇಶನದ ಚಿತ್ರ ಇದು.

ಜನರನ್ನು ನಗಿಸುವ ಮತ್ತು ತುಸು ಹೆದರಿಸುವ ಅಂಶಗಳು ಚಿತ್ರದಲ್ಲಿವೆ ಎಂದು ತಂಡ ಹೇಳಿದೆ. ‘ಮಧ್ಯಮ ವರ್ಗದ ಯುವತಿಯೊಬ್ಬಳು ಸಿನಿಮಾದಲ್ಲಿ ನಟಿಸಲು ಅವಕಾಶ ಕೇಳಿ ಅಲೆಯುತ್ತಾಳೆ. ಕೆಲವರು ಈಕೆಯನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸುತ್ತಾರೆ. ಒಂದು ದಿನ ಒಳ್ಳೆಯ ಅವಕಾಶವೊಂದು ದೊರೆತು ಅವಳು ಚಿತ್ರೀಕರಣಕ್ಕಾಗಿ ಹಳ್ಳಿಗೆ ಹೋಗುತ್ತಾಳೆ. ಅಲ್ಲಿ ಕೊಲೆಯಾಗುತ್ತಾಳೆ. ನಂತರ ಅಲ್ಲಿ ಚಿತ್ರೀಕರಣಕ್ಕೆ ಬರುವವರನ್ನು ಪ್ರೇತವಾಗಿ ಕಾಡುತ್ತಾಳೆ. ಆ ಹಳ್ಳಿಗೆ ಚಿತ್ರೀಕರಣಕ್ಕೆ ಬರುವ ಇಬ್ಬರ ಕೊಲೆ ಆಗುತ್ತದೆ. ಹೀಗಾದ ನಂತರವೂ, ಚಿತ್ರೀಕರಣ ಯಶಸ್ಸು ಕಾಣುತ್ತದೆಯೇ ಎಂಬುದು ಚಿತ್ರದ ಸಾರಾಂಶ’ ಎಂದು ತಂಡ ಹೇಳಿದೆ.

ಚಿತ್ರದಲ್ಲಿ ಸೆಂಚುರಿ ಗೌಡ ಅವರೂ ಕಾಣಿಸಿಕೊಂಡಿದ್ದಾರೆ. ಕೀರ್ತಿಕೃಷ್ಣ ಅವರು ಚಿತ್ರದ ನಾಯಕ. ಲೀನಾ ಮತ್ತು ಅಂಜಶ್ರೀ ನಾಯಕಿಯರು.

‘ನನಗೆ ಸಿನಿಮಾ ಕ್ಷೇತ್ರದಲ್ಲಿ ಮೊದಲು ಅಷ್ಟೊಂದು ಆಸಕ್ತಿ ಇರಲಿಲ್ಲ. ಆದರೆ, ಮಗನ ಆಸೆಯ ಕಾರಣದಿಂದಾಗಿ ಚಿತ್ರಕ್ಕೆ ಬಂಡವಾಳ ಹೂಡಿದ್ದೇನೆ. ಈ ಚಿತ್ರದ ಮೂಲಕ ನಾನು ಹಣ ಗಳಿಸಿದರೆ, ಅದನ್ನು ಬಳಸಿ ಹೊಸಬರಿಗೆ ಅವಕಾಶ ಕಲ್ಪಿಸುವ ಕೆಲಸ ಮಾಡುವ ಆಲೋಚನೆ ಇದೆ’ ಎಂದರು ನಿರ್ಮಾಪಕ ಪಿ. ಕೃಷ್ಣಪ್ಪ.

‘ನಿರ್ದೇಶಕರು ನನ್ನಿಂದ ಬಯಸಿದ್ದನ್ನು ಮಾಡಿದ್ದೇನೆ. ನಟನೆ ಕಷ್ಟ ಎಂದು ಅನಿಸಲಿಲ್ಲ’ ಎಂದು ಹೇಳಿದರು ಕೀರ್ತಿಕೃಷ್ಣ.


ಕೀರ್ತಿ ಕೃಷ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT