ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಟಗಿ ಆಸ್ಪತ್ರೆ: ವೆಂಟಿಲೇಟರ್ ಇಲ್ಲ

100 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಸಾರ್ವಜನಿಕರ ಒತ್ತಾಯ
Last Updated 9 ಏಪ್ರಿಲ್ 2020, 9:00 IST
ಅಕ್ಷರ ಗಾತ್ರ

ಕಾರಟಗಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಮದುಗಣಗಿತ್ತಿಯಂತೆ ಶೃಂಗಾರಗೊಂಡಿದೆ. ಒಳ ಪ್ರವೇಶಿಸಿದರೆ ಆವಣಗೋಡೆಗಳಲ್ಲಿ ಬರೆದಿರುವ ಘೋಷಣೆಗಳನ್ನು ಓದಿಯೇ ಮುಂದೆ ಹೋಗಬೇಕು ಎನ್ನುವಂತಿದೆ.

ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿವಿಧ ವಿಭಾಗಗಳ ಕೊಠಡಿಗಳು ಆಧುನೀಕರಣಗೊಂಡಿವೆ. ತಜ್ಞರು ಪರಿಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ತಾಲ್ಲೂಕು ಕೇಂದ್ರ ಆದರೂ ಜನದಟ್ಟಣೆಗೆ ತಕ್ಕಂತೆ 100 ಹಾಸಿಗೆ ಆಸ್ಪತ್ರೆಯಾಗಬೇಕು ಎಂಬುದು ಸರ್ಕಾರದ, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಆಗಿಲ್ಲ.

ಆದರೀಗ ಆಸ್ಪತ್ರೆಯ ಮೂಲೆ, ಮೂಲೆಗಳಲ್ಲಿ ಕೋವಿಡ್‌– 19 ಸಪ್ಪಳವೇ ಕೇಳಿಬರುತ್ತಿದೆ. ವೈದ್ಯರು, ಸಿಬ್ಬಂದಿ ಒಗ್ಗಟ್ಟಿನಿಂದ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಕೊರೊನಾ ವೈರಸ್‌ ಹರಡಂತೆ ವಿವಿಧ ಹಂತದ ತಂಡಗಳನ್ನು ರಚಿಸಿಕೊಂಡು ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಪಟ್ಟಣ ಸಹಿತ 22 ಗ್ರಾಮಗಳಲ್ಲಿಯ ಮನೆ, ಮನೆಗಳಿಗೆ ತೆರಳಿ ಸರ್ವೆ, ಕೊರೊನಾ ಶಂಕಿತ ವ್ಯಕ್ತಿಗಳನ್ನು ಗುರುತಿಸುವುದು, ವಿವಿಧ ಜಿಲ್ಲೆ, ರಾಜ್ಯದಿಂದ ಬಂದವರನ್ನು ಆಸ್ಪತ್ರೆಗೆ ಕರೆತಂದು ಪರೀಕ್ಷಿಸಿ, ಅಗತ್ಯವೆನಿಸಿದರೆ ವ್ಯವಸ್ಥೆ ಇರುವ ಮೇಲ್ದರ್ಜೆಯ ಆಸ್ಪತ್ರೆಗಳಿಗೆ ಕಳುಹಿಸುವುದು ನಡೆದಿದೆ.

ಪಟ್ಟಣದ ಓಣಿ, ಓಣಿಗಳಲ್ಲಿ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಆರೋಗ್ಯ ಇಲಾಖೆ ಸಿಬ್ಬಂದು ನಿರತರಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಇಲ್ಲಿಯವರೆಗೂ ವರದಿಯಾಗಿಲ್ಲ ಎಂಬುದೇ ಸಮಾಧಾನದ ಸಂಗತಿ.

ಪಟ್ಟಣದ ಜನರ ಪುಣ್ಯ ಎಂಬಂತೆ ಇರುವ ವೈದ್ಯರು, ಸಿಬ್ಬಂದಿ ಹಗಲಿರುಳು ಶಕ್ತಿಮೀರಿ ಕೆಲಸ ಮಾಡುತ್ತಿರುವುದರಿಂದ ‘ಇಲ್ಲ’ಗಳ ಮಧ್ಯೆ ಖಾಸಗಿ ಆಸ್ಪತ್ರೆಯನ್ನೂ ಮೀರಿಸುವಂತೆ ಸೇವೆಗಳು ಜನರಿಗೆ ದಕ್ಕುತ್ತಿವೆ ಎಂಬುದೇ ಸಮಾಧಾನದ ಸಂಗತಿ.

ಆಡಳಿತ ವೈದ್ಯಾಧಿಕಾರಿ ಡಾ.ಶಕುಂತಲಾ ಪಾಟೀಲ (ಸ್ತ್ರೀ ರೋಗ ತಜ್ಞರು), ಡಾ. ನಾಗರಾಜ್ (ಮಕ್ಕಳ ತಜ್ಞ), ಡಾ. ಪ್ರಿಯಾಂಕ (ಅರವಳಿಕೆ ತಜ್ಞರು), ಗೌರಿಶಂಕರ (ಹಿರಿಯ ವೈದ್ಯರು), ಡಾ. ಪರಿಮಳ (ದಂತ ತಜ್ಞರು), ಇಬ್ಬರು ಫಾರ್ಮಾಸಿಸ್ಟ್‌, 8 ನರ್ಸ್, ಇಬ್ಬರು ಲ್ಯಾಬ್ ಟೆಕ್ನಿಷನ್, ಇಬ್ಬರು ಐಸಿಟಿಸಿ, ಒಬ್ಬರು ಎಫ್‌ಡ್ಲ್ಯಸಿ, 5 ಎಎನ್‌ಎಂ, 1ಎಲ್‌ಎಚ್‌ಒ, 10 ಡಿ. ಗ್ರೂಪ್‌ ನೌಕರರು, ಆಶಾ ಕಾರ್ಯಕರ್ತರು ಕೊರೊನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ಯಶಸ್ವಿಯ ಹಾದಿಯಲ್ಲಿದ್ದಾರೆ.

‘ಕೊರೊನಾ ಶಂಕಿತರನ್ನು ಪರೀಕ್ಷಿಸಲು ಸುಸಜ್ಜಿತ ವಾರ್ಡ್ ಸಿದ್ಧಪಡಿಸಲಾಗಿದೆ. ವಿದೇಶದಿಂದ ಬಂದಿದ್ದ ಪಟ್ಟಣದ ಒಬ್ಬರು, ಮರ್ಲಾನಹಳ್ಲಿಯ ಇಬ್ಬರು, ಎಚ್‌.ಬಸವಣ್ಣಕ್ಯಾಂಪ್‌ನ ಒಬ್ಬರಿಗೆ ಪರೀಕ್ಷಿಸಿ, ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದಿರುವುದರಿಂದ ಹೋಮ್ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ದೆಹಲಿಯಿಂದ ಆಗಮಿಸಿದ್ದ 9 ಜನರ ಸ್ಕ್ರೀನಿಂಗ್ ಮಾಡಿ, ಗಂಗಾವತಿಯ ಹೋಂ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ. ಬಿಹಾರದ 16 ಕಾರ್ಮಿಕರನ್ನು ಪರೀಕ್ಷಿಸಿ ಜಾಗರೂಕತೆಯಿಂದ ಇರುವಂತೆ ಸೂಚಿಸಲಾಗಿದೆ. ಯಾವುದೇ ಆತಂಕಕಾರಿ ಪ್ರಕರಣಗಳಿಲ್ಲ ಎಂಬುದೇ ಸಮಾಧಾನದ ಸಂಗತಿ’ ಎಂದು ಆಡಳಿತ ವೈದ್ಯಾಧಿಕಾರಿ ಡಾ. ಶಕುಂತಲಾ ಪಾಟೀಲ ಹೇಳಿದರು. ಡಾ. ನಾಗರಾಜ್ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT