ಕೊಪ್ಪಳ: ಶಕ್ತಿಪೀಠ ಎಂದೇ ಹೆಸರಾದ ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿಯ ಮಹಾರಥೋತ್ಸವ ಸೋಮವಾರ ಸಂಭ್ರಮದಿಂದ ನೆರವೇರಿತು. ಗೋಧೂಳಿ ಸಮಯಕ್ಕೆ ನಡೆದ ರಥೋತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳು, ಆಂಧ್ರ, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದ ಬಂದಿದ್ದ ಲಕ್ಷಾಂತರ ಭಕ್ತರು ಸಾಕ್ಷಿಯಾದರು.

ದೇವಿಗೆ ಹೊರಕೆ ಹೊತ್ತವರು ರಥೋತ್ಸವಕ್ಕೂ ಮೊದಲು ತೇರಿನ ಮುಂಭಾಗದಲ್ಲಿ ಕುಣಿದು ಸಂಭ್ರಮಿಸಿದರು. ಮುಖಕ್ಕೆ ಭಂಡಾರ ಹಚ್ಚಿಕೊಂಡು ಕುಣಿಯುತ್ತಿದ್ದಾಗ ಅವರಲ್ಲಿ ಭಕ್ತಿಯ ಭಾವ ಹೊರಹೊಮ್ಮುತ್ತಿತ್ತು. ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಸ್ಥಾನಕ್ಕೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವುದು ಸಾಮಾನ್ಯ.

ಈ ಬಾರಿ ರಥೋತ್ಸವದ ಮರುದಿನವೇ ಮಂಗಳವಾರ ಬಂದಿರುವುದರಿಂದ ರಾತ್ರಿಯಾಗುತ್ತಿದ್ದಂತೆಯೇ ದೇವಸ್ಥಾನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು. ಬಹಳಷ್ಟು ಭಕ್ತರು ತೇರಿನ ಸಮಯಕ್ಕೆ ಬಂದು ಮಂಗಳವಾರವೂ ದರ್ಶನ ಪಡೆದುಕೊಂಡು ವಾಪಸ್ ಹೋಗುವುದು ವಾಡಿಕೆ.

ಹುಲಿಗೆಮ್ಮದೇವಿ ಮೂರ್ತಿಯೊಂದಿಗೆ ಸಾಗಿದ ತೇರು ಪಾದಗಟ್ಟೆ ತಲುಪಿ ಮರಳಿ ಸ್ವಸ್ಥಾನಕ್ಕೆ ಬಂದು ಸೇರುತ್ತಿದ್ದಂತೆ ಭಕ್ತ ಸಮೂಹದಿಂದ ಕರತಾಡನ ಕೇಳಿ ಬಂದಿತು. ಉಧೋ ಉಧೋ ಎನ್ನುವ ಉದ್ಘೋಷಗಳು ಮೊಳಗಿದವರು. ಜನ ಭಕ್ತಿಯಿಂದ ಉತ್ತುತ್ತಿ ಹಾಗೂ ಬಾಳೆಹಣ್ಣು ಎಸೆದು ನಮಸ್ಕರಿಸಿ ಧನ್ಯತೆಯ ಭಾವ ಮೆರೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.