ಕೊಪ್ಪಳ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದಲಾವಣೆಗೆ ಪಕ್ಷ ನಿರ್ಧರಿಸಿದರೆ ಕಡ್ಡಾಯವಾಗಿ ಶಾಸಕರ ಅಭಿಪ್ರಾಯ ಕೇಳಬೇಕು, ಅವರಿಗೆ ಪರ್ಯಾಯವಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಬೇಕು’ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರೂ ಆದ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ತಾಲ್ಲೂಕಿನ ಕೋಳೂರು–ಕಾಟ್ರಳ್ಳಿಯಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಡಿ.ಕೆ.ಶಿವಕುಮಾರ್ ಸಿ.ಎಂ. ಆಗಬಾರದು ಎಂದು ನಾನು ಹೇಳಿಲ್ಲ, ಸಿಎಂ ಆಗುತ್ತೇನೆ ಎಂದು ಶಿವಕುಮಾರ್ ಎಲ್ಲಿಯಾದರೂ ಹೇಳಿದ್ದಾರೆಯೇ’ ಎಂದು ಪ್ರಶ್ನಿಸಿದರು.

‘ನಾನು ಯಾರ ಬೆಂಬಲಿಗನೂ ಅಲ್ಲ. ಕಾಂಗ್ರೆಸ್ ಪಕ್ಷದ ಬೆಂಬಲಿಗ. ಸಿದ್ದರಾಮಯ್ಯನವರ ಆಡಳಿತ ವೈಖರಿ ಚೆನ್ನಾಗಿದ್ದು, ಅವರ ಬಗ್ಗೆ ಪ್ರೀತಿಯಿದೆ. ಆದ್ದರಿಂದ ಅವರ ಪರವಾಗಿ ಮಾತನಾಡುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

ನೀವು ಸಚಿವ ಸ್ಥಾನದ ಆಕಾಂಕ್ಷಿಯೇ ಎನ್ನುವ ಪ್ರಶ್ನೆಗೆ, ‘ಈ ಬಗ್ಗೆ ಪಕ್ಷ ತೀರ್ಮಾನಿಸುತ್ತದೆ. ಆದರೆ ಸಚಿವ ಸ್ಥಾನ ನೀಡುವಂತೆ ಖರ್ಗೆ ಅವರ ಬಳಿ ಕೇಳಿಲ್ಲ ಎಂದು ತಿಳಿಸಿದರು.

ಮಗು ಅಳದಿದ್ದರೆ ತಾಯಿಯೇ ಹಾಲು ಕೊಡುವುದಿಲ್ಲ; ಇನ್ನು ಸಚಿವ ಸ್ಥಾನವನ್ನು ಖರ್ಗೆ ಅವರ ಬಳಿ ಕೇಳದಿದ್ದರೂ ಹೇಗೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ‘ನಿಜವಾದ ತಾಯಿ ಖಂಡಿತವಾಗಿಯೂ ಹಾಲು ಕೊಡುತ್ತಾಳೆ’ ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.