ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸ್ಸು ಸರಿಯಿದ್ದರೆ ಜೀವನ ಸುಂದರ: ಕೆ.ಜಿ. ಕುಲಕರ್ಣಿ

Last Updated 6 ಜುಲೈ 2022, 16:02 IST
ಅಕ್ಷರ ಗಾತ್ರ

ಕೊಪ್ಪಳ: ‘ಸಮಾಜದಲ್ಲಿ ವೈದ್ಯಕೀಯ ವೃತ್ತಿಗೆ ಗೌರವದ ಸ್ಥಾನವಿದೆ. ವೈದ್ಯರು ದೇಹಕ್ಕೆ ಚಿಕಿತ್ಸೆ ಕೊಟ್ಟರೆ, ಚಿಂತೆ, ಒತ್ತಡದಂತಹ ಮನಸ್ಸಿನ ರೋಗಗಳಿಗೆ ಈಶ್ವರೀಯ ವಿಶ್ವವಿದ್ಯಾಲಯ ಚಿಕಿತ್ಸೆ ಹಾಗೂ ಮಾರ್ಗದರ್ಶನ’ ನೀಡುತ್ತದೆ ಎಂದು ಹಿರಿಯ ವೈದ್ಯ ಕೆ.ಜಿ. ಕುಲಕರ್ಣಿ ಹೇಳಿದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಮಂಗಳವಾರ ನಡೆದ ವೈದ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಮನಸ್ಸು ಸರಿ ಇದ್ದರೆ ಮಾತ್ರ ಸುಂದರ ಹಾಗೂ ಆರೋಗ್ಯವಂತ ಜೀವನ ನಡೆಸಲು ಸಾಧ್ಯವಾಗುತ್ತದೆ’ ಎಂದರು.

ಬ್ರಹ್ಮಕುಮಾರಿ ಯೋಗಿನಿ ಮಾತನಾಡಿ ‘ಪರಮಾತ್ಮ ಹೇಗೆ ಎಲ್ಲರ ದುಃಖ ದೂರ ಮಾಡುತ್ತಾನೋ ಹಾಗೆ ವೈದ್ಯರು ಶರೀರಕ್ಕಾದ ನೋವನ್ನು ದೂರ ಮಾಡುತ್ತಾರೆ’ ಎಂದರು.

ಡಾ. ಬಸವರಾಜ್ ಸಜ್ಜನ್, ಡಾ. ಅಜಯ್ ಬಾಚಲಾಪುರ್, ಡಾ. ಪ್ರಭುದೇವ್, ಡಾ. ಲಕ್ಷ್ಮಿಕಾಂತ್, ಡಾ. ಸಚಿನ್, ಡಾ. ಕಸ್ತೂರಿ, ಡಾ. ರಾಧಾ,ಡಾ. ಹರ್ಷಶ್ರೀ, ಡಾ.ಸುಮಂಗಲ ಉಪಸ್ಥಿತರಿದ್ದರು. ಬಿ.ಕೆ ಸ್ನೇಹಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT