ಕೊಪ್ಪಳ: ‘ನಾವು ಸ್ನೇಹಕ್ಕೆ ಗೌರವ ಕೊಟ್ಟು ಕದನ ವಿರಾಮ ಹೇಳಿದ್ದೇವೆ. ಇದರ ಅರ್ಥ ಇಡೀ ಜಗತ್ತಿನ ಜೊತೆ ಒಳ್ಳೆ ಸ್ನೇಹ ಬೆಳೆಸೋದು’ ಎಂದು ಭೋವಿ ಸಮುದಾಯದ ಇಮ್ಮಡಿ ಸಿದ್ದರಾಮೇಶ್ವರಶ್ರೀ ಹೇಳಿದರು.

ನಗರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಇದನ್ನು ಪಕ್ಕದ ರಾಷ್ಟ್ರ ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮತ್ತೆ ಕ್ರಾಂತಿ ಮೊಳಗಿಸೋದು ಅನಿವಾರ್ಯ’ ಎಂದರು.

ಅಮೆರಿಕ ಮತ್ತು ನಮ್ಮ ನಡುವೆ ಸೌಹಾರ್ದ ವಾತಾವರಣ ಇದೆ. ಹೀಗಾಗಿ ಅವರಿಗೆ ಗೌರವ ಕೊಡೋ ಕಾರಣಕ್ಕೆ ಕದನ ವಿರಾಮ ಒಪ್ಪಿಕೊಂಡಿದ್ದೇವೆ. ಭಾರತ ಜಗತ್ತಿಗೆ ಶಾಂತಿಧೂತ ರಾಷ್ಟ್ರ. ನಮ್ಮ ಮನೆಯವರಿಗೆ ತೊಂದರೆ ಕೊಟ್ಟರೆ ಶಾಂತಿ ಬೋಧಿಸೋಕೆ ಆಗಲ್ಲ. ಶಸ್ತ್ರ ಹಿಡಿದುಕೊಳ್ಳಲೆಬೇಕು’ ಎಂದರು.

‘ಕದನ ವಿರಾಮ ಮಾಡಿರೋದು ಒಳ್ಳೆಯದಲ್ಲ. ನಮಗೆ ಶಾಂತಿ ಬೋಧನೆ ಮಾಡಿದ ರಾಷ್ಟ್ರಗಳು ಇದೀಗ ಭಯೋತ್ಪಾದಕರನ್ನು ಅಟ್ಟಾಡಿಸೋ ಕೆಲಸ ಮಾಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.