ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಕ್ರಮ ಮರಳು ಬಗ್ಗೆ ಮಾಹಿತಿ ನೀಡಿ : ತಹಶೀಲ್ದಾರ್ ರವಿ ಅಂಗಡಿ

Last Updated 26 ಡಿಸೆಂಬರ್ 2019, 11:03 IST
ಅಕ್ಷರ ಗಾತ್ರ

ಕನಕಗಿರಿ: ‘ಗ್ರಾಮದಲ್ಲಿ ಅಕ್ರಮ ಮರಳು ಸಾಗಾಣೆ ಮಾಡುವುದು ಕಂಡು ಬಂದರೆ, ಮಾಹಿತಿ ನೀಡಬೇಕು’ ಎಂದು ತಹಶೀಲ್ದಾರ್ ರವಿ ಅಂಗಡಿ ತಿಳಿಸಿದರು.

ಸಮೀಪದ ಯತ್ನಟ್ಟಿ ಗ್ರಾಮದಲ್ಲಿ ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿದಂತೆ ನಡೆದ ಗ್ರಾಮಸ್ಥರ ಸಭೆಯಲ್ಲಿ ಅವರು ಮಾತನಾಡಿದರು.

ಅಕ್ರಮ ಮರಳು ಸಾಗಾಣಿಕೆ ತಡೆ ಹಿಡಿಯುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ ಎಂದರು.

ಹಗಲಿರುಳು ಎನ್ನದೆ ಭಾರಿ ವಾಹನಗಳು ಓಡಾಡುತ್ತಿರುವ ಪರಿಣಾಮ ಕನಕಗಿರಿ ನೀರ್ಲೂಟಿ, ಗುಡದೂರು, ಈಚನಾಳ ಗ್ರಾಮದ ರಸ್ತೆಗಳು ತೀರ ಹದಗೆಟ್ಟಿದ್ದು, ದಂಧೆಕೋರರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಕರಡೋಣಿ, ಕೆ.ಮಲ್ಲಾಪೂರ, ಯತ್ನಟ್ಟಿ, ಬುನ್ನಟ್ಟಿ, ಕ್ಯಾರಿಹಾಳ, ಉದ್ದಿಹಾಳ, ಸಿರವಾರ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT