ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ನಡೆದ ಛಾಯಾಗ್ರಹಣ ಸ್ಪರ್ಧೆ: ಪ್ರಕಾಶ ಕಂದಕೂರಗೆ ಚಿನ್ನದ ಪದಕ

Last Updated 18 ಡಿಸೆಂಬರ್ 2022, 7:06 IST
ಅಕ್ಷರ ಗಾತ್ರ

ಕೊಪ್ಪಳ: ಚೀನಾದಲ್ಲಿ ನಡೆದ 3ನೇ ಕಂಟ್ರಿ ಆಫ್ ಹೆವನ್-2022' ಅಂತರರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆಯಲ್ಲಿ ನಗರದ ಛಾಯಾಗ್ರಾಹಕ ಪ್ರಕಾಶ ಕಂದಕೂರ ‘ಫೊಟೋಗ್ರಾಫಿಕ್ ಸೊಸೈಟಿ ಆಫ್ ಮಲೇಷ್ಯಾ’ದ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಅವರ `ದಿ ಫೀಯರ್' ಶೀರ್ಷಿಕೆಯ ಚಿತ್ರ ಸ್ಪರ್ಧೆಯ ‘ಹ್ಯೂಮನ್ ಆ್ಯಕ್ಟಿವಿಟಿ' ವಿಭಾಗದಲ್ಲಿ ಈ ಪದಕಕ್ಕೆ ಭಾಜನವಾಗಿದ್ದು, ಎರಡು ಗೌರವ ಕೂಡ ಪಡೆದುಕೊಂಡಿದೆ. ‘ಫ್ರೆಂಡ್‍ಶಿಪ್’ ಶೀರ್ಷಿಕೆಯ ಅವರ ಮತ್ತೊಂದು ಚಿತ್ರ ಸಹ ಇದೇ ಸ್ಪರ್ಧೆಯಲ್ಲಿ ಏಷಿಯಾ ಫೋಟೋಗ್ರಾಫರ್ಸ್ ಯೂನಿಯನ್‌ನ ಬೆಳ್ಳಿ ಪದಕ ಜಯಿಸಿದೆ.

ಪ್ರತಿಷ್ಠಿತ ಎನಿಸಿಕೊಂಡಿರುವ ಈ ಛಾಯಾಗ್ರಹಣ ಸ್ಪರ್ಧೆಯಲ್ಲಿ ಈ ಬಾರಿ ಜಗತ್ತಿನ 71 ದೇಶಗಳ 1,770 ಜನ ಛಾಯಾಗ್ರಾಹಕರ 20 ಸಾವಿರಕ್ಕೂ ಹೆಚ್ಚು ಚಿತ್ರಗಳು ಭಾಗವಹಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT