ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶ್ವರ ದೇವರ ರಥೋತ್ಸವ

Last Updated 27 ಡಿಸೆಂಬರ್ 2019, 12:40 IST
ಅಕ್ಷರ ಗಾತ್ರ

ಕಾರಟಗಿ: ತಾಲ್ಲೂಕಿನ ಸಿದ್ದಾಪುರದಲ್ಲಿ ಈಶ್ವರ ದೇವರ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಈಚೆಗೆ ಜರುಗಿತು.

ರಥೋತ್ಸವಕ್ಕೆ ಹೆಬ್ಬಾಳ ಬಾಗೋಡಿ ಬಸವೇಶ್ವರ ಸಂಸ್ಥಾನದ ಡಾ. ನಾಗಭೂಷಣ ಶಿವಾಚಾರ್ಯರು ಚಾಲನೆ ನೀಡಿದರು.

ಈಶ್ವರ ದೇವಾಲಯದಿಂದ ಆರಂಭಗೊಂಡ ರಥೋತ್ಸವ ಬಸ್ ನಿಲ್ದಾಣ ರಸ್ತೆ ಮೂಲಕ ಗೂಳಿ ಬಸವೇಶ್ವರ ದೇವಸ್ಥಾನದ ಪಾದಗಟ್ಟೆ ತಲುಪಿ ವಾಪಸ್‌ ದೇವಾಲಯಕ್ಕೆ
ಆಗಮಿಸಿತು.

ಗ್ರಾಮದ ಹಿರೇಮಠದವರು ರಥಕ್ಕೆ ಕಳಸದ ಸೇವೆ, ಹಾಲುಮತ ಸಮುದಾಯ ಹಗ್ಗದ ಸೇವೆ, ನಾಯಕ ಜನಾಂಗದವರು ರಥದ ಗಾಲಿಯ ಹುಟ್ಟಿನ ಸೇವೆ, ಮುಸ್ಲಿಂ ಸಮಾಜದವರು ರಥಕ್ಕೆ 25 ಅಡಿ ಉದ್ದದ ರುದ್ರಾಕ್ಷಿ ಮಾಲೆ ಹಾಕಿ ಭಕ್ತಿ ಮೆರೆದರು.

ಈಶ್ವರ, ಶರಣಬಸವೇಶ್ವರ, ವೆಂಕಟೇಶ್ವರ, ಮಾರುತೇಶ್ವರರಿಗೆ ವಿಶೇಷ ಪೂಜೆ, ಹೊಮ, ಹವನ, ಬಿಲ್ವಾರ್ಚನೆ, ಅಲಂಕಾರ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಬುಕ್ಕಸಾಗರದ ವಿಶ್ವಾರಾಧ್ಯ ಕರಿಸಿದ್ದೇಶ್ವರ ಸ್ವಾಮೀಜಿ, ಹಿರೇಮಠದ ಉಮೇಶಸ್ವಾಮಿ, ಶಿವಕುಮಾರ ಸ್ವಾಮಿ, ಗಣೇಶಸ್ವಾಮಿ, ಕಾರಟಗಿ ವಿಶೇಷ ಎಪಿಎಂಸಿಅದ್ಯಕ್ಷ ಶರಣಪ್ಪ ಭಾವಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾದ್ಯಕ್ಷ ಬಿ. ಬಸವರಾಜಪ್ಪ, ಡಾ. ಕೆ. ಎನ್. ಪಾಟೀಲ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ
ಬಸವರಾಜ ನೀರಗಂಟಿ, ಎಪಿಎಂಸಿ ಮಾಜಿ ಸದಸ್ಯ ಜನಗಂಡೆಪ್ಪ ಪೂಜಾರ, ಚಂದ್ರಶೇಖರಗೌಡ ಪೊಲೀಸ್ ಪಾಟೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT