ಹಲ್ಲೆ; ಜೈನ್‌ ಸಂಘ ಪ್ರತಿಭಟನೆ

7

ಹಲ್ಲೆ; ಜೈನ್‌ ಸಂಘ ಪ್ರತಿಭಟನೆ

Published:
Updated:
Deccan Herald

ಕೊಪ್ಪಳ: ಸವದತ್ತಿಯಲ್ಲಿ ಇತ್ತೀಚೆಗೆ ಸಮಾಜಸೇವಕ ಆನಂದ ಛೋಪ್ರಾ ಅವರ ಮೇಲೆ ನಡೆದ ಹಲ್ಲೆ ಖಂಡಿಸಿ ನಗರದಲ್ಲಿ ಮಂಗಳವಾರ ರಾಜಸ್ತಾನಿ ಮತ್ತು ಗುಜರಾತ್ ಸಂಘಗಳ ಒಕ್ಕೂಟದ ಸದಸ್ಯರು ಬೈಕ್‌ ರ‍್ಯಾಲಿ ಕೈಗೊಂಡು ಮೌನ ಪ್ರತಿಭಟನೆ ನಡೆಸಿದರು.

ಹಲ್ಲೆ ಮಾಡಿದ ದುಷ್ಕರ್ಮಿಗಳಿಗೆ ಶಿಕ್ಷೆ ನೀಡಬೇಕು.ಆನಂದ ಛೋಪ್ರಾ ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ನಗರದ ಗೋಶಾಲೆ ರಸ್ತೆಯಲ್ಲಿರುವ ತೇರಾಪಂಥ ಭವನದಿಂದ ಆರಂಭಗೊಂಡ ರ‍್ಯಾಲಿ ಅಶೋಕ ವೃತ್ತದ ಮಾರ್ಗವಾಗಿ ಜಿಲ್ಲಾಡಳಿತ ಭವನ ತಲುಪಿತು.

ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ಓಂ ಪ್ರಕಾಶ, ಪವರಲಾಲ್‌ ಜೈನ್‌, ರಾಮಗೋಪಾಲ ಜೀ, ಗೌತಮ್ ಪಿ. ಮೆಹೆತಾ, ಮಹಾವೀರ ಮಹೆತಾ, ಅಶ್ವಿನ್‌ ಜಾಂಗ್ಡಾ, ಮನೋಜ್‌ ಛೋಪ್ರಾ, ಮಹೇಂದ್ರ ಲುಂಖಡ್‌, ಪರಶುರಾಮ್‌ ಚಂಡಕ್‌, ಬ್ರಿಜ್‌ಗೋಪಾಲ್‌ ಜೋಷಿ, ಪವನ್ ಶರ್ಮಾ, ಲುಂಗರ್‌ರಾಮ್‌, ಕಾಂತಿಲಾಲ್‌ ಛೋಪ್ರಾ, ವಿಮಲ್‌ ಜಾಂಗ್ಡಾ, ಗೌತಮ್ ದಾನೇ ಶಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !