19ರಂದು ಜೋಕುಮಾರಸ್ವಾಮಿ ನಾಟಕ ಪ್ರದರ್ಶನ

7

19ರಂದು ಜೋಕುಮಾರಸ್ವಾಮಿ ನಾಟಕ ಪ್ರದರ್ಶನ

Published:
Updated:
Prajavani

ಗಂಗಾವತಿ: ಶಿವಯೋಗಿ ಚನ್ನಬಸವ ತಾತನ ಜಾತ್ರೆ ಮತ್ತು ರಥೋತ್ಸವದ ನಿಮಿತ್ತ ಜ.19ರಂದು ನಗರದ ನೀಲಕಂಠೇಶ್ವರ ವೃತ್ತದಲ್ಲಿರುವ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಾಟಕ ಪ್ರದರ್ಶನವಾಗಲಿದೆ.

ನಾಟಕಕ್ಕೆ ಸಾಹಿತಿ ಚಂದ್ರಶೇಖರ ಕಂಬಾರ ಅವರ ಸಾಹಿತ್ಯ ಬಳಸಿಕೊಳ್ಳಲಾಗಿದೆ. ನಗರದ ಸವಿ ಕಲಾ ವೇದಿಕೆ, ಕನ್ನಡ ಸೇನೆ, ಜೈಭಾರತ ಯುವ ಸೇನೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಾಟಕ ಪ್ರದರ್ಶನವಾಗಲಿದೆ ಎಂದು ರಂಗವೇದಿಕೆಯ ನಿರ್ವಾಹಕ ರಮೇಶ ಜೋಗೀನ್ ತಿಳಿಸಿದ್ದಾರೆ. 

ಹಿರಿಯ ರಂಗಕರ್ಮಿ ಪರಶುರಾಮ ಪ್ರಿಯಾ ಅವರ ಮಾರ್ಗದರ್ಶನದಲ್ಲಿ ರಂಗಸಜ್ಜಿಕೆ ನಿರ್ಮಿಸಲಾಗಿದೆ.  ಹಿರಿಯ ನಿರ್ದೇಶಕ ವೈ.ಕೆ. ಹನುಮಂತಪ್ಪ ನಾಟಕ ನಿರ್ದೇಶಿಸಿದ್ದಾರೆ. ಪತ್ರಕರ್ತರಾದ ಬಸವರಾಜ ತೊಂಡಿಹಾಳ, ವೆಂಕಟೇಶ ಹೊಸಳ್ಳಿ ಅಭಿನಯಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !