ಕನಕಗಿರಿ: ವಿವಿಧ ಸರ್ಕಾರಿ ಕಚೇರಿ ಹಾಗೂ ಭಗೀರಥ ವೃತ್ತದಲ್ಲಿ ಮಹರ್ಷಿ ಭಗೀರಥ ಜಯಂತಿಯನ್ನು ಗುರುವಾರ ಆಚರಿಸಲಾಯಿತು.

ತಾಲ್ಲೂಕು ಆಡಳಿತ ಹಾಗೂ ಭಗೀರಥ ಸಮಾಜದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ವಿಶ್ವನಾಥ ಮುರುಡಿ ಭಾವಚಿತ್ರಕ್ಕೆ ಮಾಲಾರ್ಪಣೆ ಸಲ್ಲಿಸಿದರು. ‘ಅಸಾಧ್ಯವಾದುದನ್ನು ಸಾಧಿಸಲು ಮಾಡುವ ಅತ್ಯಂತ ಕಠಿಣ ಪರಿಶ್ರಮವನ್ನು ಭಗೀರಥ ಪ್ರಯತ್ನ ಎಂದು ಕರೆಯಲಾಗುತ್ತದೆ. ಇಂತಹ ಮಹರ್ಷಿ ಹೆಸರು ಅಜರಾಮರ’ ಎಂದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರೂಪಾಕ್ಷಿ ಮಾತನಾಡಿ, ‘ಪ್ರಯತ್ನಕ್ಕೆ ಮತ್ತೊಂದು ಹೆಸರೇ ಮಹರ್ಷಿ ಭಗೀರಥ. ಭಗೀರಥರ ತಪಸ್ಸಿನ ಫಲವಾಗಿ ಹರಿದು ಬಂದ ಗಂಗೆಯನ್ನು ಭಾಗಿರಥಿ ಎಂದೇ ಕರೆಯುತ್ತಾರೆ’ ಎಂದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ, ದುರ್ಗಾಸಿಂಗ್, ಸದಸ್ಯರಾದ ಹನುಮಂತಪ್ಪ ಬಸರಿಗಿಡದ, ಶೇಷಪ್ಪ ಪೂಜಾರ, ರಾಖೇಶ ಕಂಪ್ಲಿ, ಉಪ್ಪಾರ ಸಮಾಜದ ನಾಗೇಶ ಪೂಜಾರ, ಸುರೇಶ ಪೂಜಾರ, ವೆಂಕೋಬ ಪೂಜಾರ, ವೆಂಕಟೇಶ ಪೂಜಾರ, ಹಾಜರಿದ್ದರು. ಪಟ್ಟಣ ಪಂಚಾಯಿತಿ, ತಹಶೀಲ್ದಾರ್ ಕಚೇರಿ ಸೇರಿ ವಿವಿಧೆಡೆ ಜಯಂತಿ ಆಚರಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-35-596108758

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.