ಕನಕಗಿರಿ: ತಾಲ್ಲೂಕಿನ ಚಿಕ್ಕಡಂಕನಕಲ್ ಗ್ರಾಮದಲ್ಲಿ ಭಾನುವಾರ ಭಗೀರಥ ಮಹರ್ಷಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಬೆಳಿಗ್ಗೆ ಭಗೀರಥ ಮಹರ್ಷಿ ಮೂರ್ತಿಗೆ ವಿಧಿವಿಧಾನಗಳ ಮೂಲಕ ಅಭಿಷೇಕ ಪೂಜೆ ನೆರವೇರಿಸಲಾಯಿತು. ಗ್ರಾಮದ ಎಡದಂಡೆ ಕಾಲುವೆಯಲ್ಲಿ ಗಂಗಾಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.

ಕುಂಭ ಕಳಸ, ಡೊಳ್ಳು, ತಾಷ, ಬಾಜಾ ಭಜಂತ್ರಿ ಇತರೆ ವಾದ್ಯಗಳು ಭಗೀರಥರ ಭಾವಚಿತ್ರದ ಮೆರವಣಿಗೆಗೆ ಮೆರಗು ತಂದವು. ಜಯಂತಿ ಅಂಗವಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಿಕ್ಕಡಂಕನಕಲ್ ಗ್ರಾಮದ ಉಪ್ಪಾರ ಸಮಾಜದಿಂದ ಸನ್ಮಾನಿಸಿ ಗೌರವಿಸಲಾಯಿತು.

ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಬೆಂಗಳೂರಿನ ಅಧ್ಯಕ್ಷ ಎನ್.ಎಸ್ ಪಾಟೀಲ ಮಾತನಾಡಿ, ‘ಕಠಿಣ ತಪಸ್ಸಿನ ಮೂಲಕ ಸ್ವರ್ಗದಲ್ಲಿದ್ದ ಗಂಗೆಯನ್ನು ಧರೆಗೆ ತಂದು, ಪೂರ್ವಜರ ಪಾಪ ವಿಮೋಚನೆ ಮಾಡಿದ ರಾಜರ್ಷಿ ಭಗೀರಥರು ಸದಾ ಸ್ಮರಣೀಯರು’ ಎಂದು ಸ್ಮರಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ನಿಂಗಪ್ಪ ಕಟ್ಟಿಮನಿ, ಅಮರೇಶಪ್ಪ ಗೌಡ್ರು, ಕೆರೆಯಪ್ಪ ಜಿನ್ನೂರು, ಹುಚ್ಚಪ್ಪ ಸಿಂಗನಾಳ, ನಿಂಗಪ್ಪ ಬೆಣಕಲ್, ವಿರುಪಣ್ಣ ಸಿಂಗನಾಳ, ಯಮನೂರಪ್ಪ ಮೇಸ್ತ್ರಿ, ಕೆರೆಯಪ್ಪ ಬುರುಡಿ, ಸೋಮನಾಥ ಕಟ್ಟಿಮನಿ, ಹನುಮಂತಪ್ಪ ಆದಾಪೂರ, ತಾಯಪ್ಪ ಕಟ್ಟಿಮನಿ, ಹನ್ಮಂತಪ್ಪ ಕಟ್ಟಿಮನಿ, ಮಂಜುನಾಥ ಸಾಲಗುಂದ, ಲಾಲಸಾಬ ಮುಜಾವರ, ಈಶಪ್ಪ ಕಟ್ಟಿಮನಿ, ನಾಗಪ್ಪ ಕಟ್ಟಿಮನಿ, ರಾಜಪ್ಪ ಕಟ್ಟಿಮನಿ ಸೇರಿದಂತೆ ಭಗೀರಪ್ಪ ಉಪ್ಪಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-35-900374678

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.