ಕನಕಗಿರಿ: ‘ವಾರ್ಡ್ ಸದಸ್ಯರು ಹಾಗೂ ಜನರ ಬಹುಬೇಡಿಕೆಯಂತೆ 17 ವಾರ್ಡ್ಗಳಲ್ಲಿ ಚರಂಡಿ, ಸಿಸಿ ರಸ್ತೆ ಹಾಗೂ ಪುಟ್ಪಾತ್ ನಿರ್ಮಾಣಕ್ಕೆ 2026-27ನೇ ಸಾಲಿನ ಬಜೆಟ್ನಲ್ಲಿ ಅನುದಾನ ನೀಡಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ತಿಳಿಸಿದರು.

ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಶನಿವಾರ ನಡೆದ 2026-27ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಖಾಲಿ ನಿವೇಶನಗಳ ಮಾಲೀಕರು ತೆರಿಗೆ ಹಣ ಪಾವತಿಸಿಲ್ಲ. ಇನ್ನೂ ಮುಂದೆ ನೀರಿನ ಶುಲ್ಕ, ತೆರಿಗೆ ಪಾವತಿಸಿದವರಿಗೆ ಮಾತ್ರ ಮನೆ, ನಿವೇಶನಕ್ಕೆ ಅವಶ್ಯವಿರುವ ಫಾರಂ-3 ದಾಖಲಾತಿ ಪತ್ರ ನೀಡಲಾಗುವುದು’ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಂಗಾಧರಸ್ವಾಮಿ ಕಲ್ಲಬಾಗಿಲಮಠ ಮಾತನಾಡಿ, ‘ಪಟ್ಟಣ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿ ಇಲ್ಲಿವರೆಗೆ 4 ವರ್ಷಗಳಾದರೂ ವಾರ್ಡ್ಗಳಲ್ಲಿ ಮೂಲಸೌಲಭ್ಯ ಒದಗಿಸಲು ಆಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕಚೇರಿ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯ ಅನಿಲಕುಮಾರ ಬಿಜ್ಜಳ ಅವರ ಮನೆ ಮುಂದಿನ ರಸ್ತೆಯಲ್ಲಿ ತಿರುಗಾಡದಂತಹ ವಾತಾವರಣವಿದೆ. ಕಳೆದ 6 ವರ್ಷಗಳಿಂದಲೂ ಒಂದೂ ಆಶ್ರಯಮನೆ ಮಂಜೂರಾಗಿಲ್ಲ. ಚರಂಡಿ, ಸಿಸಿ ರಸ್ತೆ ಇತರೆ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಸಲಹೆ ನೀಡಿದರು.

ಪುಟ್ಪಾತ್ ನಿರ್ಮಾಣ, ವಿದ್ಯುತ್ ದೀಪ ಅಳಪಡಿಸುವುದು, ನೀರಿನ ಪೊರೈಕೆ ಸೇರಿದಂತೆ ಇತರೆ ಸಮಸ್ಯೆಗಳನ್ನು ನೀಗಿಸಬೇಕು ಎಂದು ಗ್ರಾಮಸ್ಥರು ಕೋರಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತನುಶ್ರೀ ಟಿ.ಜೆ., ರಾಮಚಂದ್ರ ಮಾತನಾಡಿದರು. ದಲ್ಲಾಳಿ ವರ್ತಕರ ಸಂಘದ ಅಧ್ಯಕ್ಷ ಮಹಾಂತೇಶ ಸಜ್ಜನ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯರಾದ ಸಂಗಪ್ಪ ಸಜ್ಜನ, ಸುರೇಶ ಗುಗ್ಗಳಶೆಟ್ರ, ಅನಿಲಕುಮಾರ ಬಿಜ್ಜಳ, ಹನುಮಂತ ಬಸರಿಗಿಡ, ಶೇಷಪ್ಪ ಪೂಜಾರ, ರಾಕೇಶ ಕಂಪ್ಲಿ, ಸಿದ್ದೇಶ ಕಲುಬಾಗಿಲಮಠ, ರಾಜಾಸಾಬ ನಂದಾಪುರ, ಹುಸೇನಬಿ ಚಳ್ಳಮರದ, ನೂರುಸಾಬ ಗಡ್ಡಿಗಾಲ, ಪ್ರಮುಖರಾದ ಖಾದರಬಾಷ ಗುಡಿಹಿಂದಲ, ವೆಂಕೋಬ ಭೋವಿ, ಪ್ರಕಾಶ ಹಾದಿಮನಿ, ರವಿ ಪಾಟೀಲ, ಶಿವಕುಮಾರ ಕೋರಿ, ನಾಮನಿರ್ದೇಶಿತ ಸದಸ್ಯರಾದ ಗಂಗಾಧರ ಚೌಡ್ಕಿ, ಹನುಮೇಶ ಹಡಪದ, ಎಂಜಿನಿಯರ್ ಮಂಜುನಾಥ ನಾಯಕ, ಸಿಬ್ಬಂದಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-35-293956957

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.