ಕನಕಗಿರಿ: ಕೊಪ್ಪಳ ಜಿಲ್ಲೆಯ ಕನಕಗಿರಿಯ ಕನಕಾಚಲಪತಿ ಮಹಾ ರಥೋತ್ಸವದ ಮುನ್ನಾದಿನವಾದ ಮಂಗಳವಾರ ಗರುಡೋತ್ಸವ ನಸುಕಿನ ಜಾವ

ವಿಜೃಂಭಣೆಯಿಂದ ನಡೆಯಿತು.

ಈ ಉತ್ಸಾಹ ಹಾಗೂ ಸಂಭ್ರಮ ವೀಕ್ಷಣೆಗೆ ರಾಜಬೀದಿಯಲ್ಲಿ ಜನಸಾಗರವೆ ಹರಿದು ಬಂದಿತ್ತು. ದೇವಸ್ಥಾನದ ಪ್ರಾಂಗಣ, ಆವರಣ, ಮನೆ, ಮಾಳಿಗೆ ಹಾಗೂ ರಾಜಬೀದಿಯ ಎರಡು ಬದಿಯಲ್ಲಿ ನಿಂತು ಗರುಡೋತ್ಸವದ ಮೆರವಣಿಗೆಯ ಸಂಭ್ರಮವನ್ನು ಭಕ್ತರು ಕಣ್ಣು ತುಂಬಿಸಿಕೊಂಡರು.

ದೀವಟಗಿ, ಪಂಜಿನ ಬೆಳಕಿನಲ್ಲಿ ಕಂಗೊಳಿಸಿದ ಉತ್ಸವ ಗತ ವೈಭವವನ್ನು ಮೆಲುಕು ಹಾಕುವಂತೆ ಮಾಡಿದ್ದಲ್ಲದೆ ಜನಮನ ಸೂರೆಗೊಂಡಿತು.

ಕನಕಾಚಲಪತಿ ಹಾಗೂ ಲಕ್ಷ್ಮೀ ಕಲ್ಯಾಣೋತ್ಸವ ( ವಿವಾಹ) ನಸುಕಿನ ಜಾವ ನಡೆಯಿತು. ಅರ್ಚಕರು, ವೇದ, ಆಗಮ ಪಂಡಿತರ ವೇದ, ಮಂತ್ರ, ಘೋಷಣೆಗಳು ಮೊಳಗಿದವು. ಯುವಕರು, ಯುವತಿಯರು, ಮಕ್ಕಳು ಹೊಸ ಬಟ್ಟೆ ಧರಿಸಿ ಬಹು ಉತ್ಸಾಹದಿಂದಲೇ ಭಾಗವಹಿಸಿದ್ದರು. ಗರುಡೋತ್ಸವದ ಮುಂದೆ ಭಕ್ತರ ಕೈಯಲ್ಲಿದ್ದ ದೀವಟಗಿಯಲ್ಲಿ ಕರ್ಪೂರ, ಕೊಬ್ಬರಿ ತುಂಡುಗಳನ್ನು ಹಾಕಿ ದಹಿಸಿದರು.

ಸೂರ್ಯೋದಯಕ್ಕಿಂತ ಮುಂಚೆ ಹಳದಿ ಬಣ್ಣದ ಗರುಡ ವಾಹನದ ಮೇಲೆ ಲಕ್ಷ್ಮೀ, ನರಸಿಂಹ ದೇವರ ಮೆರವಣಿಗೆಯಲ್ಲಿ ನೆರೆದ ಸಾವಿರಾರು ಭಕ್ತರು ಗೋವಿಂದ, ಗೋವಿಂದ ಎನ್ನುತ್ತಾ ದೇವರ ಸ್ಮರಣೆ ಮಾಡಿ ಮುಂದಕ್ಕೆ ಸಾಗಿದರು. ಅಲ್ಲಲ್ಲಿ ಸೆಲ್ಫಿಗೆ ಮುಗಿದು ಬೀಳುತ್ತಿದ್ದ ದೃಶ್ಯಗಳು ಕಂಡು ಬಂದವು.

ಕನಕಾಚಲಪತಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ರಾಜಬೀದಿ ಮೂಲಕ ಎದುರಿನ ಆಂಜನೇಯನ ದೇವಸ್ಥಾನ ತಲುಪಿ ಮತ್ತೆ ದೇವಸ್ಥಾನದವರೆಗೆ ಸಾಗಿತು. ಭಕ್ತರು ಬೃಹತ್ ಪ್ರಮಾಣದ ಹೂವಿನ ಹಾರ ಹಾಕಿ ಧನ್ಯತೆ ಮರೆದರು.

ಭಾಜಾ ಭಜಂತ್ರಿ, ತಾಷ ಮೇಳ ಹಾಗೂ ವಿವಿಧ ವಾದ್ಯಗಳ ಗರುಡೋತ್ಸವಕ್ಕೆ ಮೆರುಗು ತಂದವು.

ಉದ್ಯಮಿ ಸತೀಶ ಸೂರ್ಯಬಾಬು ಅವರು ಮೆರವಣಿಗೆಗೆ ಬೆಳಕಿನ ವ್ಯವಸ್ಥೆ ಮಾಡಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಮಾಜಿ ಶಾಸಕ ಬಸವರಾಜ ದಢೇಸೂಗೂರು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಜಾತ ಹನುಮೇಶ ನಾಯಕ, ತಹಶೀಲ್ದಾರ್ ವಿಶ್ವನಾಥ ಮುರುಡಿ, ತಾ.ಪಂ ಇಒ ರಾಜಶೇಖರ ಕೆ, ಶಿಶು ಅಭಿವೃದ್ದಿ ಯೋಜನಾಧಿಕಾರಿ ವಿರೂಪಾಕ್ಷಯ್ಯ, ಪಿಐ ವಿ.ನಾರಾಯಣ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ, ಹೈದರಾಬಾದ್, ಧಾರವಾಡ, ವಿಜಯನಗರ, ಕೊಪ್ಪಳ, ಧಾರವಾಡ, ಬಳ್ಳಾರಿ, ದಾವಣಗೆರೆ, ಬೆಳಗಾವಿ, ಕಲಬುರಗಿ, ವಿಜಯಪುರ, ಇತರೆ ಜಿಲ್ಲೆಗಳ ಭಕ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.