ಕನಕಗಿರಿ: ತಾಲ್ಲೂಕಿನ ಕೆರೆ, ಹಳ್ಳ ಪಾತ್ರದ ಗ್ರಾಮಗಳಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆ ತಡೆಯಲು ಇಲ್ಲಿನ ತಹಶೀಲ್ದಾರ್ ವಿಶ್ವನಾಥ ಮುರುಡಿ ಅವರು ಬುಧವಾರ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

ಕನಕಗಿರಿ, ಚಿಕ್ಕಮಾದಿನಾಳ, ರಾಮದುರ್ಗ, ನಾಗಲಾಪುರ, ನವಲಿ, ಬುನ್ನಟ್ಟಿ, ಈಚನಾಳ, ಮಲ್ಲಾಪುರ, ಹಿರೇಮಾದಿನಾಳ, ಉದ್ದಿಹಾಳ, ಯತ್ನಟ್ಟಿ, ಜೀರಾಳ, ಚಿಕ್ಕಡಂಕಲ್ ಸೇರಿದಂತೆ ಹೋಬಳಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಅಕ್ರಮ ಮರಳು ತೆಗೆಯುವುದು, ಸಾಗಿಸುವುದನ್ನು ಬಿಎನ್ಎಸ್ ಕಲಂ 163ರ ಅಡಿ ನಿಷೇಧಿಸಲಾಗಿದೆ.

ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳು 1994 ಹಾಗೂ ನಿಯಮಗಳು 2016 ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163ರ ಪ್ರಕಾರ ಈ ಕ್ರಮ ಜರುಗಿಸಲಾಗಿದೆ. ಅಕ್ರಮ ಮರಳು ದಂಧೆ ಹೆಚ್ಚಿದ್ದರಿಂದ ಸರ್ಕಾರಕ್ಕೆ ನಷ್ಟ ಹಾಗೂ ಪರಿಸರ ಹಾನಿಯಾಗುತ್ತಿತ್ತು. ಆದೇಶ ಉಲ್ಲಂಘಿಸಿದರೆ ಸೂಕ್ತ ಕಾನೂನು ಕ್ರಮಕೈಗೊಳ್ಳಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-35-949436456

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.