ಕನಕಗಿರಿ: ಇಲ್ಲಿನ ಇತಿಹಾಸ ಪ್ರಸಿದ್ಧ ಕನಕಾಚಲಪತಿ ಜಾತ್ರಾ ಮಹೋತ್ಸವವೆಂದರೆ ಬಯಲಾಟದ ಪ್ರದರ್ಶನಗಳಿಗೆ ಸುಗ್ಗಿಯಿದ್ದಂತೆ. ಬಯಲಾಟ ಕಲೆಗೆ ಸ್ಥಳೀಯ ಹವ್ಯಾಸಿ ಕಲಾವಿದರ ಕೊಡುಗೆ ಅಪಾರವಾಗಿದ್ದು, ಜನರನ್ನು ರಂಜಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಎಲ್ಲ ಸಮುದಾಯದವರೂ ಪ್ರದರ್ಶನ ನೀಡುತ್ತಾರೆ.

ದಿವಂಗತ ಬಸಪ್ಪ ಮಾಸ್ತರ, ಬಾಷುಸಾಬ (ಸಜ್ಜಪ್ಪ), ಭಾಷುಸಾಬ ಎಲಿಗಾರ, ರಾಮಣ್ಣ ತುಪ್ಪದ ಮಾಸ್ತರ, ರಾಜಾಸಾಬ ಅಯೋಧ್ಯ (ಮದ್ಲಿ ಮಾಸ್ತರ), ಯಮನಪ್ಪ ಮಹಿಪತಿ, ಸಂಗಪ್ಪ ಬಡಿಗೇರ(ಮದ್ಲಿ ಮಾಸ್ತರ) ಅವರು ಈ ಭಾಗದ ಬಯಲಾಟ ಕಲೆಗೆ ಜೀವ ತುಂಬಿದವರು. ಈಗಲೂ ಹಿರೇರಾಜಾಸಾಬ ಎಲಿಗಾರ, ಕಾಶಿಪತಿ ಕಮ್ಮಾರ, ಇತರರು ಯುವ ಸಮುದಾಯಕ್ಕೆ ಪ್ರೇರಣೆಯಾಗಿದ್ದಾರೆ.

‘ಶ್ರೀಕೃಷ್ಣ ಪಾರಿಜಾತ’ ನಾಟಕ ರಚಿಸಿದ ಅಪರಾಳ ತಮ್ಮಣ್ಣ ಸ್ಥಳೀಯರು. ‘ಧನಿಕರ ದೌರ್ಜನ್ಯ’, 80ರ ದಶಕದ ‘ಸ್ಟೇಷನ್ ಮಾಸ್ತರ್’ ಎಂಬ ನಾಟಕವು ಉತ್ತಮ ಪ್ರದರ್ಶನ ಕಂಡಿದೆ. ಅಲ್ಲಾಸಾಬ ಕೋರಿ, ಜವಳಗೇರ ಕಂಠೆಪ್ಪ, ನಿಂಗಪ್ಪ ಪೂಜಾರ ಪಾತ್ರ ಅನುಕರಣೀಯವಾಗಿದೆ. ಸಮಗಂಡಿ ಮಲ್ಲಯ್ಯ ತಾತನವರ ಕಾಲದಿಂದಲೂ ಚಿತ್ರಸೇನಾ ಗಂಧರ್ವ, ಕನಕಾಂಗಿ ಕಲ್ಯಾಣ, ಕೀಚಕ ವಧೆ, ಸುಭದ್ರಿ ಕಲ್ಯಾಣಿ, ರತಿ ಕಲ್ಯಾಣ ಹಾಗೂ ಗಿರಿಜಾ ಕಲ್ಯಾಣ ನಾಟಕಗಳು ಹಲವು ಪ್ರದರ್ಶನಗೊಂಡಿವೆ.

ಕಲೆ, ಸಾಹಿತ್ಯ, ಸಂಗೀತಕ್ಕೆ ಗುಜ್ಜಲ ವಂಶದವರು ರಾಜಾಶ್ರಯ ನೀಡಿದ್ದರು. ಬಸಪ್ಪ ಮಾಸ್ತರ, ಬಾಷುಸಾಬ (ಸಜ್ಜಪ್ಪ), ರಾಮಣ್ಣ ತುಪ್ಪದ, ರಾಜಾಸಾಬ ಅಯೋಧ್ಯ (ಮದ್ಲಿ ಮಾಸ್ತರ) ಅವರು ನಿಧನರಾಗಿ ದಶಕಗಳಾಗಿದ್ದರೂ ಅವರ ಹೆಸರು ನಾಟಕ ಕಲೆಯೊಂದಿಗೆ ಉಳಿದುಕೊಂಡಿದೆ. ರತಿ ಕಲ್ಯಾಣ, ಗಿರಿಜಾ ಕಲ್ಯಾಣ ಹೀಗೆ ಅನೇಕ ನಾಟಕ, ಬಯಲಾಟಗಳು ಪ್ರದರ್ಶನಗೊಂಡಿವೆ.

ಮಹಿಳಾ ಪಾತ್ರಧಾರಿಗಳನ್ನು ವಿಶೇಷವಾಗಿ ವಿಚಾರಿಸುವ ಸಾರಥಿಯವರು ನಾಟಕದಲ್ಲಿ ಹಾಸ್ಯದ ಪಾತ್ರ ನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಮ್ಮಾರ ಓಣಿಯ ಕಾಶೀಪತಿ ಅವರು ವಾದ್ಯ, ಹಿನ್ನೆಲೆ ಗಾಯಕದ ಕರೆಗೆ ವಿರೋಧಿ ಕಥಾ ನಿರ್ದೇಶನ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ. ಬಯಲಾಟದಲ್ಲಿ ಸ್ತ್ರೀಯರ ಪಾತ್ರಗಳನ್ನು ಪುರುಷರೆ ಅಭಿನಯಿಸುತ್ತಿರುವುದು ವಿಶೇಷವಾಗಿದೆ.

ರಕ್ತರಾತ್ರಿ ಎಂಬ ಪೌರಾಣಿಕ ನಾಟಕ, ಸರ್ವ ಸಮಾಜದ ಜನರು ಸೇರಿಕೊಂಡು ‘ಗೌಡರ ಗದ್ದಲ’, ' ತಲಾಟೆ ಮಾಡಿದ ಗಲಾಟೆ' ಎಂಬ ಸಾಮಾಜಿಕ ನಾಟಕಗಳು 70ರ ದಶಕದಲ್ಲಿ ಅತಿ ಜನಪ್ರಿಯತೆ ಪಡೆದುಕೊಂಡಿದ್ದವು. ಹೀಗೆ ನಾಟಕ ಕಲೆ ಇಲ್ಲಿನ ಜನರಿಗೆ ಕರಗತವಾಗಿದೆ. ಹೀಗಾಗಿ ಶಿವರಾತ್ರಿ, ಜಾತ್ರೆ, ಯುಗಾದಿ ಸಮಯದಲ್ಲಿ ನಾಟಕಗಳ ಸುಗ್ಗಿ ಇರುತ್ತದೆ ಎಂದು ನಿರ್ದೇಶಕ ನಾಗರಾಜ ಚಿನ್ನೂರು ತಿಳಿಸುತ್ತಾರೆ.

ನಾಳೆ ಪ್ರದರ್ಶನ ಕನಕಾಚಲಪತಿ ಮಹಾರಥೋತ್ಸವ ಮಾರ್ಚ್ 11ರಂದು ನಡೆಯಲಿದ್ದು ಜೂಲಕೇರಿ ಓಣಿಯಲ್ಲಿ ರತಿ ಕಲ್ಯಾಣ ಹಾಗೂ ಶಿವಯೋಗಿ ಚೆನ್ನಮಲ್ಲಸ್ವಾಮಿ ಶಾಲೆಯ ಆವರಣದಲ್ಲಿ ರಕ್ತರಾತ್ರಿ ನಾಟಕ ಪ್ರದರ್ಶನಗೊಳ್ಳಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.