ಕನಕಗಿರಿ: ಇಲ್ಲಿನ ಆರ್ಯ ವೈಶ್ಯ ಸಮಾಜ ಹಾಗೂ ವಾಸವಿ ಮಹಿಳಾ ಸಂಘದ ಆಶ್ರಯದಲ್ಲಿ ಭಾನುವಾರ ವಾಸವಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಗಜಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಗಂಗೆ ಪೂಜೆ ನಡೆಸಿ ಕನ್ನಿಕಾಪರಮೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆ ರಾಜಬೀದಿ ಮೂಲಕ ನಗರೇಶ್ವರ ದೇವಸ್ಥಾನ ತಲುಪಿತು. ಮಹಿಳೆಯರು ಕುಂಭ, ಕಳಸ ಹೊತ್ತು ಭಾಗವಹಿಸಿದ್ದರು.

ನಗರೇಶ್ವರ ದೇಗುಲದಲ್ಲಿ ಪೂಜೆ, ಅಭಿಷೇಕ, ಕುಂಕುಮಾರ್ಚನೆ, ಅಷ್ಟೋತ್ತರ ನಾಮಾವಳಿ, ತೊಟ್ಟೀಲು ಸೇವೆ, ಪ್ರಸಾದ, ಇತರೆ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ, ಭಕ್ತಿಯಿಂದ ನಡೆದವು.

ಸಂಜೆ ಎದುರ ಹನುಮಪ್ಪ ದೇವಸ್ಥಾನದಿಂದ ನಗರೇಶ್ವರ ದೇಗುಲದವರೆಗೆ ವಾಸವಿ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ಸಡಗರ, ಸಂಭ್ರಮದಿಂದ ನಡೆಯಿತು. ಭಾಜಾ ಭಜಂತ್ರಿ, ವಾಸವಿಯ ನಾಮಸ್ಮರಣೆ, ಒಡಪು ಹೇಳುವುದು ಮೆರವಣಿಗೆಗೆ ಕಳೆ ತಂದವು. ಯುವಕರು ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದರು.

ಆರ್ಯವೈಶ್ಯ ಸಮಾಜದ ಅಧ್ಯಕ್ಷ ಪಾಂಡುರಂಗ ಜನಾದ್ರಿ, ಮಾಜಿ ಅಧ್ಯಕ್ಷ ಬಿ.ಹನುಮೇಶ, ದಿಶಾ ಸಮಿತಿ ಮಾಜಿ ಸದಸ್ಯ ಹನುಮೇಶ ಯಲಬುರ್ಗಿ, ಪ್ರಮುಖರಾದ ಮಹಾಬಳೇಶ್ವರ ಶ್ರೇಷ್ಠಿ, ವೆಂಕಟೇಶ ಸೌದ್ರಿ, ರಾಘವೇಂದ್ರ, ಹನುಮೇಶ ಜನಾದ್ರಿ, ಸತ್ಯಣ್ಣ ಖ್ಯಾಡೆದ, ಕನಕಾಚಲ ಅಂಜನಹಳ್ಳಿ, ಗೋಪಾಲಕೃಷ್ಣಾ ಜನಾದ್ರಿ, ರಮೇಶ ಮಸ್ಕಿ, ಗುರುರಾಜ ಖ್ಯಾಡೆದ, ಸತೀಶ ಅಂಜನಹಳ್ಳಿ, ವೀರಣ್ಣ ಸೌದ್ರಿ, ರಮೇಶ ಶಿರವಾರ, ಮಹೇಶ ಬ್ಯಾಡಗಿ, ಬಕ್ಕಸ್ತ ಮಂಜುನಾಥ, ನವೀನ ಭಕ್ಕಸ್ತ, ವಾಸವಿ ಮಹಿಳಾ ಮಂಡಳಿಯ ಪದಾಧಿಕಾರಿಗಳಾದ ವಿಜಯಲಕ್ಷ್ಮೀ ಜನಾದ್ರಿ, ಸವಿತಾ ಯಲಬುರ್ಗಿ, ಭಾಗ್ಯಲಕ್ಷ್ಮೀ, ಸಹನಾ ಖ್ಯಾಡೆದ, ನೇತ್ರಾ ಇತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-35-136462656

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.