ಕನಕಗಿರಿ: ‘ಐತಿಹಾಸಿಕ ಹಿರಿಮೆಯ ಪಟ್ಟಣದ ಬೆಳವಣಿಗೆ ದಿನದಿಂದ ದಿನಕ್ಕೆ ವೇಗ ಪಡೆಯುತ್ತಿದೆ. ಆದರೆ ಪಟ್ಟಣದ ಸೌಂದರ್ಯೀಕರಣಕ್ಕೆ ಸಾಕ್ಷಿಯಾಗಬೇಕಾದ ಉದ್ಯಾನಗಳು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೊಳಗಾಗಿವೆ.

ವಿಶ್ರಾಂತಿ, ನೆಮ್ಮದಿಯ ತಾಣಗಳಾಗಬೇಕಿದ್ದ ಉದ್ಯಾನಗಳು, ಮೂಲಸೌಲಭ್ಯಗಳ ಕೊರತೆಯಿಂದ ನಲುಗಿವೆ. ಕುಡಿಯುವ ನೀರಿಲ್ಲ, ಶೌಚಾಲಯಗಳ ಸೌಲಭ್ಯವಿಲ್ಲ, ನಿರ್ವಹಣೆಯಿಲ್ಲ. ಈ ಸಂಬಂಧ ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಉದ್ಯಾನಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯವಾಗಿದೆ.

ಪಟ್ಟಣದಲ್ಲಿ ಹೊಸ ಬಡಾವಣೆಗಳು ಹೆಚ್ಚುತ್ತಿದ್ದು, 50ಕ್ಕೂ ಹೆಚ್ಚು ಉದ್ಯಾನ ಗಳಿವೆ. ನಿಯಮಗಳ ಪ್ರಕಾರ ಉದ್ಯಾನ ಸೇರಿದಂತೆ ಇತರೆ ನಾಗರಿಕ ಸೌಲಭ್ಯಗಳಿಗೆ ಜಾಗ ಮೀಸಲಿಡಬೇಕು. 2016ರಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಪ.ಪಂ ಆಡಳಿತ ಮಂಡಳಿ ಮೂರು ಕಡೆ ಉದ್ಯಾನ ನಿರ್ಮಾಣ ಮಾಡಿದೆ. ಆದರೆ ನಿರ್ವಹಣೆ ಕೊರತೆಯಿಂದ ಸೊರಗಿವೆ.

ತೊಂಡೆತೇವರಪ್ಪ ದೇಗುಲದ ಆವರಣದಲ್ಲಿರುವ ಉದ್ಯಾನದಲ್ಲಿ ಮಕ್ಕಳ ಆಟಿಕೆ ಸಾಮಗ್ರಿಗಳು ಮುರಿದಿದ್ದರೂ ದುರಸ್ತಿಯಾಗಿಲ್ಲ. ತೂಗುವ ತೊಟ್ಟಿಲಿನ ಒಂದು ಭಾಗ ಮುರಿದಿದ್ದು, ಮತ್ತೊಂದು ಬೀಳುವ ಹಂತದಲ್ಲಿದೆ. ನೂರಾರು ಭಕ್ತರು ದೇಗುಲಕ್ಕೆ ಬರುತ್ತಿದ್ದು, ಉದ್ಯಾನದಲ್ಲಿ ಆಸನಗಳ ಕೊರತೆಯಿದೆ. ಕಳೆ ಬೆಳೆದಿದೆ. ನಡಿಗೆ ಪಥವೂ ಇಲ್ಲ.

5ನೇ ವಾರ್ಡ್ ವ್ಯಾಪ್ತಿಯ ಶಿರಿಗೇರಿ ಮನೆ ಹತ್ತಿರದ ಉದ್ಯಾನವೂ ವಾಯು ವಿಹಾರಿಗಳು, ಮಕ್ಕಳ ಆಟೋಟಕ್ಕೆ ಯೋಗ್ಯವಾಗಿಲ್ಲ. ಕೇವಲ ಎರಡು ಆಟಿಕೆ ಸಾಮಗ್ರಿಗಳಿದ್ದು, ಅವು ಮುರಿದಿವೆ. ಹಲವು ಬಾರಿ ಮನವಿ ಮಾಡಿದರೂ ದುರಸ್ತಿಯಾಗಿಲ್ಲ. ಕಳೆ ಬೆಳೆದಿದ್ದು ಪಟ್ಟಣ ಪಂಚಾಯಿತಿಯವರು ಸ್ವಚ್ಛಗೊಳಿಸುವ ಗೋಜಿಗೆ ಹೋಗಿಲ್ಲ.

ಸಮುದಾಯ ಆರೋಗ್ಯ ಕೇಂದ್ರದ ಪಕ್ಕದ ಉದ್ಯಾನ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಅನಾರೋಗ್ಯಕರ ವಾತಾವರಣ ಇದೆ. ಉದ್ಯಾನದ ಎಲ್ಲ ಕಡೆ ಜಾಲಿ ಗಿಡಗಳು ಬೆಳೆದು ನಿಂತಿದ್ದು, ನೋಡಿದವರಿಗೆ ಉದ್ಯಾನ ಅನ್ನಿಸುವುದಿಲ್ಲ. ಕಾಲಿಡದಷ್ಟು ಮುಳ್ಳಿನ ಗಿಡ ಬೆಳೆದಿವೆ. ಗಿಡಗಳನ್ನು ಕಟಾವ್ ಮಾಡುವಷ್ಟು ಕಾಳಜಿ ಅಧಿಕಾರಿ ಹಾಗೂ ವಾರ್ಡ್ ಸದಸ್ಯರಿಗೆ ಇಲ್ಲ. ಉದ್ಯಾನದ ಪ್ರವೇಶದ್ವಾರ ಸೇರಿದಂತೆ ಹಲವೆಡೆ ಊಟ ಮಾಡಿದ ಎಲೆಗಳನ್ನು ಬೀಸಾಡಲಾಗಿದೆ.

‘ಉದ್ಯಾನದಲ್ಲಿ ಸ್ವಚ್ಛತೆ ಇಲ್ಲದ್ದರಿಂದ ಈ ಭಾಗದ ಜನರು ಕೊಪ್ಪಳದ ರಸ್ತೆವರೆಗೆ ವಾಯು ವಿಹಾರಕ್ಕೆ ಹೋಗುತ್ತಾರೆ’ ಎಂದು ನಿವಾಸಿ ವಿನಾಯಕ ಹೇಳಿದರು.

ಮನೆಯ ಸಮೀಪದಲ್ಲಿಯೇ ನಿರ್ಮಿಸಲಾಗಿರುವ ಉದ್ಯಾನ ಆರಂಭದಲ್ಲಿ ಒಂದೆರಡು ವರ್ಷ ಚೆನ್ನಾಗಿತ್ತು. ಬಳಿಕ ನಿರ್ವಹಣೆ ಕೊರತೆಯಿಂದ ಉಪಯೋಗಕ್ಕೆ ಬಾರದಂತಾಗಿದೆ
ಲಕ್ಷ್ಮೀಕಾಂತ ಬೋಂದಾಡೆ 5ನೇ ವಾರ್ಡ್ ನಿವಾಸಿ

ಸಭೆಯಲ್ಲಿ ಚರ್ಚೆಯಾಗದ ನಿರ್ವಹಣೆ ?

ಪಟ್ಟಣ ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ ಉದ್ಯಾನಗಳ ನಿರ್ಮಾಣ ಹಾಗೂ ನಿರ್ವಹಣೆ ಕುರಿತು ಒಂದು ದಿನವೂ ಚರ್ಚೆ ಆಗಿಲ್ಲ. ಬಹುತೇಕ ಸದಸ್ಯರು ಪ್ರಜ್ಞಾವಂತರು. ಪಟ್ಟಣದಲ್ಲಿ ಒಂದೂ ಉದ್ಯಾನವು ಸೂಕ್ತವಾಗಿಲ್ಲದಿರುವುದು ದುರಂತ' ಎಂದು ಪಾಮಣ್ಣ ಅರಳಿಗನೂರು ಬೇಸರ ವ್ಯಕ್ತಪಡಿಸಿದ್ದಾರೆ.

ಸುಸಜ್ಜಿತ ಉದ್ಯಾನಗಳು ಇಲ್ಲದ್ದರಿಂದ ವೃದ್ಧರು, ಯುವಜನರು ವಾಯು ವಿಹಾರದತ್ತ ಸುಳಿಯುತ್ತಿಲ್ಲ. ನಿರ್ಲೂಟಿ, ಗಂಗಾವತಿ, ಬೈಲಕ್ಕುಂಪುರ, ತಾವರಗೇರಾ, ನವಲಿ, ಕಲಕೇರಿ ರಸ್ತೆಯಲ್ಲಿರುವ ಬಡಾವಣೆಗಳಲ್ಲಿ ಹೊಸ ಉದ್ಯಾನಗಳನ್ನು ನಿರ್ಮಾಣ ಮಾಡಬೇಕು. ಮಕ್ಕಳ ಮನರಂಜನೆ, ಆಟೋಟಗಳಿಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಒದಗಿಸಿ ಅನುಕೂಲ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಾರೆ.

ಬಯಲು ಶೌಚಾಲಯವಾಗಿ ಪರಿವರ್ತನೆ

ಮಹಿಬೂಬ ನಗರದ ಉದ್ಯಾನದ ಪ್ರವೇಶ ದ್ವಾರವು ಬಯಲು ಶೌಚಾಲಯವಾಗಿ ಪರಿವರ್ತನೆ ಆಗಿದೆ. ಉದ್ಯಾನದ ಅಭಿವೃದ್ಧಿಯು ಕಾಮಗಾರಿ ಮಾಡಿ, ಬಿಲ್ ಎತ್ತುವಳಿಗೆ ಸೀಮಿತವಾಗಿದೆ. ಗಿಡಗಳು ಬೆಳೆದು ಒಣಗಿದ್ದು ಕಸದ ರಾಶಿಯೇ ಇದೆ. ಪಕ್ಕದಲ್ಲಿ ನೀರಿನ ಟ್ಯಾಂಕ್ ಇದ್ದರೂ ಉದ್ಯಾನದ ಗಿಡಗಳಿಗೆ ನೀರುಣಿಸಲು ಹಾಗೂ ಸಾರ್ವಜನಿಕರಿಗೆ ಕುಡಿಯಲು ಒಂದು ನಲ್ಲಿಯ ಸೌಲಭ್ಯವನ್ನೂ ಮಾಡಿಲ್ಲ. ವಾಕಿಂಗ್ ಪಥದಲ್ಲಿ ಕೂಡ ಕಸ ಬೆಳೆದಿದ್ದು ಆಡಳಿತ ಮಂಡಳಿಯ ನಿರ್ಲಕ್ಷ್ಯ ಕಂಡು ಬರುತ್ತಿದೆ. ಉದ್ಯಾನಗಳಲ್ಲಿಯೂ ಬೆಳಕಿನ ವ್ಯವಸ್ಥೆ ಇಲ್ಲವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.