ಕನಕಗಿರಿ: ತಾಲ್ಲೂಕಿನಲ್ಲಿ ಅಕ್ರಮ ಮರಳು ಸಾಗಣೆ, ಅಕ್ರಮ ಮದ್ಯ ಮಾರಾಟ, ಓಸಿ-ಮಟ್ಕಾ, ಇಸ್ಪೀಟ್ ಜೂಜಾಟ ಸೇರಿದಂತೆ ಇತರೆ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಸಂಸ(ಅಂಬೇಡ್ಕರ್ ಧ್ವನಿ) ಚಂದ್ರಕಾಂತ ಕಾದ್ರೊಳ್ಳಿ ಬಣದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾ ಅಧ್ಯಕ್ಷ ನಿಂಗಪ್ಪ ಜಿ.ಎಸ್. ಬೆಣಕಲ್ ಮಾತನಾಡಿ, ‘ತಾಲ್ಲೂಕಿನ ಕರಡೋಣಿ, ನವಲಿ, ಬುನ್ನಟ್ಟಿ, ಯತ್ನಟ್ಟಿ, ಕೆ.ಮಲ್ಲಾಪುರ, ಈಚನಾಳ, ರಾಮದುರ್ಗಾ, ಗುಡದೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅಕ್ರಮ ಮರಳು ದಂಧೆ, ಮಣ್ಣು ಸಾಗಣೆ ನಿರಂತರವಾಗಿ ಅಕ್ರಮವಾಗಿ ನಡೆಯುತ್ತಿದ್ದು ಸರ್ಕಾರದ ಆದಾಯಕ್ಕೆ ಕೊಕ್ಕೆ ಬಿದ್ದಿದೆ. ಪರಿಸರಕ್ಕೆ ಹಾನಿಯಾಗುತ್ತಿದೆ ಎಂದು ತಿಳಿಸಿದರು.

‘ಮಟ್ಕಾ, ಇಸ್ಪೀಟ್, ಕ್ರಿಕೆಟ್ ಬೆಟ್ಟಿಂಗ್ ಅಡ್ಡೆಗಳು ಯುವಜನರನ್ನು ದುಶ್ಚಟಗಳಿಗೆ ಬಲಿಯಾಗುವಂತೆ ಮಾಡಿವೆ. ಶಾಲಾ-ಕಾಲೇಜುಗಳ ಸುತ್ತಮುತ್ತಲೂ ಮದ್ಯ ಮಾರಾಟ ಮಾಡಲಾಗುತ್ತಿದೆ. ದಂಧೆ ಸಾಮಾಜಿಕ ಅಶಾಂತಿಗೆ ಕಾರಣವಾಗಿದ್ದರೂ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ಈ ಕುರಿತು ಈಗಾಗಲೇ ಠಾಣೆಗೆ ದೂರು ನೀಡಿದರೂ ಅಧಿಕಾರಿಗಳು ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿರು.

ಜಿಲ್ಲಾ ಸಂಘಟನೆ ಸಂಚಾಲಕ ಕನಕಪ್ಪ ಮ್ಯಾಗಡೆ ಹಾಗೂ ತಾಲ್ಲೂಕು ಅಧ್ಯಕ್ಷ ಹುಲಗಪ್ಪ ಪೂಜಾರಿ ಮಾತನಾಡಿ, ‘ಅಕ್ರಮ ಮರಳು, ಮಣ್ಣು ಸಾಗಣಿಕೆಯನ್ನು ತಕ್ಷಣ ನಿಲ್ಲಿಸಬೇಕು. ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ ಮದ್ಯದ ಅಡ್ಡೆ, ಜೂಜಾಟ ಕೇಂದ್ರಗಳನ್ನು ಬಂದ್ ಮಾಡಿಸಬೇಕು. ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಸರ್ಕಾರ ಯುವಜನರಿಗೆ ಕ್ರೀಡೆ, ಶಿಕ್ಷಣ, ಉದ್ಯೋಗಮುಖಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಸಮಾಜದಲ್ಲಿ ಶಾಂತಿ ಕಾಪಾಡಲು ನಿಯಮಿತ ಪೊಲೀಸ್ ಗಸ್ತು ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ಬಳಿಕ ತಹಶೀಲ್ದಾರ್ ಚಂದ್ರಶೇಖರ ಗಾಳಿ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯೋಗೇಶ್ ಎಸ್.ಎಚ್. ಚಿಗರಿ, ಜಿಲ್ಲಾ ಉಪಾಧ್ಯಕ್ಷೆ ಶಶಿಕಲಾ ನಾಯಕ, ದಲಿತ ಮುಖಂಡರಾದ ರಾಚಪ್ಪ ಮ್ಯಾಗಡೆ, ಕೊಟ್ರಪ್ಪ ವಕ್ಕಳದ, ದಲಿತ ಮುಖಂಡರಾದ ಮಂಜುನಾಥ ಬಡಿಗೇರ, ಉಮೇಶ ಮ್ಯಾಗಡೆ, ಮಂಜುನಾಥ ಬಡಿಗೇರ, ಶರಣಪ್ಪ ಸೂಳೆಕಲ್, ಮೌನೇಶ ಭಜಗಂಗಿ, ಶರಣಪ್ಪ ಸಿದ್ಧಾಪುರ, ಹನುಮೇಶ ಸೂಳೆಕಲ್ ಹನುಮೇಶ್ ಗದ್ದಿ, ರಮೇಶ್ ಸಿರವಾರ, ಹುಲಗಪ್ಪ ಹನುಮನಾಳ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-35-879236116

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.