ಕಾರಟಗಿ: ‘ಪಟ್ಟಣದಲ್ಲಿನ ಪುರಸಭೆ ಆಡಳಿತವನ್ನು ತಮ್ಮ ವರಿಂದಲೇ ನಿಭಾಯಿಸಲಾಗದ ಸಚಿವ ಶಿವರಾಜ ತಂಗಡಗಿಗೆ, ಪ್ರಧಾನಿ ಮೋದಿ ಅವರ ಟೀಕಿಸುವ ಅರ್ಹತೆಯೇ ಇಲ್ಲ. ಬಿಜೆಪಿ ಕಾರ್ಯಕರ್ತರು ಗುತ್ತಿಗೆ ಪಡೆದರೆ ದ್ವೇಷ ರಾಜಕಾರಣ ಮಾಡುವ ಕ್ಷುಲ್ಲಕ ನಡೆಯ ಸಚಿವರು ಕ್ಷೇತ್ರವನ್ನು ರಿಪಬ್ಲಿಕ್ ಆಫ್ ಕನಕಗಿರಿ ಮಾಡಲು ಹೊರಟಿದ್ದಾರೆ’ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ ಟೀಕಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು.‘ಯಾವುದೇ ಸಮಸ್ಯೆ ಇದ್ದರೆ ಪ್ರಧಾನಿಯವರನ್ನೇ ಹೊಣೆಗಾರರನ್ನಾಗಿ ಟೀಕಿಸುವ ಪದ್ಧತಿಯನ್ನು ರೂಢಿ ಮಾಡಿಕೊಂಡಿರುವ ಸಚಿವ ತಂಗಡಗಿ, ತಾವು ವಾಸಿಸುವ ಪಟ್ಟಣದ ಪುರಸಭೆಯಲ್ಲಿ ತಾವು ಬಯಸಿದವನ್ನೇ ಅಧ್ಯಕ್ಷರನ್ನಾಗಿಸಿದ್ದಾರೆ. ಅಧ್ಯಕ್ಷರ ವಿರುದ್ಧ ಧರಣಿ ನಡೆಸಿ ಪ್ರತಿಭಟನೆ ಮಾಡಿದ್ದು ಇತಿಹಾಸ ಸೇರಿದ್ದನ್ನು ನೋಡಿದರೆ ತಂಗಡಗಿಯವರ ಆಡಳಿತ ವೈಖರಿಹೇಗಿದೆ ಎನ್ನುವುದು ಸಾಬೀತಾಗುತ್ತದೆ’ ಎಂದರು.

‘ತಂಗಡಗಿ ಮತ್ತವರ ಕಾರ್ಯ ಕರ್ತರಿಂದ ಅಧಿಕಾರಿಗಳು ಕೆಲಸ ಮಾಡದಂತಹ ಪರಿಸ್ಥಿತಿ ಕ್ಷೇತ್ರದಲ್ಲಿದೆ. ದಕ್ಷ ಅಧಿಕಾರಿಗಳಿಗೆ ಜೀವಭಯ ಕಾಡುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರಿ ಅಧಿಕಾರಿಗಳ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ. ಆಡಳಿತಾತ್ಮಕ ಸಮಸ್ಯೆ, ಬಿಕ್ಕಟ್ಟು ಸೃಷ್ಟಿಯಾದಾಗ ಮುಖ್ಯಾಧಿಕಾರಿಗಳು ಕಾನೂನು ಮೊರೆ ಹೋಗದೇ ಧರಣಿ ನಡೆಸಿದ್ದು ಸರಿಯಲ್ಲ. ಅಧ್ಯಕ್ಷರ ದುರ್ವತನೆಯೂ ಸರಿಯಲ್ಲ ಈ ಬಗ್ಗೆ ತನಿಖೆ ನಡೆಸಬೇಕು ಎಂದರು.

ಪುರಸಭೆ ಸದಸ್ಯ ಎಂ. ಆನಂದ ಪ್ರಮುಖರಾದ ಜಿ. ತಿಮ್ಮನಗೌಡ, ದೇವರಾಜ ನಾಯಕ, ಪ್ರಭುರಾಜ ಬೂದಿ, ಮೌನೇಶ ದಢೇಸೂಗೂರು, ಬಸವರಾಜ ಎತ್ತಿನಮನಿ ಇತರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-35-1655166812

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.