ಕಾರಟಗಿ: ‘ಪಕ್ಷದ ತಳಪಾಯವಾಗಿರುವ ಬೂತ್ ಏಜೆಂಟರು ಚುನಾವಣಾ ಸಿದ್ಧತೆ, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸಕ್ರಿಯರಾಗಿ ಕೆಲಸ ಮಾಡಬೇಕು’ ಎಂದು ರಾಯಚೂರು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂತೋಷ ರಾಜಗುರು ಹೇಳಿದರು.

ತಾಲ್ಲೂಕಿನ ನಾಗನಕಲ್ ಬಳಿಯಿರುವ ಎಲ್ವಿಟಿ ತಪೋವನದಲ್ಲಿ ಬಿಜೆಪಿಯಿಂದ ಬೂತ್ ಏಜೆಂಟರಿಗಾಗಿ ಬುಧವಾರ ನಡೆದ ಬಿಎಲ್ಎ- 2 ಕಾರ್ಯಾಗಾರದಲ್ಲಿ ಮಾತನಾಡಿದರು.

‘ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಅಭಿಯಾನದ ಪ್ರಕ್ರಿಯೆ ನಡೆದಿದೆ. ಪಕ್ಷದ ಬೂತ್ಮಟ್ಟದ ಏಜೆಂಟರು ಅಭಿಯಾನದೊಂದಿಗೆ ಸಕ್ರಿಯವಾಗಿ ಕೈಜೋಡಿಸಬೇಕು. ಮತದಾನದ ಅರ್ಹತೆ ಇದ್ದವರ ಹಕ್ಕನ್ನು ಉಳಿಸುವ ಜೊತೆಗೆ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಕಡೆ ಮತದಾನ ಮಾಡುವುದಕ್ಕೆ ತಡೆ ನೀಡಬೇಕು. ಮತದಾನದ ಹಕ್ಕು ಇಲ್ಲದವರೂ 2 ಕಡೆ ಮತದಾನ ಮಾಡುವುದಕ್ಕೆ ವಿಶೇಷ ತೀವ್ರ ಪರಿಷ್ಕರಣೆಯು ತಡೆಯೊಡ್ಡಲಿದೆ. ಮೃತಪಟ್ಟವರ ಹೆಸರು ಇಂದಿಗೂ ಮತದಾರರ ಯಾದಿಯಲ್ಲಿರುವುದರ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ’ ಎಂದರು.

‘ಈಶಾನ್ಯ ಭಾರತದಲ್ಲಿ ಬಾಂಗ್ಲಾದೇಶದ ಶೇ 40ರಷ್ಟು ನುಸುಳುಕೋರರು ಮತದಾನದ ಹಕ್ಕು ಪಡೆದುಕೊಂಡಿದ್ದಾರೆ. ಇದನ್ನು ತಡೆದು ಅರ್ಹರನ್ನು ಮಾತ್ರ ಮತದಾರರ ಪಟ್ಟಿಯಲ್ಲಿ ಉಳಿಸಲು ಚುನಾವಣಾ ಆಯೋಗ ಮುಂದಾಗಿದೆ. ಪಕ್ಷದ ಬಿಎಲ್ಎಗಳು ಸಕ್ರಿಯರಾಗಿ ನೆರವು ನೀಡಬೇಕು’ ಎಂದರು.

‘ಸರ್ಕಾರದ ಜನೋಪಯೋಗಿ ಯೋಜನೆಗಳ ಮಾಹಿತಿಯನ್ನು ಮನೆ, ಮನೆಗಳಿಗೆ ತಲುಪಿಸುವ ಮಹತ್ವದ ಕಾರ್ಯಕ್ಕೆ ಮುಂದಾಗಬೇಕು. ಪಕ್ಷದ ಸಂಘಟನೆಗೆ ಒತ್ತು ನೀಡಬೇಕು’ ಎಂದು ತಿಳಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ, ಸಣ್ಣ ಕನಕಪ್ಪ, ರಾಜ್ಯ ಕಾರ್ಯಕಾರಿಣಿ ಸದಸ್ಯ ನಾಗರಾಜ ಬಿಲ್ಗಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ನಾಡಿಗೇರ, ಜಿ.ಪಂ ಮಾಜಿ ಅಧ್ಯಕ್ಷ ಅಮರೇಶ ಕುಳಗಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮೌನೇಶ ದಢೇಸೂಗೂರು, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ರತ್ನಕುಮಾರಿ, ಚಂದ್ರಶೇಖರ ಬೆನ್ನೂರು, ವಿವಿಧ ಮೋರ್ಚಾಗಳ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.