ಕಾರಟಗಿ: ನೂತನ ತಾಲ್ಲೂಕು ಕೇಂದ್ರವಾಗಿ ಏಳು ವರ್ಷಗಳು ಉರುಳಿದರೂ ಪಟ್ಟಣದಲ್ಲಿ ಸ್ಥಳೀಯ ಆಡಳಿತದಿಂದ ನಿರ್ವಹಣೆಯಾಗುತ್ತಿರುವುದು 12ನೇ ವಾರ್ಡ್ನ ವಸುಂಧರ ನಗರದಲ್ಲಿರುವ ಉದ್ಯಾನ ಮಾತ್ರ.

ಪುರಸಭೆ ದಾಖಲೆಯ ಪ್ರಕಾರ 118 ಬಡಾವಣೆಗಳು ನಿರ್ಮಾಣವಾಗಿವೆ. ಇವುಗಳೆಲ್ಲವುಗಳಲ್ಲಿ ನಿಯಮಾನುಸಾರ ರಾಜ್ಯಪಾಲರ ಹೆಸರಲ್ಲಿ ಸಿಎ ಸೈಟ್ (ಸಾರ್ವಜನಿಕ ಉದ್ದೇಶಕ್ಕೆ ಬಳಕೆಗೆ) ಬಿಡಲಾಗಿದೆ. ದಾಖಲೆಯ ಪ್ರಕಾರ 56 ಉದ್ಯಾನಗಳಿವೆ. ಪುರಸಭೆಯಿಂದ ಒಂದು ಉದ್ಯಾನವಿದ್ದರೆ, ಇನ್ನುಳಿದವು ಬಡಾವಣೆ ಮಾಲೀಕರು ನಿರ್ಮಾಣ ಮಾಡಿದವುಗಳು. ಆದರೆ ವಾಸ್ತವಿಕವಾಗಿ ಇಷ್ಟು ಉದ್ಯಾನಗಳೇ ಇಲ್ಲ. ಮಕ್ಕಳು, ವೃದ್ಧರು, ಮಹಿಳೆಯರಿಗೆ ವಾಯುವಿಹಾರ, ವಿಶ್ರಾಂತಿಯ ಸೌಲಭ್ಯ ತಾಲ್ಲೂಕು ಕೇಂದ್ರದಲ್ಲಿಲ್ಲ. ತಾಲ್ಲೂಕು ಆದರೂ ‘ಇಲ್ಲ’ಗಳ ಸಾಲಿಗೆ ಸಾರ್ವಜನಿಕ ಉದ್ಯಾನವೂ ಸೇರಿದ್ದು, ಬಹುದೊಡ್ಡ ದುರಂತ ಎನ್ನುತ್ತಾರೆ ಪ್ರಜ್ಞಾವಂತ ಯುವಕರು.

ಯುವಕರು, ನಾಗರಿಕರು ಕೆಲ ಬಡಾವಣೆಗಳಲ್ಲಿ ಮತ್ತು ಮುಖ್ಯರಸ್ತೆಗಳನ್ನೇ ವಾಯುವಿಹಾರಕ್ಕೆ ಅವಲಂಬಿಸಿದ್ದಾರೆ. ವಾಹನ ದಟ್ಟಣೆಯಿಂದ ಆಗಾಗ ಅಪಘಾತಗಳು ಜರುಗಿವೆ. ಘಟನೆಯಲ್ಲಿ ಕೈ, ಕಾಲು ಮುರಿದುಕೊಂಡವರೂ ಇದ್ದೂ, ಒಂದೆರಡು ಪ್ರಕರಣ ಸಾವಿನಲ್ಲಿ ಅಂತ್ಯವಾಗಿದೆ. ನವಲಿ ರಸ್ತೆ, ಬೂದಗುಂಪ- ದೇವಿಕ್ಯಾಂಪ್ ರಸ್ತೆ, ಪನ್ನಾಪುರ ರಸ್ತೆ, ಚಳ್ಳೂರು ರಸ್ತೆ, ಸಿದ್ದಲಿಂಗ ನಗರ ರಸ್ತೆ, ಗಂಗಾವತಿ- ಸಿಂಧನೂರು ರಸ್ತೆಯನ್ನೇ ವಾಯುವಿಹಾರಕ್ಕೆ ಜನರು ಬಳಸುತ್ತಿದ್ದಾರೆ. ವಾಹನಗಳ ದಟ್ಟಣೆಯೇ ಅಧಿಕವಾಗಿದ್ದು ಅಂತಂಕದಲ್ಲೇ ನಡೆಯುತ್ತಿದ್ದಾರೆ.

ಈಗಿನ ಕರ್ನಾಟಕ ಪಬ್ಲಿಕ್ ಶಾಲೆ, ಅಗ್ನಿಶಾಮಕ ಸಿಬ್ಬಂದಿ ವಸತಿ ಗೃಹಗಳ ಆವರಣ ಸೇರಿದಂತೆ ವಿವಿಧೆಡೆ ಹಿಂದೆ ಇದ್ದ ಉದ್ಯಾನಗಳ ಕುರುಹು ಈಗ ಇಲ್ಲದಂತಾಗಿದೆ.

ಅನುದಾನ: ಅಮೃತ 2.0 ಯೋಜನೆಯಡಿ ಉದ್ಯಾನ ನಿರ್ಮಾಣಕ್ಕೆ ಈಚೆಗೆ ₹93 ಲಕ್ಷ ಅನುದಾನ ಬಂದಿದೆ. 12ನೇ ವಾರ್ಡ್ನ ವಸುಂಧರ ನಗರ, 11ನೇ ವಾರ್ಡ್ನ ಸಿಬಿಎಸ್ ನಗರದಲ್ಲಿ ಉದ್ಯಾನ ನಿರ್ಮಿಸಲಾಗುವುದು. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದು, ವರ್ಕ್ ಆರ್ಡರ್ ನೀಡಲಾಗಿದೆ. ಶೀಘ್ರದಲ್ಲೇ ಉದ್ಯಾನಗಳ ನಿರ್ಮಾಣ, ಅಭಿವೃದ್ದಿ ಕಾರ್ಯ ನಡೆಯಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟೀಕಾರ್ ಪ್ರತಿಕ್ರಿಯಿಸಿದರು.

ಪಟ್ಟಣದ 12ನೇ ವಾರ್ಡ್ನ ವಸುಂಧರ ನಗರದ ಉದ್ಯಾನದಲ್ಲಿ ಕಸ ಬೆಳೆದಿದೆ. ಕೆಲ ಆಟದ ಸಾಮಾನುಗಳು ಮುರಿದಿವೆ, ಸ್ಥಳೀಯಾಡಳಿತದ ನಿರ್ಲಕ್ಷ್ಯದಿಂದ ಸ್ಥಳೀಯರೇ ಪಾರ್ಕ್ ಸ್ವಚ್ಛಗೊಳಿಸುತ್ತಿದ್ದಾರೆ ಎಂದು ನಿವಾಸಿ ಕುಡ್ಲೂರ ಬಸವರಾಜ್ ಹೇಳುತ್ತಾರೆ.

ಪಟ್ಟಣದ ಟೀಚರ್ಸ್ ಕಾಲೊನಿಯ ಹಿರೇಮಠದವರ ಲೇಔಟ್ ಪಾರ್ಕ್ಗೆಂದು ಜಾಗೆ ಮೀಸಲಿದ್ದು ತಂತಿಬೇಲಿ ಹಾಕಲಾಗಿದೆ. ಹೂವಿನ ಜೊತೆಗೆ ಮುಳ್ಳಿನ ಗಿಡಗಳು ಸಾಕಷ್ಟು ಬೆಳೆದು ಮಕ್ಕಳು ಆಟ ಆಡುವುದಕ್ಕೆ ಆಸ್ಪದವಿಲ್ಲದಾಗಿದೆ. ಜಾಗ ಐತ್ರಿ, ಪಾರ್ಕ್ ಇಲ್ಲ. ಖಾಲಿ ನಿವೇಶದ ಮುಂಭಾಗದ ರಸ್ತೆಗಳೇ ದೊಡ್ಡವರಿಗೆ ವಾಕಿಂಗ್, ಮಕ್ಕಳಿಗೆ ಆಟದ ಸ್ಥಳವಾಗಿ ಬಳಕೆಯಾಗುತ್ತಿದೆ ಎನ್ನುತ್ತಾರೆ ಅಲ್ಲಿಯ ನಿವಾಸಿ ಗಂಗಮ್ಮ. ಹೌಸಿಂಗ್ ಬಫರ್ಡ್ ಕಾಲೊನಿಯಲ್ಲೂ ಇದೇ ಸ್ಥಿತಿ.

ಬಡಾವಣೆ ಅಭಿವೃದ್ದಿ ಪಡಿಸುವ ಜವಾಬ್ದಾರಿ ನಿರ್ವಹಿಸಿದ ರಾಜು ನವಲಿ ಪ್ರತಿಕ್ರಿಯಿಸಿ, ‘ಹಿರೇಮಠದವರ ಲೇಔಟ್ನಲ್ಲಿ ಸುಸಜ್ಜಿತ ಉದ್ಯಾನ ನಿರ್ಮಿಸಲು ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿತ್ತು. ರಾತ್ರಿ ಬಾಟಲಿ, ಮಾಂಸಾಹಾರ ಸೇವನೆ ನಡೆದಿರುವುದನ್ನು ಕಂಡು ಉದ್ಯಾನ ಮಾಡುವುದು ಕೈಬಿಟ್ಟೆವು ಎಂದರು. ಇನ್ನು 15ನೇ ವಾರ್ಡ್ನಲ್ಲಿ ಎಸ್ಎಸ್ಕೆ ಸಮಾಜದ ಬಡಾವಣೆ ಬಿಟ್ಟರೆ, ಅರಳಿ ಬಡಾವಣೆ, ಅನ್ನಪೂರ್ಣೇಶ್ವರಿ ಬಡಾವಣೆ, ದತ್ತಾತ್ರೇಯ ಬಡಾವಣೆಯಲ್ಲಿ ಬಡಾವಣೆ ನಿರ್ಮಿಸಿದವರೇ ಉದ್ಯಾನ ನಿರ್ಮಿಸಿದ್ದು, ಮಕ್ಕಳು, ಮಹಿಳೆಯರು ಉಪಯೋಗಿಸುತ್ತಿದ್ದಾರೆ ಎನ್ನುತ್ತಾರೆ ಶರಣು. ನಗಾರಿ

ಪಾಲನೆ ಇಲ್ಲ: ‘ಪುರಸಭೆ ಹೊಸ ಬಡಾವಣೆ ನಿರ್ಮಾಣವಾದಾಗ ಸಿಎ ಸೈಟ್, ಅದರ ಅಭಿವೃದ್ಧಿ ಪೂರ್ಣಗೊಂಡ ಮೇಲೆಯೇ ನಿವೇಶನಗಳ ಫಾರ್ಮ್ 3 ಸಹಿತ ಇತರ ದಾಖಲೆಗಳನ್ನು ನೀಡಬೇಕು. ಬಡಾವಣೆ ನಿರ್ಮಾಣ ಮಾಡಿದವರಿಂದ ಬಕ್ಷೀಸು ಪಡೆದು, ದಾಖಲೆ ನೀಡುತ್ತಿರುವುದರಿಂದ ಹೊಸ ಬಡಾವಣೆಗಳಲ್ಲಿ ಉದ್ಯಾನದ ನೆರಳೂ ಇಲ್ಲದಂತಾಗಿದೆ’ ಎಂಬ ಆರೋಪ ಜನರಿಂದ ಕೇಳಿಬರುತ್ತಿದೆ.

ಯಾರು ಏನು ಹೇಳುತ್ತಾರೆ?

ಈಗ ಉದ್ಯಾನಕ್ಕೆ ಅನುದಾನ ಮಂಜೂರಾಗಿದ್ದು, ಶೀಘದಲ್ಲೇ ಉದ್ಯಾನ ನಿರ್ಮಾಣ ಅಗಲಿದೆ. ಬರುವ ದಿನಗಳಲ್ಲಿ ಉದ್ಯಾನ ನಿರ್ಮಾಣ, ನಿರ್ವಹಣೆ, ಸೌಕರ್ಯ ಒದಗಿಸಲು ಆದ್ಯತೆ ನೀಡಲಾಗುವುದು
ಸಾಬಣ್ಣ ಕಟ್ಟೀಕಾರ್, ಮುಖ್ಯಾಧಿಕಾರಿ

ಇರುವ ಉದ್ಯಾನಗಳ ನಿರ್ವಹಣೆಯ ಜವಾಬ್ದಾರಿ ಪುರಸಭೆಯದ್ದೇ. ಉದ್ಯಾನ ಕಾಪಾಡುವ, ರಕ್ಷಿಸುವ ಜವಬ್ದಾರಿತನ ನಾಗರಿಕರೂ ತೆಗೆದುಕೊಂಡರೆ ಅನುಕೂಲವಾಗುವುದು
ಪಾಮಣ್ಣ ಗಿಣಿವಾರ ಕಾರಟಗಿ

ರಾಜಕೀಯ, ಸ್ವಹಿತಾಸಕ್ತಿ ಬಿಟ್ಟು ಉದ್ದೇಶಿತ ಕೆರೆ ನಿರ್ಮಾಣ, ವಾಯುವಿಹಾರಕ್ಕೆ ರಸ್ತೆ, ಆಸನ, ಮಕ್ಕಳಿಗೆ ಆಟವಾಡಲು ಉದ್ಯಾನ ನಿರ್ಮಿಸಲು ಸಚಿವರು ಮುಂದಾಗಬೇಕು.
ಪ್ರಹ್ಲಾದ ಜೋಶಿ ಜಾಗೃತ ಯುವಕ ಸಂಘ, ಕಾರಟಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.