ಕಾರಟಗಿ: ಪಟ್ಟಣದ ಸುಂಕಲಮ್ಮ ಬೈಲ್ ಹತ್ತಿರದ ಸಾರ್ವಜನಿಕ ರುದ್ರಭೂಮಿಯಲ್ಲಿ ಜಾನುವಾರು ಕಟ್ಟಲು ಹಾಗೂ ಬಣವೆ ಹಾಕಲು ಸ್ಥಳ ಮೀಸಲಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕಾಧ್ಯಕ್ಷ ನಾರಾಯಣಪ್ಪ ಈಡಿಗೇರ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿಗೆ ಸೋಮವಾರ ಮನವಿ ಸಲ್ಲಿಸಿದರು.

ರುದ್ರಭೂಮಿಯ 1 ರಿಂದ 4 ಸರ್ವೆ ನಂಬರ್ನ ಜಾಗದಲ್ಲಿ ಸುತ್ತಲಿನ 30ಕ್ಕೂ ಹೆಚ್ಚು ಕುಟುಂಬಗಳು ಕಳೆದ ಅನೇಕ ದಶಕಗಳಿಂದ ಬಣವೆ, ಜಾನುವಾರು ಕಟ್ಟುತ್ತಾ ಬಂದಿದ್ದು, ರುದ್ರಭೂಮಿ ಅಭಿವೃದ್ಧಿ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸದಿರಿ ಎಂದು ಆಗ್ರಹಿಸಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕಾಧ್ಯಕ್ಷ ನಾರಾಯಣಪ್ಪ ಈಡಿಗೇರ ಮಾತನಾಡಿ, ‘ಪಟ್ಟಣದ ಎಲ್ಲಾ ಜನಾಂಗದವರು ಸೇರಿ ಸಾರ್ವಜನಿಕ ರುದ್ರಭೂಮಿ ಅಭಿವೃದ್ದಿಗೆ ಮುಂದಾಗಿರುವುದಕ್ಕೆ ವಿರೋಧವಿಲ್ಲ. ಆದರೆ ಬಡ ಜನರು ಈ ಜಾಗೆಯಲ್ಲಿ ಬಣವೆ ಇಟ್ಟಿದ್ದು, ರಾತ್ರಿಯಾದರೂ ಸರಿ ಹುಲ್ಲು ತರಬಹುದಾಗಿದೆ. ಜಾನುವಾರುಗಳು ಸುರಕ್ಷಿತವಾಗಿರುತ್ತವೆ. ರೈತರಿಗೆ ಅಗತ್ಯವಿರುವಷ್ಟು ಜಾಗೆ ಒಂದೆಡೆ ನೀಡಿ, ಉಳಿದ ಜಾಗೆಯನ್ನು ಸಾರ್ವಜನಿಕ ರುದ್ರಭೂಮಿಗೆ ಬಳಸಬೇಕು’ ಎಂದರು.

ಗ್ರೇಡ್- 2 ತಹಶೀಲ್ದಾರ್ ಷಣ್ಮುಖಪ್ಪ ಮನವಿ ಸ್ವೀಕರಿಸಿ, ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-35-1160423153

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.