ಕಾರಟಗಿ: ‘ತಾಲ್ಲೂಕಿನ ಯರಡೋಣಾ ಕೆರೆಯ ಮಣ್ಣನ್ನು ರೈತರ ಭೂಮಿಗೆ ಹಾಕಿಕೊಳ್ಳಲು ಅನುಮತಿ ನೀಡಬೇಕು. ಮಾರಾಟ ಮಾಡುವ ಉದ್ದೇಶ ನಮಗಿಲ್ಲ’ ಎಂದು ಯರಡೋಣಾ ಗ್ರಾಮದ ರೈತರು ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಶನಿವಾರ ಮನವಿ ಮಾಡಿಕೊಂಡರು.

ಮುಖಂಡ ರವಿಸಿಂಗ್ ಮಾತನಾಡಿ, ‘ಅತಿ ದೊಡ್ಡ ಕೆರೆಯಾಗಿದ್ದರೂ ಅದರ ಅಭಿವೃದ್ಧಿಗೆ ಸರ್ಕಾರ ಅಥವಾ ಇಲಾಖೆ ಮುಂದಾಗಿಲ್ಲ. ಈ ಕೆರೆಯ ನೀರಿನಿಂದ ಸಾವಿರಾರು ರೈತರು ಕೃಷಿ ಮಾಡುತ್ತಾ ಬರುತ್ತಿದ್ದಾರೆ. ಪ್ರತಿ ವರ್ಷ ರೈತರು ಸ್ವಯಂ ಸ್ಪೂರ್ತಿಯಿಂದ ಕೆರೆಯ ಹೂಳನ್ನು ತೆಗೆಯುತ್ತಾರೆ. ಫಲವತ್ತತೆಯ ಮಣ್ಣನ್ನು ರೈತರು ತಮ್ಮ ಜಮೀನುಗಳಿಗೆ ಹಾಕಿಕೊಳ್ಳುತ್ತಾರೆ. ಆದರೆ, ಪೊಲೀಸರು ಮತ್ತು ಕೆಲ ಅಧಿಕಾರಿಗಳು ಅಕ್ರಮ ಮಣ್ಣು ಸಾಗಾಟ ಮಾಡಲಾಗುತ್ತಿದೆ ಎಂದು ರೈತರಿಗೆ ತೊಂದರೆ ಕೊಡುತ್ತಿದ್ದಾರೆ’ ಎಂದರು.

ರೈತರು ಈ ಮಣ್ಣನ್ನು ಮಾರಾಟ ಮಾಡುತ್ತಿಲ್ಲ, ಕೇವಲ ತಮ್ಮ ಜಮೀನಿಗೆ ಹಾಕಿಕೊಳ್ಳುತ್ತಾರೆ. ಇದಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ರೈತರ ಮನವಿ ಆಲಿಸಿ, ಪ್ರತಿಕ್ರಿಯಿಸಿದ ಇನ್ಸ್ಪೆಕ್ಟರ್ ಸುದೀರಕುಮಾರ ಬೆಂಕಿ, ‘ಕೆರೆಯಲ್ಲಿನ ಮಣ್ಣನ್ನು ಹೊಲಗಳಿಗೆ ಹಾಕಿಕೊಳ್ಳಲು ನಮ್ಮದೇನು ತಕರಾರು ಇಲ್ಲ. ಆದರೆ ಸಂಬಂಧಿಸಿದ ಇಲಾಖೆಯ ಅಥವಾ ತಹಶೀಲ್ದಾರ್ ಅನುಮತಿ ಪಡೆದುಕೊಳ್ಳಬೇಕು. ಇದರಿಂದ ಯಾರಿಗೂ ಸಮಸ್ಯೆಯಾಗುವುದಿಲ್ಲ. ಅಕ್ರಮ ಮಾರಾಟ, ಸಾಗಾಟ ಮಾಡುತ್ತಿದ್ದಾರೆ ಎಂದು ದೂರು ಬಂದರೆ ನಾವು ಕ್ರಮ ಕೈಗೊಳ್ಳಬೇಕಾಗುತ್ತದೆ. ರೈತರು ಇಲಾಖೆ ಅನುಮತಿ ಪಡೆಯುವವರೆಗೆ ಕೆರೆಯಿಂದ ಮಣ್ಣು ತಗೆಯಬಾರದು ಎಂದರು.

ಬಸವರಾಜ ನಾಯಕ, ವಿ. ಶರಣಪ್ಪ, ಸುಗ್ಗೆಹಳ್ಳಿ ಶರಣಪ್ಪ, ಬಜಾರ್ ವೀರೇಶ, ಗಂಗಪ್ಪ, ಅಯ್ಯಪ್ಪ, ಭಾಷಪ್ಪ, ಜಿ. ಈರಪ್ಪ, ಬೀರಪ್ಪ, ಮಂಜು, ಮಂಜುನಾಥ, ವೀರೇಶ, ಕರೀಯಪ್ಪ, ದಮ್ಮೂರು ಸಿದ್ದಪ್ಪ, ಅಮರಗುಂಡಪ್ಪ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-35-139197357

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.