ಕಾರಟಗಿ: ಪಟ್ಟಣದ ಕೆರೆಬಸವೇಶ್ವರ ಜಾತ್ರೆಯು ಬಸವ ಜಯಂತಿ ದಿನವಾದ ಸೋಮವಾರ ನಡೆಯಲಿದೆ.

ಈಗಾಗಲೇ ದೇವಾಲಯದ ಆವರಣವನ್ನು ಪುರಸಭೆಯಿಂದ ಸ್ವಚ್ಚಗೊಳಿಸಿ, ಪಾದಗಟ್ಟೆಯವರೆಗೂ ರಸ್ತೆಯನ್ನು ಸಮತಟ್ಟು ಮಾಡಲಾಗಿದೆ. ದೇವಾಲಯಕ್ಕೆ ಬಣ್ಣ ಹಚ್ಚಿ, ಭಕ್ತರಿಗೆ ದರ್ಶನ, ಕಾಯಿ, ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡುವ ಕಾರ್ಯ ನಡೆದಿರುವುದು ಭಾನುವಾರ ಕಂಡುಬಂತು.

ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯ, ಬೂದಗುಂಪಾ ಕೊಟ್ಟೂರ ಶಾಖಾಮಠದ ಸಿದ್ದೇಶ್ವರ ಶ್ರೀ, ಹಿರೇಮಠದ ಮರುಳಸಿದ್ದಯ್ಯಸ್ವಾಮಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಅಂದು ಕಳಸಾಧಾರಣೆ, ಧ್ವಜಾರೋಹಣ, 501 ರುದ್ರಾಕ್ಷಿ ಧಾರಣೆ, ಸಂಜೆ ಉಚ್ಚಾಯ ಕಾರ್ಯಕ್ರಮ ನಡೆಯಲಿದೆ.

ವಚನ ಲಹರಿ ಕಲಾ ತಂಡದ ರೆಹಮಾನ್ಸಾಬ ನದಾಫ್ ಮತ್ತವರ ತಂಡದಿಂದ ಸಂಗೀತ ಕಾರ್ಯಕ್ರಮ ಸಂಜೆ ನಡೆಯಲಿದೆ. ಪಟ್ಟಣ ಸಹಿತ ತಾಲ್ಲೂಕಿನ ವಿವಿಧ ಗ್ರಾಮಗಳ ಭಕ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಹಾಗೂ ವರ್ತಕರು ತಮ್ಮ ವ್ಯಾಪಾರ ಸ್ಥಗಿತಗೊಳಿಸಿ ಜಾತ್ರಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ವೀರಶೈವ ಯುವಕ ಸಂಘದ ವಿವಿಧ ಘಟಕಗಳ ಪದಾಧಿಕಾರಿಗಳು ಕೋರಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-35-7357498

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.