ಕಾರಟಗಿ: ‘ದೇಶದ ಪ್ರಗತಿ, ಅಭಿವೃದ್ಧಿಯ ಹಿಂದೆ ಕಾರ್ಮಿಕರ ಕಠಿಣ ಪರಿಶ್ರಮ ಅಡಗಿರುತ್ತದೆ. ಕಾರ್ಮಿಕರಿಗೆ ಸುರಕ್ಷತೆಯ ಜೊತೆಗೆ ಸರ್ಕಾರದ ಪ್ರೋತ್ಸಾಹಕರ ಯೋಜನೆಗಳ ಅಗತ್ಯ ಇದೆ. ಪರಿಶ್ರಮ ಜೀವಿಗಳು ಒತ್ತಡದ ಕೆಲಸದ ಮಧ್ಯೆ ಕಾರ್ಮಿಕ ದಿನಾಚರಣೆಯ ಸಂಭ್ರಮದಲ್ಲಿ ಮುಳುಗಿರುವುದು ಶ್ಲಾಘನಾರ್ಹ’ ಎಂದು ಅಕ್ಕಿ ಗಿರಣಿ ಫಿಟ್ಟರ್ಸ್ ಮತ್ತು ಹೆಲ್ಪರ್ಸ್ ಯೂನಿಯನ್ ಅಧ್ಯಕ್ಷ ರಮೇಶ ನಾಯಕ ಜನೌಷಧ ಹೇಳಿದರು.

ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಅಕ್ಕಿ ಗಿರಣಿ ಫಿಟ್ಟರ್ಸ್ ಮತ್ತು ಹೆಲ್ಪರ್ಸ್ ಯೂನಿಯನ್ ಶನಿವಾರ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ಮರುಳಸಿದ್ದಯ್ಯಸ್ವಾಮಿ ಹಿರೇಮಠ, ಅರಿಹಂತ ಎಂಟರಪ್ರೈಸಸ್ನ ಉದಯಕುಮಾರ ದುಂಡಸಿ ಮಾತನಾಡಿ, ‘ಕಾರ್ಮಿಕರ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಸರ್ಕಾರವು ಕಾರ್ಮಿಕ ಇಲಾಖೆ ಮೂಲಕ ಎಲ್ಲಾ ವಲಯಗಳ ಕಾರ್ಮಿಕರಿಗಾಗಿ ಸಾಮಾಜಿಕ ಭದ್ರತೆ, ಸುರಕ್ಷತೆ ಮತ್ತು ಹಕ್ಕುಗಳ ರಕ್ಷಣೆಗಾಗಿ ವಿವಿಧ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸದುಪಯೋಗಕ್ಕೆ ಕಾರ್ಮಿಕರು ಮುಂದಾಗಬೇಕು’ ಎಂದರು.

ಕಾರ್ಮಿಕರಿಗೆ ಸನ್ಮಾನ: ಸಂಘದ ಪ್ರಧಾನ ಕಾರ್ಯದರ್ಶಿ ಮೌಲಾಲಿ ಬೂದಿಹಾಳ್, ಖಜಾಂಚಿ ಮಲ್ಲಪ್ಪ ನರಗುಂದ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿ ಕಾರ್ಮಿಕರ ಸಂಘದ ನೂತನ ಅಧ್ಯಕ್ಷ ಚಿನ್ನ ಹನುಮಂತರೆಡ್ಡಿ, ಉದ್ಯಮಿ ಉದಯಕುಮಾರ, ಹಿರಿಯ ಫಿಟ್ಟರ್ಸ್ ಮತ್ತು ಹೆಲ್ಪರ್ಸ್ಗಳಾದ ಹನುಮಂತಪ್ಪ ನಾಯಕ, ಚಾಂದ್, ಲಾಲಸಾಬ, ಬಸವನಗೌಡ, ವಿರೂಪಾಕ್ಷಿ, ಮುರುಳಿಕೃಷ್ಣ, ಬಸವರಾಜ್, ಮಹಾಂತೇಶ್, ಹನುಮಂತಪ್ಪ, ಶಿವಪ್ಪ, ಭೀಮಸಿಂಗ್ ಸೇರಿದಂತೆ ವಿವಿಧ ಅಕ್ಕಿಗಿರಣಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಗಣ್ಯರು ಸನ್ಮಾನಿಸಿದರು.

ಬೃಹತ್ ಮೆರವಣಿಗೆ: ಕಾರ್ಮಿಕರ ದಿನಾಚರಣೆ ನಿಮಿತ್ತ ಅಕ್ಕಿಗಿರಣಿ ಫಿಟ್ಟರ್ಸ್ ಮತ್ತು ಹೆಲ್ಪರ್ಸ್ಗಳ ಸಂಘದ ಪದಾಧಿಕಾರಿಗಳು, ನೂರಾರು ಕಾರ್ಮಿಕರು ಬೃಹತ್ ಮೆರವಣಿಗೆ ನಡೆಸಿದರು. ಎಪಿಎಂಸಿಯಿಂದ ಆರಂಭಗೊಂಡ ಮೆರವಣಿಗೆ ಸಭೆ ನಡೆಯುವ ಸ್ಥಳದವರೆಗೆ ಸಾಗಿತು. ಶಿಕ್ಷಕ ಜಗದೀಶ ಭಜಂತ್ರಿ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-35-942318134

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.