ಕಾರಟಗಿ: ‘ಪಟ್ಟಣದ ಗ್ರಾಮೀಣ ಸಂತೆ ಮಾರುಕಟ್ಟೆ ಪ್ರದೇಶದಲ್ಲಿ ಮಾಂಸ ಮಾರಾಟ ಅಂಗಡಿಗಳು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದು ಇದರಿಂದ ದುರ್ವಾಸನೆ ಹೆಚ್ಚುತ್ತಿದೆ. ಶೀಘ್ರ ದುರ್ವಾಸನೆ ಮುಕ್ತಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಸ್ಥಳೀಯ ನಿವಾಸಿಗಳು ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರ್ ಅವರಿಗೆ ಮನವಿ ಸಲ್ಲಿಸಿದರು.

ವಾರ್ಡ್ ನಂ.11 ಸೇರಿದಂತೆ ಸುತ್ತಲಿನ ಬಡಾವಣೆ ನಿವಾಸಿಗಳು ದುರ್ವಾಸನೆಯಿಂದ ವಾಸಿಸುವುದು ಕಷ್ಟವಾಗಿದೆ. ರೋಗ, ರುಜಿನಗಳ ಆತಂಕ ಹೆಚ್ಚಾಗಿದೆ. ಮಾಂಸ ಮಾರಾಟಗಾರರಿಗೆ ಸೂಕ್ತ ನಿರ್ದೇಶನ ನೀಡಿ, ದುರ್ವಾಸನೆ ಬರುವುದನ್ನು ತಡೆಯಬೇಕು ಎಂದು ಒತ್ತಾಯಿಸಿದರು.

ವಾರ್ಡ್ನ ನಿವಾಸಿ ಶಿವರಾಜ್ ವಿ. ದಾನನಗೌಡ ಮಾತನಾಡಿ, ‘ಸಂತೆ ಮಾರುಕಟ್ಟೆಯಲ್ಲಿನ ಚಿಕನ್ ಹಾಗೂ ಮಟನ್ ಮಾರಾಟಗಾರರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬೀಸಾಡುವುದರಿಂದ ಬೀದಿನಾಯಿಗಳ ಹಾವಳಿ ಅಧಿಕವಾಗಿದೆ. ದುರ್ವಾಸನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸೊಳ್ಳೆ ಮತ್ತಿತರ ಕ್ರಿಮಿಕೀಟಗಳ ಹಾವಳಿಯಿಂದ ಜನರು ಆನಾರೋಗ್ಯದಿಂದ ಬಳಲುವಂತಾಗಿದೆ’ ಎಂದರು.

ಮನವಿ ಸ್ವೀಕರಿಸಿದ ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು ಮಾತನಾಡಿ, ‘ಶೀಘ್ರವೇ ಚಿಕನ್ ಮತ್ತು ಮಟನ್ ವ್ಯಾಪಾರಿಗಳಿಗೆ ಸ್ವಚ್ಚತೆ ಕಾಪಾಡಲು ಸೂಚಿಸಲಾಗುವುದು. ಪುರಸಭೆಯಿಂದ ತ್ಯಾಜ್ಯ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ವಾರ್ಡ್ನ ನಿವಾಸಿ ಪ್ರಶಾಂತ ನಾಯಕ, ವೆಂಕಟೇಶ ಕೋಟೆ, ಬೋನಾಬಾಯಿ, ನಿರ್ಮಲಮ್ಮ ಬಡಿಗೇರ, ಮಲ್ಲಮ್ಮ ಬಡಿಗೇರ, ಶಕುಂತಲಮ್ಮ, ರತ್ಮಮ್ಮ, ದ್ಯಾವಮ್ಮ ಬಡಿಗೇರ, ಹನುಮೇಶ ನಾಯಕ, ರಾಮಸಿಂಗ್, ಭವಾನಿ ಸಿಂಗ್, ಆಕಾಶ್ ಮಡ್ಡೇರ್ ಸಹಿತ ಅನೇಕರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-35-309517153

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.