ಕಾರಟಗಿ: ಮಳೆ, ಗಾಳಿಯಿಂದ ಪಟ್ಟಣದಲ್ಲಿ ಸಾಕಷ್ಟು ಸಮಸ್ಯೆಗಳಾಗಬಹುದು. ತಗ್ಗು ಪ್ರದೇಶದಲ್ಲಿ ಮಳೆ ನೀರು ನಿಂತು ಸಮಸ್ಯೆಯಾಗುವುದನ್ನು ತಪ್ಪಿಸಲು ಈಗಾಗಲೇ ಪುರಸಭೆಯಿಂದ ಚರಂಡಿ ಮತ್ತು ರಾಜಕಾಲುವೆ ಸ್ವಚ್ಛತೆ ಮುಂದಾಗಿದೆ. ಮಳೆಯಿಂದ ಸಮಸ್ಯೆಯಾದರೆ ತಕ್ಷಣವೇ ಪುರಸಭೆಗೆ ಮಾಹಿತಿ ನೀಡಿದರೆ ಪರಿಹಾರಕ್ಕೆ ಸ್ಪಂದಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟೀಕಾರ ತಿಳಿಸಿದರು.

ಮಳೆಯಿಂದ ಉಂಟಾಗುವ ಸಮಸ್ಯೆ, ಆರೋಗ್ಯ ರಕ್ಷಣೆಗೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ವಾರ್ಡ್ಗಳ ಸದಸ್ಯರು, ಸಾರ್ವಜನಿಕರು ತಮ್ಮ ವಾರ್ಡ್ನ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರೆ ಪರಿಹಾರಕ್ಕೆ ತುರ್ತು ಕ್ರಮಕೈಗೊಳ್ಳಲಾಗುವುದು. ಪುರಸಭೆಗೆ ಲಿಖಿತ ದೂರುಗಳನ್ನು ದಾಖಲಿಸಲು ಸಹಾಯವಾಣಿಯನ್ನು ಆರಂಭಿಸಲಾಗಿದೆ. 08539-274232, 7406521364, 9538541974, 6362966177 ಸಂಪರ್ಕಿಸಬೇಕು. ಸಾರ್ವಜನಿಕರು ಚರಂಡಿಗಳಲ್ಲಿ ಕಸವನ್ನು ಎಸೆಯದೇ ನಮ್ಮ ವಿಲೇವಾರಿ ವಾಹನಗಳಿಗೆ ನೀಡಬೇಕು. ಚರಂಡಿಯಲ್ಲಿ ನೀರು ಸಲೀಸಾಗಿ ಹರಿಯಲು ಸಹಕರಿಸಬೇಕು ಎಂದು ಕೋರಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-35-62806044

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.