ಸೋಮವಾರ, ಮೇ 17, 2021
21 °C

ಕಸಾಪ: ವೀರಣ್ಣ ನಿಂಗೋಜಿ ಪರ ಪ್ರಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಣವಾಳ (ಗಂಗಾವತಿ): ‘ಜಿಲ್ಲೆಯಲ್ಲಿ ಕಸಾಪದ ಮೂಲ ಉದ್ದೇಶ ಈಡೇರಬೇಕಾದರೆ ಆಜೀವ ಸದಸ್ಯರು ವೀರಣ್ಣ ನಿಂಗೋಜಿಗೆ ಮತ ನೀಡಬೇಕು’ ಎಂದು ಕಸಾಪ ಜಿಲ್ಲಾ ಘಟಕದ ನಿಕಟಪೂರ್ವ ಗೌರವ ಕಾರ್ಯದರ್ಶಿ ಶಿವಾನಂದ ಮೇಟಿ ಮನವಿ ಮಾಡಿದರು.

ತಾಲ್ಲೂಕಿನ ಹಣವಾಳ ಗ್ರಾಮದಲ್ಲಿ ಭಾನುವಾರ ನಡೆದ ಕಸಾಪ ಆಜೀವ ಸದಸ್ಯರ ಸಭೆಯಲ್ಲಿ ಮಾತನಾಡಿದರು.

‘ದತ್ತಿನಿಧಿ, ಕಾವ್ಯಕಮ್ಮಟ, ಸಾಹಿತ್ಯ ಸಮ್ಮೇಳನ ಹೀಗೆ ಹತ್ತು ಹಲವು ಕೆಲಸಗಳನ್ನು ಮಾಡಬೇಕು. ಕೆಲವರು ಕಸಾಪವನ್ನು ತಾವು ಬೆಳೆಯಲು ಬಳಕೆ ಮಾಡಿಕೊಂಡಿದ್ದಾರೆ. ಜಾತಿ, ಸ್ವಜನ ಪಕ್ಷಪಾತ ಮಾಡಿ ಕಸಾಪ ಹೆಸರು ಕೆಡಿಸಿದ್ದಾರೆ. ಇದನ್ನು ಸರಿಪಡಿಸಲು ವೀರಣ್ಣ ನಿಂಗೋಜಿ ಯಂಥ ಸರಳ ವ್ಯಕ್ತಿಯ ಅವಶ್ಯಕತೆ ಇದೆ. ಕೊಪ್ಪಳಕ್ಕೆ ವೀರಣ್ಣ ನಿಂಗೋಜಿ, ರಾಜ್ಯಕ್ಕೆ ನಾಡೋಜ ಡಾ.ಮಹೇಶ ಜೋಶಿ ಅವರನ್ನು ಎಲ್ಲರೂ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಕುಮಾರೆಪ್ಪ ಸಿಂಗನಾಳ, ಮಹಾಲಿಂಗಪ್ಪ, ಶಿವಾನಂದ ಬೆನಕನಾಳ, ಕಸಾಪ ಆಜೀವ ಸದಸ್ಯರಾದ ವಿರೇಶಪ್ಪ ಮಾಲಿ ಪಾಟೀಲ, ಎಚ್.ಬಸವನಗೌಡ, ಜಗದೀಶ, ವೀರೇಶಪ್ಪ ಸಿದ್ದಾಪುರ, ಶಿವಪ್ಪ ದಾನಶೆಟ್ಟಿ, ಬಸವರಾಜ ಹಣವಾಳ, ಶಿವಮೂರ್ತಿ ಹಣವಾಳ, ವೀರಭದ್ರಗೌಡ ಆರ್ಹಾಳ, ಶರಣಪ್ಪ ನಡಲಮನಿ, ಯಂಕರೆಡ್ಡಿ ಹೇರೂರು ಮೋದಿ ಹಾಗೂ ಶರಣಪ್ಪ ಡಣಾಪೂರ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.