ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಿ

ಮುಸ್ಲಿಂ ಸಮುದಾಯದವರಿಗೆ ಕಿಟ್ ವಿತರಣೆ: ಸಂಸದ ಸಂಗಣ್ಣ ಕರಡಿ ಹೇಳಿಕೆ
Last Updated 30 ಏಪ್ರಿಲ್ 2022, 2:26 IST
ಅಕ್ಷರ ಗಾತ್ರ

ಮುನಿರಾಬಾದ್: ‘ಮನುಷ್ಯನಲ್ಲಿ ಸಂಪತ್ತು ಮಾತ್ರ ಇದ್ದರೆ ಸಾಲದು, ಇನ್ನೊಬ್ಬರಿಗೆ ಸಹಾಯ ಹಾಗೂ ದಾನ ಮಾಡುವ ಗುಣ ಬೆಳೆಸಿಕೊಳ್ಳಬೇಕು’ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ಇಲ್ಲಿನ ಚೆಲ್ಲಯ್ಯ ಕ್ಯಾಂಪ್‌ನ ಗುಲಾಮ್ ಹುಸೇನ್ ಫೌಂಡೇಶನ್ ಟ್ರಸ್ಟ್ ವತಿಯಿಂದ ಗುರುವಾರ ನಡೆದ ಆಹಾರ ಧಾನ್ಯದ ಕಿಟ್ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.

ಮುಸ್ಲಿಂ ಸಮುದಾಯದವರು ರಂಜಾನ್ ಹಬ್ಬದ ಸಂದರ್ಭದಲ್ಲಿ ಉಪವಾಸ ವ್ರತ ಕೈಗೊಳ್ಳುತ್ತಾರೆ. ಈ ಸಂದರ್ಭದಲ್ಲಿ ಆಹಾರದ ಮಹತ್ವ ಮನವರಿಕೆಯಾಗುತ್ತದೆ. ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಉಳ್ಳವರು ಎಲ್ಲರೂ ಸಂಭ್ರಮದಿಂದ ಹಬ್ಬ ಆಚರಿಸಲು ಅನುವಾಗುವಂತೆ ಸಮಾಜದ ಬಡ ಜನತೆಗೆ ಆಹಾರ ಸಾಮಗ್ರಿ ಕಿಟ್ ವಿತರಿಸುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ವಿವಿಧ ಆರೋಗ್ಯ ಸೌಲಭ್ಯ, ತರಬೇತಿ ನೀಡುವ ಮೂಲಕ ಸ್ವಯಂ ಉದ್ಯೋಗ ಹೊಂದಲು ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಅಲ್ಪಸಂಖ್ಯಾತರು ಇದರ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು.

ಟ್ರಸ್ಟ್‌ನ ಅಧ್ಯಕ್ಷ ಇಕ್ಬಾಲ್ ಹುಸೇನ್ ಮತ್ತು ಪದಾಧಿಕಾರಿಗಳು ಆಹಾರ ಸಾಮಗ್ರಿ ಕಿಟ್ ವಿತರಿಸಿದರು.

ಟ್ರಸ್ಟ್‌ನ ಉಪಾಧ್ಯಕ್ಷ ಕೊಟ್ರಪ್ಪ ಅಂಗಡಿ, ಗೌರವಾಧ್ಯಕ್ಷ ಎಂ.ವಲಿಸಾಬ್, ಸರವಣ್ಣ, ಅನ್ವರ್ ಅಲಿ, ಶಾದಿಮಹಲ್ ಸಮಿತಿಯ ಅಧ್ಯಕ್ಷ ಚಂದುಸಾಬ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಖಾಜಾವಲಿ ಕಿನ್ನಾಳ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಭಾನು ಬಿ ಚಂದುಸಾಬ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಾಳೆಪ್ಪ, ಸದಸ್ಯರಾದ ಸಂಜೋತ ಹಾಗೂ ಭಾರತಿ ಇದ್ದರು.

ಸುಮಾರು 200 ಜನರಿಗೆ ಕಿಟ್ ಹಂಚಲಾಯಿತು. ಎಚ್.ಎಸ್.ಹೊನ್ನುಂಚಿ ಅವರು ಸ್ವಾಗತಿಸಿ, ನಿರೂಪಿಸಿದರು.

‘ಸಜ್ಜನ್‌ ಸೇವೆ ಸಾರ್ಥಕ’

ಕನಕಗಿರಿ: ‘ಡಿಸೆಂಬರ್-2021ರ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಸಂಗಪ್ಪ ಸಜ್ಜನ್ ಅವರು ಮಾತು ಕೊಟ್ಟಂತೆ ನಡೆದುಕೊಳ್ಳುತ್ತಿರುವುದು ಸಂತಸದ ವಿಷಯವಾಗಿದೆ. ಅವರ ಸೇವೆ ಸಾರ್ಥಕ’ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ಅವರು ತಿಳಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯ ಸಂಗಪ್ಪ ಸಜ್ಜನ್ ಅವರು ರಂಜಾನ್ ಹಬ್ಬದ ಅಂಗವಾಗಿ ಇಲ್ಲಿನ 10ನೇ ವಾರ್ಡ್‌ನ ಮುಸ್ಲಿಂ ಸಮುದಾಯದವರಿಗೆ ನೀಡಿದ ಆಹಾರ ಸಾಮಗ್ರಿಗಳ ಕಿಟ್‌ ವಿತರಿಸಿ ಮಾತನಾಡಿದರು.

ಚುನಾವಣೆಗೆ ಮುಂಚೆ ಹಾಗೂ ಕೊರೊನಾ ಸಮಯದಲ್ಲಿ ಸಜ್ಜನ್ ಅವರು ಎಲ್ಲ ಸಮುದಾಯದವರಿಗೆ ಎರಡು ವರ್ಷಗಳ ಕಾಲ ಆಹಾರ ಧಾನ್ಯದ ಕಿಟ್ ವಿತರಿಸಿ ಕಷ್ಟದ ಸಮಯದಲ್ಲಿ ಜನರ ಕೈ ಹಿಡಿದು ಮಾದರಿಯಾಗಿದ್ದಾರೆ ಎಂದು ಅವರು ಹೇಳಿದರು.

ಪಟ್ಟಣ ಪಂಚಾಯಿತಿ ಸದಸ್ಯ ಸಂಗಪ್ಪ ಸಜ್ಜನ್ ಮಾತನಾಡಿ,‘ಚುನಾವಣೆಯಲ್ಲಿ ಭರವಸೆ ನೀಡಿದಂತೆ ಜನರ ಸೇವೆ ಮಾಡಲು ಬದ್ದನಾಗಿರುವೆ. ಮತದಾರರ ಋಣ ತೀರಿಸಲು ಸಾಧ್ಯವಿಲ್ಲ’ ಎಂದು ಅವರು ತಿಳಿಸಿದರು.

ಹಾಲುಮತ ಕುರುಬ ಸಮಾಜದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಸಿದ್ದಪ್ಪ ನಿರ್ಲೂಟಿ, ಕಾಂಗ್ರೆಸ್ ವಕ್ತಾರ ಶರಣಬಸಪ್ಪ ಭತ್ತದ, ಎಪಿಎಂಸಿ ಮಾಜಿ ನಿರ್ದೇಶಕ ಇಮಾಮಸಾಬ ಎಲಿಗಾರ ಅವರು ಸಂಗಪ್ಪನವರ ಸೇವೆಯನ್ನು ಗುಣಗಾನ ಮಾಡಿದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ಕಂಠೆಪ್ಪ ನಾಯಕ, ನೂರಸಾಬ ಗಡ್ಡಿಗಾಲ, ಪ್ರಮುಖರಾದ ಹಿರೇರಾಜಸಾಬ ಎಲಿಗಾರ, ಟಿ, ಸಂಗಪ್ಪ, ಶೇಖರಪ್ಪ ಭಾವಿಕಟ್ಟಿ, ಚಂದುಸಾಬ ಗುರಿಕಾರ, ಪ್ರಶಾಂತ ಪ್ರಭುಶೆಟ್ಟರ್, ಖಾಜಾಸಾಬ ಗುರಿಕಾರ, ಅನ್ನು ಚಳ್ಳಮರದ, ಖಾದರಬಾಷ ಗುಡಿಹಿಂದಲ, ಮೋತಿಲಾಲ ಹೆಬ್ಬಾರಿ ಹಾಗೂ ಇತರರು ಇದ್ದರು. ಮೂರು ಕೆಜಿ ಅಕ್ಕಿ, ಒಂದು ಕೆಜಿ ಸಕ್ಕರೆ, ಅರ್ಧ ಕೆಜಿ ಸ್ಯಾವಿಗೆ, ಅರ್ಧ ಕೆಜಿ ಒಳ್ಳೆಣ್ಣೆ, ಸಾಬೂನು, ಏಲಕ್ಕಿ ಸೇರಿದಂತೆ ಮಸಾಲೆ ಹಾಗೂ ಇತರೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT