ಅಳವಂಡಿ: ‘ಸಮಾಜ ಹಾಗೂ ಮಾನವ ಒಳಿತಿಗೆ ತನ್ನನ್ನು ಅರ್ಪಿಸಿಕೊಂಡ ತಾಯಿ ಹಾಗೂ ದಾಸೋಹದ ಪರಿಕಲ್ಪನೆಯನ್ನು ಸಮಾಜಕ್ಕೆ ತಿಳಿಸಿದ ಮಹಾತಾಯಿ ಹೇಮರಡ್ಡಿ ಮಲ್ಲಮ್ಮ’ ಎಂದು ಅಳವಂಡಿಯ ಸಿದ್ದೇಶ್ವರ ಮಠದ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಮೀಪದ ಗುಡಗೇರಿ ಗ್ರಾಮದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಮಾಜ ಹಾಗೂ ಗ್ರಾಮಸ್ಥರ ವತಿಯಿಂದ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಜಯಂತಿ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

‘ನಾಡಿನ ಶರಣರ ವಾಣಿಗಳು ಮನುಕುಲದ ಏಳಿಗೆಯನ್ನು ಬಯಸುತ್ತವೆ. ಜೀವನದಲ್ಲಿ ಪ್ರತಿಯೊಬ್ಬರೂ ಕಾಯಕತತ್ವಗಳನ್ನು ಅಳವಡಿಸಿಕೊಳ್ಳಬೇಕು. ಕಾಯಕ ಜೀವನದಿಂದ ಮಾತ್ರ ನೆಮ್ಮದಿ, ಶಾಂತಿ ಸಿಗಲಿದೆ. ಮಲ್ಲಮ್ಮ ತಾಯಿ ಕಾಯಕ ತತ್ವದಿಂದ ಪ್ರಸಿದ್ಧಿಯಾಗಿದ್ದಾಳೆ. ಕೌಟುಂಬಿಕ ಸಮಸ್ಯಗಳನ್ನು ಮೆಟ್ಟಿ ನಿಂತು ಸಮಾಜದಲ್ಲಿ ಹೆಣ್ಣಿನ ಮಹತ್ವವನ್ನು ವಿಶ್ವಕ್ಕೆ ಸಾರಿದ್ದಾಳೆ. ಮನುಕುಲದ ಕಲ್ಯಾಣವನ್ನು ಬಯಸಿದ ಮಲ್ಲಮ್ಮ ತಾಯಿಯ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

ಪ್ರಮುಖರಾದ ವೆಂಕಣ್ಣ ಆಡೂರು, ಚನ್ನಪ್ಪ ವುಟಗನೂರ, ಬಸವರಾಜ ವುಟಗನೂರ, ತಿಪ್ಪಣ್ಣ ತೋಟದ, ವಿರೂಪಾಕ್ಷಪ್ಪ ಬನ್ನಿಕೊಪ್ಪ, ಶಿವಪ್ಪ ತೆಗ್ಗಿಮನಿ, ವಿರೂಪನಗೌಡ ಶರಭಗೌಡ್ರ, ಬಸವರಾಜ ಆಡೂರ, ಯಂಕಣ್ಣ, ರವಿ ಅಂಬಳಿ, ಪಂಪಾಪತಿ, ಸುರೇಶ, ಹೇಮರಡ್ಡಿ, ಶರಣಪ್ಪ, ಉಮೇಶ, ಶರಣಪ್ಪಗೌಡ, ಶರಣಪ್ಪ ತೋಟದ, ಜಗದೀಶ, ಲಕ್ಷ್ಮಣ, ಕನಕರಡ್ಡಿ, ಹನುಮಗೌಡ, ಶಂಕ್ರಪ್ಪ, ಅಂದಪ್ಪ, ರಾಯನಗೌಡ, ಮುದಿಯಪ್ಪ, ಶಿವಪ್ಪ ಇತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-35-464968339

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.