ಅಳವಂಡಿ: ‘ಸಾಮೂಹಿಕ ವಿವಾಹದಿಂದ ಆರ್ಥಿಕ ಹೊರೆ ಕಡಿಮೆಯಾಗುತ್ತದೆ’ ಎಂದು ರಾಬಕೊವಿ ಹಾಲು ಒಕ್ಕೂಟದ ಮಾಜಿ ನಿರ್ದೇಶಕ ವೆಂಕನಗೌಡ್ರ ಹಿರೇಗೌಡ್ರು ಹೇಳಿದರು.

ಸಮೀಪದ ಗುಡ್ಲಾನೂರು ಗ್ರಾಮದ ಗಾಳೆಮ್ಮದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಹುತೇಕ ಯುವಕರು ಮದ್ಯಪಾನ ಬಿಟ್ಟು ಒಗ್ಗಟ್ಟಿನಿಂದ ಸಮಾಜಪರ ಕೆಲಸ ಕಾರ್ಯಗಳನ್ನು ಮಾಡುತ್ತ ಧಾರ್ಮಿಕ ಕಾರ್ಯಗಳ ಜೊತೆಗೆ ಸಾಮೂಹಿಕ ವಿವಾಹ ಜರುಗಿಸಿ, ಬಡವರಿಗೆ ಹೊರೆಯಾಗುತ್ತಿರುವ ವಿವಾಹದ ದುಂದು ವೆಚ್ಚಕ್ಕೆ ಕಡಿವಾಣ ಹಾಕುವಲ್ಲಿ ಗಾಳೆಮ್ಮದೇವಿ ಸೇವಾ ಸಮಿತಿಯವರು ಉತ್ತಮ ಕಾರ್ಯ ಮಾಡಿದ್ದಾರೆ’ ಎಂದು ಹೇಳಿದರು.

ಹಾಲ ಸ್ವಾಮೀಜಿ ಮಾತನಾಡಿ, ‘ನವದಂಪತಿಗಳು ಹಿರಿಯರಿಗೆ ಗೌರವದಿಂದ ಕಾಣಬೇಕು. ಸೊಸೆಯಾಗಿ ಬಂದ ಹೆಣ್ಣು ಮಗಳನ್ನು ಮನೆಯವರು ಮಗಳಂತೆ ಕಾಣಬೇಕು. ಅತ್ತೆ–ಮಾವರನ್ನು ಸೊಸೆಯು ತಂದೆ–ತಾಯಿಯರಂತೆ ಕಾಣಬೇಕು. ನೂತನ ವಧು–ವರರು ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಬದುಕು ಸಾಗಿಸಬೇಕು’ ಎಂದು ಹೇಳಿದರು.

ಇಟಗಿಯ ಗದ್ದಿಗೇಪ್ಪಜ್ಜ ಸ್ವಾಮೀಜಿ, ಪ್ರಮುಖರಾದ ವಿರೂಪಾಕ್ಷಗೌಡ ಪಾಟೀಲ, ಗೂಳಪ್ಪ ಹಲಗೇರಿ, ಯಲ್ಲಪ್ಪ ಹಳೆಮನಿ, ಚನ್ನಬಸಪ್ಪ ಹೊಳೆಯಪ್ಪನವರ, ವೆಂಕಟೇಶ ಬಾರಕೇರ, ಕೋಟ್ರಯ್ಯ ಹಿರೇಮಠ, ನಾಗರಾಜ ತಳಗೇರಿ, ರಾಮಣ್ಣ ತಿಪ್ಪಣ್ಣನವರ, ಚನ್ನಬಸಪ್ಪ ಕಾಳಿ, ಮರಿಸ್ವಾಮಿ ನಡಲಮನಿ, ನಿಂಗರಾಜ, ಯರಿಯಪ್ಪಗೌಡ, ಯಲ್ಲನಗೌಡ, ಬಸವರಾಜ, ನಜೀರಸಾಬ, ಬಸವರಾಜ ಅಂಗಡಿ ಸೇರಿದಂತೆ ಅನೇಕ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-35-1550476089

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.