ಗಂಗಾವತಿ: ವಿಜಯನಗರ ಸಾಮ್ರಾಜ್ಯದ ವೈಷ್ಣವ ಪರಂಪರೆ ಹೊಂದಿದ ಆನೆಗೊಂದಿ ಸಮೀಪದ ಗವಿರಂಗನಾಥ ದೇವಾಲಯ ಹಾಗೂ ಸುತ್ತಮುತ್ತಲ ಜಾಗವನ್ನು ಪ್ರಿ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಫೋಟೊಶೂಟ್ ಹೆಸರಿನಲ್ಲಿ ಹಾಳು ಮಾಡಲಾಗುತ್ತಿದ್ದು, ನಿರ್ವಹಣೆ ಹೊಣೆ ಹೊತ್ತ ಇಲಾಖೆ ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

ಆನೆಗೊಂದಿ ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ. ಇಲ್ಲಿ ವಿಜಯನಗರ ಕಾಲಕ್ಕೆ ಸಂಬಂಧಿಸಿದ ಮಂಟಪ, ದೇವಾಲಯ, ಶಾಸನಗಳು ಸಾಕಷ್ಟಿದೆ. ಆದರೆ ಅವುಗಳ ನಿರ್ವಹಣೆ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ದೇವಾಲಯಗಳ ಇತಿಹಾಸ ಅಳಿವಿನತ್ತ ಸಾಗುತ್ತಿದೆ.

ಗವಿರಂಗನಾಥ ದೇವಾಲಯ ಬೆಟ್ಟದ ಮೇಲಿದ್ದು, ಗರ್ಭಗುಡಿಯಲ್ಲಿನ ನೈಸರ್ಗಿಕ ಬಂಡೆಯ ಒಳಗೆ ಮೂರ್ತಿ ಇರುವ ಕಾರಣ ಹೀಗೆ ಕರೆಯಲಾಗುತ್ತದೆ. ಸದ್ಯ ಈ ದೇವಾಲಯ ಗಿಡ–ಗಂಟಿ ಬೆಳೆದು, ಕಸ ತುಂಬಿ, ಜೇಡಿ ಹಿಡಿದು ಪಾಳುಬಿದ್ದ ಸ್ಥಿತಿಯಲ್ಲಿದೆ. ಇದಕ್ಕೆ ಯಾವ ರಕ್ಷಣೆಯೂ ಇಲ್ಲ. ಹಾಗಾಗಿ ದೇವಾಲಯದಲ್ಲಿ ಪ್ರಿವೆಡ್ಡಿಂಗ್ ಪೋಟೊಶೂಟ್ ಹಾಗೂ ಪುಂಡರ ಅಡ್ಡೆಯಾಗಿ ಬದಲಾಗಿದೆ. ಗವಿರಂಗನಾಥ ದೇವಾ ಲಯ ಬಳಿ ಸಾಕಷ್ಟು ಗುಹೆ ಗಳಿವೆ. ಅಲ್ಲಿ ಪ್ರಿ ವೆಡ್ಡಿಂಗ್ ಶೂಟ್ ಮಾಡುವವರು ಮದ್ಯಪಾನ, ಧೂಮಪಾನ ಮಾಡಿದ ಬಾಟಲ್, ಪಾಕೆಟ್, ನೀರಿನ ಬಾಟಲ್, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಾರೆ. ಅಲ್ಲದೆ ಬಟ್ಟೆ, ಚಪ್ಪಲಿಗಳನ್ನು ಎಸೆಯಲಾಗಿದ್ದು ಗುಹೆ ಅಸ್ವಚ್ಛತೆಯ ತಾಣವಾಗುತ್ತಿದೆ.

ಪಾರ್ಕಿಂಗ್–ಸಂಚಾರಕ್ಕೆ ಕಿರಿಕಿರಿ: ಗವಿರಂಗನಾಥ ದೇವಾಲಯ ದಲ್ಲಿ ಪ್ರಿ ವೆಡ್ಡಿಂಗ್ ಶೂಟ್ ಮಾಡಲು ಬರುವವರು ದೇವಾಲಯದಲ್ಲಿನ ಕೆಳಭಾಗದ ಮುಖ್ಯ ರಸ್ತೆಗೆ ಅಡ್ಡಾದಿಡ್ಡಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದು, ಗಂಗಾವತಿಯತ್ತ ತೆರಳುವ ವಾಹನ ಸವಾರರ ಸಂಚಾರಕ್ಕೆ ತೊಂದರೆ ಆಗುತ್ತಿದೆ. ರಸ್ತೆಯೂ ಕಿರಿದಿರುವ (ಸಿಂಗಲ್ ರಸ್ತೆ) ಕಾರಣ ಅಪಘಾತಗಳಾಗುವ ಸಂಭವ ಸಾಕಷ್ಟಿದೆ ಎನ್ನುತ್ತಾರೆ ಚಿಕ್ಕರಾಂಪುರ ಗ್ರಾಮದ ಮಂಜುನಾಥ.

ದೇವಾಲಯ ಮಹತ್ವ: ಗವಿರಂಗನಾಥ ದೇವಾಲಯ ವಿಜಯನಗರ ಅರಸರ ಆರಾಧ್ಯದೈವ. ದೇವಾಲಯದಲ್ಲಿ ಗರ್ಭಗೃಹ, ಸಭಾಮಂಟಪ, ಪ್ರವೇಶದ್ವಾರ, ಲಲಾಟ ಬಿಂಬದ ಪದ್ಮಗಳಿವೆ. ಕಂಬಗಳಲ್ಲಿ ನರಸಿಂಹ, ಶಿವಲಿಂಗಕ್ಕೆ ಹಾಲೆರೆಯುವ ಹಸು, ವಿಷ್ಣು, ಯತಿ, ಭೈರವಿ, ಆಂಜನೇಯ, ವೀರಭದ್ರ, ಗರುಡ, ಶಿವಪಾರ್ವತಿಯ ಉಬ್ಬುಶಿಲ್ಪಗಳಿವೆ. ಹಾಗೇ ದ್ವಿತಲಗಳಿಂದ ಕೂಡಿದ ದ್ವಾರ, ಗಾರೆಶಿಲ್ಪ, ಶಾಲ-ಕೂಟ ಅಲಂಕರ ಣಗಳಿವೆ. ದೇವಾಲಯ ದೈವತ್ವಕ್ಕೆ ಹೆಸರುವಾಸಿ. ಪ್ರಿ ವೆಡ್ಡಿಂಗ್ ಶೂಟ್ ಮೂಲಕ ಭಾವಿ ದಂಪತಿ, ಅವರ ಸಂಬಂಧಿಕರು, ಛಾಯಾಗ್ರಾಹಕರು ಚಪ್ಪಲಿ, ಶೂ ಧರಿಸಿ ದೇವಾಲಯ ಪ್ರವೇಶ ಮಾಡುತ್ತಾರೆ. ಧಾರ್ಮಿಕ ತಾಣದಲ್ಲಿ ಅಸಭ್ಯ ಉಡುಗೆ ತೊಟ್ಟು ಬರುತ್ತಿರುವುದು ಕೂಡ ಭಕ್ತರ ಬೇಸರಕ್ಕೆ ಕಾರಣವಾಗುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-35-1225827634

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.