ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಧಾರ್ಮಿಕ ಪುಣ್ಯಕ್ಷೇತ್ರ ಅಂಜನಾದ್ರಿ ಬೆಟ್ಟದ ಆಂಜನೇಯನಿಗೆ ಹೈದರಾಬಾದ್ ಮೂಲದ ಎ.ಎಂ.ಆರ್. ಸಂಸ್ಥೆಯ ಅಧ್ಯಕ್ಷ ಡಾ.ಎ.ಮಹೇಶರೆಡ್ಡಿ ದಂಪತಿ ಶಾಸಕ ಜಿ.ಜನಾರ್ದನ ರೆಡ್ಡಿ ದಂಪತಿ ನೇತೃತ್ವದಲ್ಲಿ ₹2.5 ಕೋಟಿ ಮೌಲ್ಯದ ಬಂಗಾರದ ಆಭರಣಗಳನ್ನು ಶುಕ್ರವಾರ ಸಮರ್ಪಿಸಲಾಗಿದೆ.

ಬೆಳಿಗ್ಗೆ 5 ಗಂಟೆಗೆ ಆಂಜನೇಯನ ಪಾದಗಟ್ಟೆ ಬಳಿ ಚಿನ್ನದ ಪ್ರಭಾವಳಿ, ಛತ್ರಿ, ಕಿರೀಟ, ಗದೆ ಇರಿಸಿ, ವಿವಿಧ ಧಾರ್ಮಿಕ ವಿಧಿ–ವಿಧಾನಗಳೊಂದಿಗೆ ಪೂಜಾ ಮಾಡಲಾಯಿತು.

ನಂತರ ಎಲ್ಲರೂ 575 ಮೆಟ್ಟಿಲು ಏರಿಕೊಂಡು ಬಂದು, ಅಂಜನೇಯನ ದೇವರಿಗೆ ಸುಪ್ರಭಾತ ಸೇವೆ, ಅಲಂಕಾರ, ಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳನ್ನು ಕೈಗೊಂಡರು. ಬಳಿಕ ದೇವರಿಗೆ ಪ್ರಭಾವಳಿ, ಕಿರೀಟ, ಛತ್ರಿ, ಗದೆ ಇರಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಜಿ.ಜನಾರ್ದನ ರೆಡ್ಡಿ ಅವರು, ‘ಎ.ಎಂ.ಆರ್. ಸಂಸ್ಥೆ ಭಾರತದಲ್ಲಿನ ಅಗ್ರಗಣ್ಯ ಸಂಸ್ಥೆಗಳಲ್ಲಿ 3ನೇ ಸ್ಥಾನದಲ್ಲಿದೆ. ಈ ಹಿಂದೆ ಚುನಾವಣೆ ವೇಳೆ ಹನುಮಂತನಿಗೆ ಬಂಗಾರದ ಆಭರಣಗಳನ್ನು ನೀಡುವ ಭಕ್ತಿ ಹೊಂದಿದ್ದೆ. ಇಂದು ಈಡೇರಿದೆ’ ಎಂದರು.

‘ಅಂಜನಾದ್ರಿಯಲ್ಲಿ ₹240 ಕೋಟಿ ವೆಚ್ಚದಲ್ಲಿ ಮೆಟ್ಟಿಲು, ಗೋಪುರ, ರಾಮ, ಲಕ್ಷ್ಮಣ, ಸೀತೆ ದೇವಸ್ಥಾನ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುವುದು’ ಎಂದರು.

ಗಂಗಾವತಿ ತಹಶೀಲ್ದಾರ್ ವಸಂತ ಕುಮಾರಿ, ಕನಕಗಿರಿ ತಹಶೀಲ್ದಾರ್ ವಿಶ್ವನಾಥ, ಗ್ರೇಡ್-2 ತಹಶೀಲ್ದಾರ್ ಮಹಾಂತಗೌಡ ಪಾಟೀಲ, ಮಾಜಿ ಸಂಸದ ಶಿವರಾಮೇಗೌಡ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-51-1536056566

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.