ಕೊಪ್ಪಳ/ಗಂಗಾವತಿ: ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯ ಆಂಜನೇಯನಿಗೆ ಉದ್ಯಮಿ ಹಾಗೂ ಎಎಂಆರ್ ಗ್ರೂಪ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಎ. ಮಹೇಶ ರೆಡ್ಡಿ ಅವರು ನೀಡಿದ ಆಭರಣಗಳಲ್ಲಿ ಚಿನ್ನದ ಪ್ರಮಾಣದ ಖಚಿತತೆ ಬಗ್ಗೆ ಆದೋನಿಯ ದೇವಸ್ಥಾನದ ವಾಸ್ತುಶಿಲ್ಪಿ ಗುಂಡಾಚಾರಿ ಸ್ಥಪತಿ ಅವರು ನೀಡಿರುವ 50 ವರ್ಷಗಳ ಗ್ಯಾರಂಟಿಯ ಪ್ರಮಾಣಪತ್ರಕ್ಕೆ ಇರುವ ಕಾನೂನಿನ ಮಾನ್ಯತೆ ಬಗ್ಗೆ ತಜ್ಞರ ಅಭಿಪ್ರಾಯ ಪಡೆಯಲು ಜಿಲ್ಲಾಡಳಿತ ಮುಂದಾಗಿದೆ.

ಆಂಜನೇಯನಿಗೆ ಉದ್ಯಮಿಯು ಪ್ರಭಾವಳಿ, ಗದೆ, ಕಿರೀಟ, ಛತ್ರಿ, ಶಂಕು, ಚಕ್ರ, ಸೂರ್ಯ-ಚಂದ್ರ ಪದಕಗಳು, ಝಂಡಾ ಹಾಗೂ ಚಾಮರಗಳ ತಯಾರಿಸಿ ಕೊಟ್ಟಿದ್ದರು. ಇದಕ್ಕಾಗಿ ಒಟ್ಟು 1,400 ಗ್ರಾಂ ಬಂಗಾರ ಬಳಸಲಾಗಿದ್ದು, ತಯಾರಿಕಾ ಪ್ರಕ್ರಿಯೆಯಲ್ಲಿ ಸುಮಾರು 120 ಗ್ರಾಂ ವೇಸ್ಟೇಜ್ ಆಗಿದೆ. ತೂಕ ಅಂತಿಮವಾಗಿ 1,280 ಗ್ರಾಂ ಬಂಗಾರದ ತೂಕ ದಾಖಲಾಗಿದೆ ಎಂದು ಮಹೇಶ ರೆಡ್ಡಿ ಪರವಾಗಿ ಗುಂಡಾಚಾರಿ ಸ್ಥಪತಿ ಗಂಗಾವತಿ ತಹಶೀಲ್ದಾರ್ ವಸಂತಕುಮಾರಿ ಅವರಿಗೆ ತಿಳಿಸಿದ್ದಾರೆ.

ದೇವರಿಗೆ ಅಥವಾ ದೇವಸ್ಥಾನಗಳಿಗೆ ಕವಚ ರೂಪದಲ್ಲಿ ತಯಾರಿಸಲಾಗುವ ಆಭರಣಗಳನ್ನು ಅಪರಂಜಿ ಚಿನ್ನದಲ್ಲಿ ನೇರವಾಗಿ ತಯಾರಿಸುವುದು ತಾಂತ್ರಿಕವಾಗಿ ಸಾಧ್ಯವಿಲ್ಲ. ಆದ್ದರಿಂದ ಸಾಮಾನ್ಯವಾಗಿ ತಾಮ್ರದ ಆಧಾರದ ಮೇಲೆ ಬಂಗಾರದ ಲೇಪನ ಮಾಡುವ ವಿಧಾನವನ್ನು ಪೂರ್ವದಿಂದಲೂ ಅನುಸರಿಸಲಾಗುತ್ತದೆ. ಇದೇ ವಿಧಾನವನ್ನು ತಿರುಪತಿ ಸೇರಿದಂತೆ ದೇಶದ ಅನೇಕ ಪ್ರಸಿದ್ಧ ದೇವಸ್ಥಾನಗಳ ಬಂಗಾರದ ಕವಚಗಳ ನಿರ್ಮಾಣದಲ್ಲಿಯೂ ಬಳಸಲಾಗಿದೆ. ಹೀಗಾಗಿ ಅಂಜನಾದ್ರಿಗೆ ನೀಡಿದ ಕವಚಗಳಲ್ಲಿಯೂ ಇದೇ ಸಾಂಪ್ರದಾಯಿಕ ಮತ್ತು ಮಾನ್ಯ ವಿಧಾನವನ್ನು ಅನುಸರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಬಂಗಾರದ ಕವಚಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು, ಬಾಂಡ್ಗಳು ಹಾಗೂ ಶುದ್ಧತೆ ಪ್ರಮಾಣಪತ್ರಗಳನ್ನು ಅವರು ಸಲ್ಲಿಸಿದ್ದಾರೆ. ಕವಚಗಳ ತಯಾರಿಕಾ ವಿಧಾನ, ಅಚ್ಚು, ವಿನ್ಯಾಸ ಹಾಗೂ ಬಂಗಾರದ ಲೇಪನದ ತಾಂತ್ರಿಕ ಮಾಹಿತಿಯನ್ನೂ ತಹಶೀಲ್ದಾರ್ಗೆ ವಿವರಿಸಿದ್ದಾರೆ. ಈ ಕವಚಗಳು ಕನಿಷ್ಠ 50 ವರ್ಷಗಳವರೆಗೆ ಯಾವುದೇ ರೀತಿಯ ಕಳೆ ಅಥವಾ ಹಾನಿಯಾಗದಂತೆ ಉನ್ನತ ಮಟ್ಟದಲ್ಲಿ ತಯಾರಿಸಲಾಗಿದೆ. ಯಾವುದೇ ಸಮಸ್ಯೆಗಳಿದ್ದರೂ ಮುಂದಿನ 50 ವರ್ಷ ನಮ್ಮ ಕಂಪನಿ ಸಂಪೂರ್ಣ ಜವಾಬ್ದಾರಿ ಹೊರುತ್ತದೆ ಎಂದು ಭರವಸೆ ನೀಡಿದ್ದಾರೆ.

ಆದ್ದರಿಂದ ಜಿಲ್ಲಾಡಳಿತ ಈಗಾಗಲೇ ವಿವಿಧ ಅಕ್ಕಸಾಲಿಗರಿಂದ ಪಡೆದ ಅಭಿಪ್ರಾಯ ಕ್ರೋಡೀಕರಿಸಿ ಅದನ್ನು ಆಭರಣಗಳ ಸಮೇತ ಖಜಾನೆಯಲ್ಲಿ ಇರಿಸಿದೆ. ಗುಂಡಾಚಾರಿ ಸ್ಥಪತಿ ನೀಡಿರುವ ಗ್ಯಾರಂಟಿ ದಾಖಲೆಗೆ ಇರುವ ಕಾನೂನು ಮಾನ್ಯತೆ ಬಗ್ಗೆಯೂ ತಜ್ಞರಿಂದ ಅಭಿಪ್ರಾಯ ಪಡೆಯಲು ನಿರ್ಧರಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-35-1039076045

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.