ಕೊಪ್ಪಳ: ನಗರದ ವಾಸವಿ ಮಂಗಳ ಭವನದಲ್ಲಿ ಸೋಮವಾರ ಕರ್ನಾಟಕ ಆರ್ಯವೈಶ್ಯ ಮಹಾಸಭೆಯ ಅಧ್ಯಕ್ಷ ಆರ್.ಪಿ. ರವಿಶಂಕರ್ ನೇತೃತ್ವದಲ್ಲಿ ಜಿಲ್ಲಾ ಆರ್ಯವೈಶ್ಯ ಸಮಾವೇಶ ನೆರವೇರಿತು.

ಆರ್.ಪಿ ರವಿ ಶಂಕರ್ ಮಾತನಾಡಿ, ‘ಆರ್ಯ ವೈಶ್ಯ ಸಮಾಜದವರ ಮೂಲ ಉದ್ಯೋಗ ವ್ಯಾಪಾರಕ್ಕೆ ಯುವಜನರು ಮರಳಿ ಬರಬೇಕು ಎಂಬ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಅಂತರರಾಷ್ಟ್ರೀಯ ಮಟ್ಟದ ಆರ್ಯವೈಶ್ಯ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗುವುದು’ ಎಂದು ಹೇಳಿದರು.

ವಾಸವಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು ಮತ್ತು ಆರ್ಯವೈಶ್ಯ ಜಾತಿಯನ್ನು ಒಬಿಸಿಗೆ ಸೇರಿಸಲು ಸರ್ಕಾರಕ್ಕೆ ಒತ್ತಾಯ ತರುವ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷರಿಗೆ ಮನವಿಯನ್ನು ಜಿಲ್ಲಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ್ ಗುಪ್ತಾ ಹಾಗೂ ಅವೋಪಾ ಘಟಕದ ಅಧ್ಯಕ್ಷ ರಾಘವೇಂದ್ರ ಪಾನಘಂಟಿ ಮನವಿ ಸಲ್ಲಿಸಿದರು.

ನಿರ್ದೇಶಕ ನಾರಾಯಣ ಕುರುಗೋಡು, ಸಂತೋಷ ಕೆಲೋಜಿ, ರಾಘವೇಂದ್ರ ಬೆಲ್ಲಂಕೊಂಡಿ, ಅಂತರರಾಷ್ಟ್ರೀಯ ಆರ್ಯವೈಶ್ಯ ಸಮ್ಮೇಳನದ ಸಂಚಾಲಕ ಅನಿಲ ತಲ್ಲಮ್ಮ, ಎಚ್.ಜೆ. ಹನುಮಂತಯ್ಯ ನಾಮ ನಾಗರಾಜ, ರಾಘವೇಂದ್ರ ಚಿತ್ರಾಲಿ, ರಾಕೇಶ ಪಾನಘಂಟಿ, ಶೋಭಾ ಮಾದಿನೂರ, ಡಿ.ಗುರುರಾಜ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-35-2016170533

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.