ಕೊಪ್ಪಳ: ‘ನಗರದ ಜನ, ಬುದ್ದಿಜೀವಿಗಳು, ಬರಹಗಾರರು ಮತ್ತು ಹೋರಾಟದ ಮುಂಚೂಣಿಯ ಸಂಘಟನೆಗಳು 207 ದಿನಗಳಿಂದ ಹೋರಾಡುತ್ತಿದ್ದಾರೆ. ಇದನ್ನು ಇಲ್ಲಿನ ಶಾಸಕರು, ಸಂಸದರು ಹಾಗೂ ಜಿಲ್ಲೆಯ ಸಚಿವರು ಹಗುರವಾಗಿ ತೆಗೆದುಕೊಂಡರೆ ರಾಜ್ಯದ ಪ್ರಜ್ಞಾವಂತರು ಬೀದಿಗಿಳಿಯುತ್ತಾರೆ. ಬಲ್ಡೋಟಾ ಕಾರ್ಖಾನೆ ವಿಸ್ತರಣೆ ವಿರೋಧದ ವಿಚಾರದ ಬಗ್ಗೆ ಆದಷ್ಟು ಬೇಗನೆ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಬೇಕು’ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಘಯ್ಯ ಹೇಳಿದರು.

ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳು ಹಾಗೂ ಅವುಗಳ ವಿಸ್ತರಣೆ ವಿರೋಧಿಸಿ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಕೊಪ್ಪಳ ಪರಿಸರ ಹಿತರಕ್ಷಣಾ ವೇದಿಕೆ ವತಿಯಿಂದ ಸೋಮವಾರ ನಡೆದ ಧರಣಿಯಲ್ಲಿ ಅವರು ಮಾತನಾಡಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಹಿರಿಯ ವಕೀಲ ಆರ್.ಕೆ.ದೇಸಾಯಿ ಮಾತನಾಡಿ ‘ಈ ಹೋರಾಟ ರಾಜ್ಯದ ಜನರ ಬೆಂಬಲ ಪಡೆದಿದೆ. ನಮ್ಮ ಕೆ.ಪಿ.ಆರ್.ಎಸ್ ಸಂಘಟನೆ ಸಂಪೂರ್ಣ ಬೆಂಬಲಿಸಿ ಮುಂದಿನ ದಿನಗಳಳಲ್ಲಿ ಈ ಹೋರಾಟಕ್ಕೆ ಶಕ್ತಿ ತುಂಬಲು ಭಾಗವಹಿಸುತ್ತದೆ’ ಎಂದು ಹೇಳಿದರು.

ಧರಣಿಯಲ್ಲಿ ಮಾನವ ಬಂಧುತ್ವ ವೇದಿಕೆಯ ಮುಖಂಡ ಟಿ. ರತ್ನಾಕರ, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಗೊಂಡಬಾಳ, ಪ್ರಮುಖರಾದ ಪುಟ್ಟರಾಜ ಪಾಟೀಲ್, ಶಾಹೀದ ಹುಸೇನ್, ಶಹಾಬುದ್ದೀನಸಾಬ್, ಶರಣು ಶೆಟ್ಟರ್, ಜ್ಯೋತಿ ಎಂ. ಗೊಂಡಬಾಳ, ಗೌರಿ ಗೋನಾಳ, ಸಲೀಮಾ ಜಾನ್, ಯಮುನಾ ಚೆಳ್ಳೂರು, ಅಬ್ದುಲ್ ಖುದ್ದೂಸ್, ಧರ್ಮರಾಜ ಗೋನಾಳ, ಯಮನೂರಪ್ಪ ಈಳಿಗನೂರು ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-35-1593093750

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.