ಕುಷ್ಟಗಿ: ತಾಲ್ಲೂಕಿನ ಬಳೂಟಗಿ ಗ್ರಾಮದಲ್ಲಿ ಶುಕ್ರವಾರ ಗ್ರಾಮ ದೇವತೆ ದುರ್ಗಾದೇವಿಯ ನೂತನ ದೇವಸ್ಥಾನ ಉದ್ಘಾಟನೆ ನಿಮಿತ್ತ ಜಾತ್ರಾ ಮಹೋತ್ಸವ ಮತ್ತು ಡಾ.ಅಂಬೇಡ್ಕರ್ ವೃತ್ತದಲ್ಲಿನ ನಾಮಫಲಕ ಅನಾವರಣ ಕಾರ್ಯಕ್ರಮ ನೆರವೇರಿತು.

ಪ್ರಮುಖರಾದ ದೊಡ್ಡಬಸನಗೌಡ ಬಯ್ಯಾಪುರ, ಕೆ.ಮಹೇಶ, ಹುಸೇನಪ್ಪ ಮುದೇನೂರು ಇತರರು ಮಾತನಾಡಿ, ‘ಕೇವಲ ಅದ್ದೂರಿಯಾಗಿ ಕಾರ್ಯಕ್ರಮ ಆಚರಿಸಿದರೆ ಸಾಲದು ಡಾ.ಅಂಬೇಡ್ಕರ್ ಅವರ ತತ್ವ ಮತ್ತು ಸಿದ್ಧಾಂತಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಅದರಂತೆ ನಡೆದರೆ ಶೋಷಿತ ಸಮುದಾಯಗಳ ಧ್ವನಿಯಾಗಿರುವ ಡಾ.ಅಂಬೇಡ್ಕರ್ ಅವರಿಗೆ ನಾವು ಕೊಡುವ ಗೌರವ ಆಗುತ್ತದೆ. ಅದರಿಂದ ಇಂಥ ಕಾರ್ಯಕ್ರಮಗಳಿಗೂ ಅರ್ಥ ಬರುತ್ತದೆ’ ಎಂದು ಹೇಳಿದರು.

ಮದ್ದಾನಿ ಹಿರೇಮಠದ ಕರಿಸಬಸವ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಿವೃತ್ತ ಎಂಜಿನಿಯರ್ ದೇವೇಂದ್ರಗೌಡ ಮೇಟಿ, ಜಯತೀರ್ಥರಾವ ದೇಸಾಯಿ, ಹನುಮಪ್ಪ ಶಿವನಗುತ್ತಿ, ಹುಲಗಪ್ಪ ಮೇಗೂರು ಮಾತನಾಡಿದರು.

ವಿಜಯಕುಮಾರ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಬಸವಲಿಂಗಯ್ಯ ಹಿರೇಮಠ ಸಿದ್ದನಗೌಡ ಪಾಟೀಲ, ಶ್ರೀಶೈಲಪ್ಪ ಮೇಟಿ, ರಮೇಶ ಎಲಿಗಾರ, ರಮೇಶ ಮದ್ನಾಳ, ಮಕ್ಕಾಳೆಪ್ಪ ಗುನ್ನಿ, ಸೋಮಶೇಖರ ವೈಜಾಪುರ, ರಮೇಶ ಮಾದರ, ಶರಣಪ್ಪ ಮಾದರ, ಮರಿಯಪ್ಪ, ದುರುಗಪ್ಪ, ದೇವಪ್ಪ ಸೇರಿದಂತೆ ಗ್ರಾಮದ ಹಿರಿಯರು, ಯುವಕರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-35-153626660

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.