ಕೊಪ್ಪಳ: ‘ಬಸಾಪುರ ಕೆರೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶ ಓದಿದ್ದೇನೆ. ಅದರಲ್ಲಿ ಕೆರೆಗೆ ಸಂಬಂಧಿಸಿದ ಯಾವುದೇ ಉಲ್ಲೇಖಗಳಿಲ್ಲ. ನಾನು ವಕೀಲನಾಗಿ ಕಾನೂನು ಅಭಿಪ್ರಾಯವನ್ನು ಜಿಲ್ಲಾಧಿಕಾರಿಗೆ ಕೊಡಲು ಸಿದ್ದನಿದ್ದೇನೆ’ ಎಂದು ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ. ಕಣವಿ ಹೇಳಿದರು.

ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಸೋಮವಾರ ತನ್ನ ಅನಿರ್ದಿಷ್ಟ ಧರಣಿ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಕೆರೆ ವಿವಾದ ಕುರಿತ ಸಂವಾದದಲ್ಲಿ ಮಾತನಾಡಿದ ಅವರು ‘ರೈತರ ಮತ್ತು ಕೊಪ್ಪಳ ಜನರ ಪರವಾಗಿ ಹೋರಾಟಕ್ಕೆ ವಕೀಲರ ಸಂಘದ ಮೂಲಕ ಬೆಂಬಲಿಸಿ ಜಿಲ್ಲಾಧಿಕಾರಿಗೆ ಪತ್ರ ಕೊಡುತ್ತೇನೆ, ಅಲ್ಲದೇ ಒಂದು ವಾರದಲ್ಲಿ ನ್ಯಾಯಾಲಯಗಳ ವರದಿಯ ಸಾರಾಂಶ ನೀಡಲಾಗುವುದು’ ಎಂದು ತಿಳಿಸಿದರು.

ವಕೀಲ ರಾಜು ಬಾಕಳೆ ‘ಕೆರೆಯನ್ನು 30 ವರ್ಷ ಅವಧಿಗೆ ಷರತ್ತು ವಿಧಿಸಿ ಜಿಲ್ಲಾಧಿಕಾರಿ ₹33 ಲಕ್ಷಕ್ಕೆ ಮಂಜೂರು ಮಾಡುವಾಗ ಇದು ಕೆರೆಯಲ್ಲ; ಪರಂಪೋಕ ಜಮೀನು ಎನ್ನುವ ಕಥೆ ಕಟ್ಟಲು ಪ್ರಯಾಸಪಟ್ಟಿದ್ದಾರೆ’ ಎಂದು ಆರೋಪಿಸಿದರು.

ಹಿರಿಯ ವಕೀಲ ಪೀರಾಹುಸೇನ್ ಹೊಸಳ್ಳಿ ಮಾತನಾಡಿ ‘ಸುಪ್ರೀಂ ಕೋರ್ಟ್ ಮತ್ತು ಕೆರೆ ಸಂರಕ್ಷಣೆಗೆ ಸಂಬಂಧಿಸಿದ ಕಾನೂನು ನಿಯಮಾವಳಿಗಳು ಬಲಿಷ್ಠವಾಗಿವೆ. ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ತೀರ್ಪು ಉಲ್ಲೇಖ ಮಾಡಿದ ಅವರು ಇಂತಹ ಪ್ರಬಲ ಆದೇಶಗಳು ಕೆರೆಕಟ್ಟೆ ರಕ್ಷಣೆಗಾಗಿ ಬಂದಿವೆ. ನೈಸರ್ಗಿಕ ಸಮುದಾಯದ ಸ್ವತ್ತಾದ ಕೆರೆ, ಸರೋವರಗಳನ್ನು ಯಾವುದೇ ಸರ್ಕಾರಕ್ಕೆ ಮಾರುವ ಹಕ್ಕು ಇಲ್ಲ’ ಎಂದು ಪ್ರತಿಪಾದಿಸಿದರು.

ಸಂವಾದದಲ್ಲಿ ಸಂಗಪ್ಪ ವಕ್ಕಳದ, ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ, ಡಾ. ಮಂಜುನಾಥ ಸಜ್ಜನ್, ಸಾವಿತ್ರಿ ಮುಜುಮದಾರ, ಶಿವಾನಂದಯ್ಯ ಬೀಳಗಿಮಠ, ಶರಣು ಶೆಟ್ಟರ್, ಕಾಶಪ್ಪ ಚಲವಾದಿ ಪ್ರಶ್ನೋತ್ತರದಲ್ಲಿ ಪಾಲ್ಗೊಂಡು ಚರ್ಚಿಸಿದರು. ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-35-20600522

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.