ಕೊಪ್ಪಳ: ಜಿಲ್ಲಾಕೇಂದ್ರದಿಂದ ಅನತಿ ದೂರದಲ್ಲಿರುವ ಬಸಾಪುರ ಕೆರೆ ಜಾನುವಾರುಗಳಿಗೆ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಬಲ್ಡೋಟ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ ಪ್ರವೇಶ ದ್ವಾರದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಕಂಪನಿಯ ಆವರಣದಲ್ಲಿರುವ ಬಸಾಪುರ ಕೆರೆ ಕಂಪನಿಯ ಸುಪರ್ದಿಯಲ್ಲಿಯೇ ಇದೆ. ಇದರ ಬಗ್ಗೆ ಕಾನೂನಾತ್ಮಕ ಹೋರಾಟ ಮಾಡಲು ಅವಕಾಶವಿದೆ ಎಂದು ಹೋರಾಟಗಾರರಿಗೆ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಸೋಮವಾರ ರಾತ್ರಿ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದರು. ಅಧಿಕಾರಿಗಳ ಭೇಟಿಯ ಬಳಿಕ ಸ್ಥಳೀಯ ಮುಖಂಡರ ಜೊತೆ ಮಂಗಳವಾರ ಬೆಳಿಗ್ಗೆ ಆಂತರಿಕ ಸಭೆ ನಡೆಸಿದ ರೈತ ಸಂಘದ ಪ್ರಮುಖರು ಜಾನುವಾರುಗಳನ್ನು ಕಂಪನಿಯ ಒಳಗೆ ನುಗ್ಗಿಸುವುದನ್ನು ಬಿಟ್ಟು ಶಾಂತರೀತಿಯಿಂದ ಪ್ರತಿಭಟಿಸಲು ನಿರ್ಧರಿಸಿದರು.

ನಗರದ ಪ್ರವಾಸಿ ಮಂದಿರದಿಂದ ಬೈಕ್ ರ್ಯಾಲಿ ಮೂಲಕ ಬಂದು ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಾವಿರಾರು ಜಾನುವಾರುಗಳಿಗೆ ಜೀವಜಲವಾದ ಬಸಾಪುರ ಕೆರೆ ಮುಕ್ತ ಮಾಡಬೇಕು, ಕಂಪನಿಯ ಹಿಡಿತದಿಂದ ಹೊರತರಬೇಕು ಎಂದು ಒತ್ತಾಯಿಸಿದರು. ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳನ್ನು ತೊಲಗಿಸಬೇಕು ಎಂದು ಆಗ್ರಹಿಸಿ ಕೊರಳಲ್ಲಿ ಧರಿಸಿದ್ದ ಹಸಿರು ಶಾಲುಗಳನ್ನು ತಿರುಗಿಸಿ ಶಕ್ತಿ ಪ್ರದರ್ಶಿಸಿದರು. ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ ಕುಮಾರ್, ಡಿವೈಎಸ್ಪಿ ಮುತ್ತಣ್ಣ ಸವರಗೋಳ ನೇತೃತ್ವದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹಾಗೂ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಮಾತನಾಡಿ, ‘ಹಿಂದೆ ಜಿಲ್ಲೆಯಲ್ಲಿ ಕೆಲಸ ಮಾಡಿದ ಉಪವಿಭಾಗಾಧಿಕಾರಿ ಕೆರೆ ನಿರುಪಯುಕ್ತವಾಗಿದೆ ಎಂದು ತಪ್ಪು ವರದಿ ನೀಡಿದ್ದರಿಂದ ಇಷ್ಟೆಲ್ಲ ಸಮಸ್ಯೆಯಾಗಿದೆ. ಜಾನುವಾರುಗಳಿಗೆ ನೀರುಣಿಸಲು ಕೆರೆ ಇಲ್ಲದಂತಾಗಿದೆ. ಆ ಅಧಿಕಾರಿ ವಿರುದ್ಧ ಕ್ರಮವಾಗಬೇಕು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.

ಆಗ ಸಂಘಟನೆಯ ಸ್ಥಳೀಯ ಮುಖಂಡರು ಜಾನುವಾರುಗಳನ್ನು ಬಸಾಪುರ ಕೆರೆ ನೀರುಣಿಸಲು ಬಿಡಬೇಕು ಎಂದು ಒತ್ತಾಯಿಸಿ, ಕೆಲವರು ಜಾನುವಾರು, ಆಡು, ಮೇಕೆಗಳನ್ನು ನುಗ್ಗಿಸಲು ಪ್ರಯತ್ನಿಸಿದರು. ಸಂಘಟನೆಯ ಜೆ.ಎಂ. ವೀರಸಂಗಯ್ಯ, ಜಿಲ್ಲಾಧ್ಯಕ್ಷ ಭೀಮಸೇನ ಕಲಕೇರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-35-1150317150

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.