ಕೊಪ್ಪಳ: 'ಶರಣ ಧರ್ಮದಲ್ಲಿ ನುಡಿದಂತೆ ನಡೆವುದಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಆಚಾರ ಪ್ರಧಾನ ಧರ್ಮವಾಗಿದ್ದು, ಮೈ ಮಾತು-ಮನಗಳು ಪರಸ್ಪರ ಪೂರಕವಾಗಿ ಒಂದಾಗಿ ಇರಬೇಕು. ಮನದೊಳಗೊಂದು, ಮಾತಿನಲಿ ಮತ್ತೊಂದು, ಕ್ರಿಯೆಯಲ್ಲಿ ಇನ್ನೊಂದಾದರೆ ಅಸಮತೋಲನ ಉಂಟಾಗುವುದು. ಅದರ ಪರಿಣಾಮದಿಂದ ಅಸಮಾಧಾನ, ಅಸಮಾಧಾನದಿಂದ ಅಶಾಂತಿ, ಅಶಾಂತಿಯಿಂದ ಮನಸ್ಸು ಚಂಚಲ, ಚಂಚಲತೆಯುಕ್ತವಾದ ಮನದಲ್ಲಿ ದೇವರು ನೆಲೆಯೂರುವುದಿಲ್ಲ ಎಂದು ಬೀದರಿನ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.

ಬಸವೇಶ್ವರರ ಜಯಂತಿ ಅಂಗವಾಗಿ ವಿಶ್ವಗುರು ಬಸವೇಶ್ವರ ಟ್ರಸ್ಟ್ ಪ್ರವಚನ ಸೇವಾ ಸಮಿತಿಯು ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಬಸವ ಭಾಷೆ ಕುರಿತು ಪ್ರವಚನದಲ್ಲಿ ಮಾತನಾಡಿ ‘ನಡೆನುಡಿ ಒಂದಾಗಿರದಿದ್ದಲ್ಲಿ ಅದು ಸಮಾಜದ ಮೇಲೂ ಕೆಟ್ಟ ಪರಿಣಾಮವಾಗುತ್ತದೆ. ಸಮಾಜದ ಬಹುಪಾಲು ಜನ ಸುಖಕ್ಕಿಂತ ಶೋಷಣೆಗೆ ಒಳಗಾಗುತ್ತಾರೆ. ಇದನ್ನು ಗಮನಿಸಿದ ಬಸವಣ್ಣನವರು ದೇವಭಕ್ತ ಎಂಬುದಕ್ಕೆ ಚಿಹ್ನವೆಂದಡೆ ಸತ್ಯವನ್ನು ನುಡಿಯುವುದು, ನುಡಿದಂತೆ ನಡೆವುದು. ಹುಸಿಯ ನುಡಿವುದು, ನುಡಿದು ತಪ್ಪುವುದು ಭಕ್ತರ ಲಕ್ಷಣವಲ್ಲ. ಅವರು ವೇಷಗಾರರು. ನುಡಿದಂತೆ ನಡೆಯದವರು ವಚನ ಪಾತಕಿಗಳು. ನುಡಿ ಬೆಲ್ಲ ನಡೆ ನಂಜಾದರೆ ಬಾಳೆಲ್ಲ ಗಂಜಳ. ನಡೆ ನುಡಿಗಳು ತಕ್ಕಡಿಯ ಎರಡು ಪರಡಿಯಂತೆ. ಅವು ಯಾವಾಗಲೂ ಸಮ ಸಮವಾಗಿ ತೂಗಬೇಕೆಂಬುದು ಬಸವಣ್ಣನವರ ಆಶಯ’ ಎಂದು ಹೇಳಿದರು.

‘ಸತ್ಯದ ಹಾಗೂ ಪ್ರೇಮದ ಮಾತುಗಳನ್ನೆ ಆಡಬೇಕು. ಆಡಿದಂತೆ ನಡೆದು ತೋರಬೇಕು. ಮಾತು ಮತ್ತು ಕೃತಿಗಳ ತಕ್ಕಡಿಯ ತೂಗು ತ್ರಾಸು ಕಟ್ಟಳೆ ದೇವನ ಕೈಯಲ್ಲಿ ಇರಲಿ. ಬೇಕಾದಂತೆ ಪರೀಕ್ಷಿಸಲಿ. ಒಂದು ಜವೆಯಷ್ಟು ಕೂಡಾ ನಡೆ-ನುಡಿಯಲ್ಲಿ ವ್ಯತ್ಯಾಸವಾಗಕೂಡದೆಂಬುದು ಅವರ ನಿರ್ಣಯ. ನುಡಿಯ ಹೊಣೆಗಾರಿಕೆಯ ಅರಿವು ಅದೆಷ್ಟು ಜಾಗ್ರತವಾಗಿರಬೇಕೆಂಬುದಕ್ಕೆ ಇದು ನಿದರ್ಶನ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-35-1009795371

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.