ಅಳವಂಡಿ: ಸಮೀಪದ ಬಿಸರಳ್ಳಿ ಗ್ರಾಮದಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಗ್ರಾಮಸ್ಥರು ಕುಡಿಯುವ ನೀರಿಗಾಗಿ ಹಾಹಾಕಾರ ಎದುರಿಸುವಂತಾಗಿದೆ. ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಸ್ಥಳೀಯ ಆಡಳಿತ ಹಾಗೂ ತಾಲ್ಲೂಕು ಆಡಳಿತ ವಿಫಲವಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಕೊಪ್ಪಳ ತಾಲ್ಲೂಕಿನ ಬಿಸರಳ್ಳಿ ಗ್ರಾಮವು ಸುಮಾರು 4,500 ಜನಸಂಖ್ಯೆ ಹೊಂದಿದೆ. ಇಲ್ಲಿನ ಜನರಿಗೆ ತುಂಗಭದ್ರಾ ನದಿ ಪಾತ್ರದ ಬೇಳೂರು ಗ್ರಾಮದಿಂದ ಬಿಸರಳ್ಳಿ ಗ್ರಾಮಕ್ಕೆ ನೀರು ಪೂರೈಕೆ ಮಾಡಲು ಪೈಪಲೈನ್ ಅಳವಡಿಕೆ ಮಾಡಲಾಗಿದೆ. ಆದರೆ ಪದೇ ಪದೇ ಪೈಪಲೈನ್ ಒಡೆಯುವುದು ಸೇರಿದಂತೆ ನಾನಾ ಸಮಸ್ಯೆಗಳಿಂದ ಗ್ರಾಮದಲ್ಲಿ ನಿತ್ಯ ನೀರಿನ ಸಮಸ್ಯೆ ಉಂಟಾಗುತ್ತಿದೆ.

ಇದರಿಂದಾಗಿ ತುಂಗಭದ್ರಾ ನದಿಯಿಂದ ಬರುವ ಸಿಹಿ ನೀರು ಇಲ್ಲದಂತಾಗಿದೆ. ನೀರು ಬಾರದ ಕಾರಣ ಇಲ್ಲಿನ ಸ್ಥಳೀಯ ಆಡಳಿತ ನಿತ್ಯ ಗ್ರಾಮಕ್ಕೆ ಬೋರ್ವೆಲ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಆ ನೀರು ಉಪ್ಪಿನ ಅಂಶವಿದ್ದು, ಇದರಿಂದ ಅನಾರೋಗ್ಯ, ಮೈ ತುರಿಕೆ, ಅಲರ್ಜಿ ಸೇರಿದಂತೆ ನಾನಾ ರೋಗಗಳು ಬಾಧೆ ಕಾಡುತ್ತಿದೆ.

ನೀರಿಗಾಗಿ ಕಾಳಜಿ ತೋರಬೇಕಾದ ಸ್ಥಳೀಯ ಆಡಳಿತ ನಿರ್ಲಕ್ಷ್ಯ ವಹಿಸುತ್ತಿದೆ. ಬೋರ್ವೆಲ್ ಮೂಲಕ ಸರಬರಾಜುವಾಗುವ ನೀರು ಸರಿಯಾಗಿ ಬರುವುದಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಕ್ರಮವಹಿಸಿ, ಬಿಸರಳ್ಳಿ ಗ್ರಾಮಕ್ಕೆ ಪರಿಪೂರ್ಣವಾಗಿ ನೀರು ಬರುವಂತಾಗಬೇಕು ಎಂದು ಇಲ್ಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-35-469040665

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.