ಕೊಪ್ಪಳ: ತಾಲ್ಲೂಕಿನ ಜಬ್ಬಲಗುಡ್ಡದಲ್ಲಿ ಎಲ್ಲ ಸರ್ಕಾರಿ ಬಸ್ಗಳು ನಿಲುಗಡೆಯಾಗದ್ದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ಬುಧವಾರ ಸುಮಾರು ಒಂದೂವರೆ ತಾಸು ಎಲ್ಲ ಬಸ್ಗಳನ್ನು ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.

ಕೊಪ್ಪಳ–ಗಂಗಾವತಿ ಮಾರ್ಗಮಧ್ಯ ದಲ್ಲಿರುವ ಜಬ್ಬಲಗುಡ್ಡದಿಂದ ನಿತ್ಯ ನೂರಾರು ಕಾಲೇಜು ವಿದ್ಯಾರ್ಥಿಗಳು ಓದಲು ಜಿಲ್ಲಾಕೇಂದ್ರಕ್ಕೆ ಬರುತ್ತಾರೆ. ಕೂಲಿ ಕೆಲಸ ಅಥವಾ ಇನ್ನಿತರ ದೈನಂದಿನ ಕೆಲಸಗಳಿಗಾಗಿ ಜನ ಓಡಾಡುವುದು ಸಾಮಾನ್ಯ. ಆದರೆ ಗಂಗಾವತಿ–ಕೊಪ್ಪಳ ನಡುವೆ ಓಡಾಡುವ ಅನೇಕ ಬಸ್ಗಳಲ್ಲಿ ಕೆಲ ಬಸ್ಗಳು ಮಾತ್ರ ನಿಲುಗಡೆಯಾಗುತ್ತಿದ್ದವು. ಅದಕ್ಕೂ ನಿಶ್ಚಿತ ಸಮಯವಿರಲಿಲ್ಲ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಬಸ್ಗಳನ್ನು ತಡೆದು ಪ್ರತಿಭಟಿಸಿದರು. ಇದಕ್ಕೂ ಮೊದಲು ಗ್ರಾಮದ ವಿದ್ಯಾರ್ಥಿಗಳು ಬಸ್ ನಿಲ್ಲಿಸುವಂತೆ ಕೈ ಮಾಡಿದಾಗ ಚಾಲಕ ನಿಲ್ಲಿಸದೇ ಚಲಾಯಿಸಿದ್ದಾನೆ. ಇದು ಕೂಡ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಯಿತು ಎಂದು ಸ್ಥಳೀಯರು ಮಾಹಿತಿ ನೀಡಿದರು.

ಬೆಳಿಗ್ಗೆ 9ರಿಂದ 9.30ರ ಸುಮಾರಿಗೆ ಆರಂಭವಾದ ಪ್ರತಿಭಟನೆ ಸುಮಾರು ಒಂದೂವರೆ ತಾಸು ನಡೆಯಿತು. ವೇಗದೂತ, ಎಲ್ಲ ಕಡೆ ನಿಲುಗಡೆ ಹಾಗೂ ತಡೆರಹಿತ ಹೀಗೆ ಎಲ್ಲ ಬಸ್ಗಳನ್ನು ಗ್ರಾಮಸ್ಥರು ತಡೆದರು. ಕೆಲ ಹೊತ್ತಿನಲ್ಲಿ ಸ್ಥಳಕ್ಕೆ ಬಂದ ಕೊಪ್ಪಳ ಮತ್ತು ಗಂಗಾವತಿ ಬಸ್ ಡಿಪೊಗಳ ಮುಖ್ಯಸ್ಥರು ಪ್ರತಿಭಟನಾ ನಿರತರನ್ನು ಮನವೊಲಿಸುವ ಪ್ರಯತ್ನ ಮಾಡಿದರು. ನಿಮ್ಮ ಬೇಡಿಕೆಯಂತೆ ಬಸ್ ನಿಲುಗಡೆಗೆ ಕ್ರಮ ವಹಿಸಲಾಗುವುದು, ಈ ಕುರಿತು ಮೇಲಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆದುಕೊಂಡರು. ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ಜಯಪ್ರಕಾಶ ಸ್ಥಳಕ್ಕೆ ಭೇಟಿ ನೀಡಿದರು.

‘ಜಿಲ್ಲಾಕೇಂದ್ರಕ್ಕೆ ತೆರಳಲು ವಿದ್ಯಾರ್ಥಿಗಳು ಕೈ ತೋರಿಸಿದರೂ ಬಸ್ ನಿಲ್ಲಿಸದ ಕಾರಣ ಬೇಸರವಾಯಿತು. ವಾಯವ್ಯ ಕರ್ನಾಟಕ ಸಾರಿಗೆ ಬಸ್ ಕೂಡ ನಿಲುಗಡೆ ಮಾಡಬೇಕು. ಬಸ್ಗಳೇ ನಿಲುಗಡೆಯಾಗದಿದ್ದರೆ ರಾಜ್ಯ ಸರ್ಕಾರದ ಶಕ್ತಿ ಯೋಜನೆ ಇದ್ದೂ ಏನು ಪ್ರಯೋಜನ’ ಎಂದು ರೈತ ಹೋರಾಟಗಾರ ಶ್ರೀನಿವಾಸ್ ಪ್ರಶ್ನಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-35-1494728429

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.