ಕುಷ್ಟಗಿ: ಆಸ್ತಿ ವಿಚಾರವಾಗಿ ಕೆಲವರ ಕಿರುಕುಳಕ್ಕೆ ನೊಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾದ ಪಟ್ಟಣ ಉದ್ಯಮಿ ಶಾಂತರಾಜ ಪಾರ್ಶ್ವನಾಥ ಗೋಗಿ(69) ಶನಿವಾರ ಬೆಳಿಗ್ಗೆ ಕೊಪ್ಪಳದ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಈ ಘಟನೆ ಯಲಬುರ್ಗಾ ತಾಲ್ಲೂಕು ಬೇವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೃತನ ಪುತ್ರ ಸುಮಿತ್ ಗೋಗಿ ನೀಡಿದ ದೂರಿನ ಅನ್ವಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಹುಬ್ಬಳ್ಳಿ ಮೂಲದ ವಿಜಯಲಕ್ಷ್ಮಿ ಕಡಗದಕೈ, ಕೃಷ್ಣಾಚಾರ ಕಡಗದಕೈ, ರವಿಕುಮಾರ ಸೇಬಿನಕಟ್ಟಿ, ಕಂದಕೂರು ಗ್ರಾಮದ ಮಂಜುನಾಥ ಕುರ್ನಾಳ, ರವಿಕುಮಾರ ಕುರ್ನಾಳ, ಮಂಜುನಾಥ ನಾಲಗಾರ, ಇಳಕಲ್ದ ಮಹಾಂತೇಶ ಚಟ್ಟೇರ ಹಾಗೂ ಇತರೆ ಮೂವರು ಸೇರಿ ಒಟ್ಟು 10 ಜನರ ವಿರುದ್ಧ ಪ್ರಕರಣ ಬೇವೂರು ಠಾಣೆಯಲ್ಲಿ ಎಂದು ದಾಖಲಾಗಿದೆ.

ಶುಕ್ರವಾರ ತಮ್ಮದೇ ಕಾರಿನಲ್ಲಿ ಕೊಪ್ಪಳಕ್ಕೆ ಹೋಗಿದ್ದ ಶಾಂತರಾಜ್ ಕ್ರಿಮಿನಾಶಕ ಸೇವಿಸಿ ರಸ್ತೆಯಲ್ಲಿ ನರಳಾಡುತ್ತಿದ್ದುದನ್ನು ಗಮನಿಸಿದ ಸಾರ್ವಜನಿಕರು ಬೇವೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಅವರನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದಿದೆ.

ಘಟನೆ ವಿವರ: ಪಟ್ಟಣದಲ್ಲಿರುವ ಆಸ್ತಿ ವಿಚಾರದಲ್ಲಿ ಆರೋಪಿಗಳು ಮತ್ತು ಮೃತ ಶಾಂತರಾಜ ಅವರ ಮಧ್ಯೆ ನ್ಯಾಯಾಲಯದಲ್ಲಿ ಸಿವಿಲ್ ವ್ಯಾಜ್ಯಗಳು ಇವೆ. ಇದೇ ವಿಚಾರವಾಗಿ ಆರೋಪಿತರು ಮಹಾವೀರ ಬಿಲ್ಡಿಂಗ್ಗೆ ಅನಧಿಕೃತವಾಗಿ ಪ್ರವೇಶ ಮಾಡಿ ಕುಟುಂಬದವರಿಗೆ ಜೀವಬೆದರಿಕೆ ಹಾಕಿದ್ದರು. ಈ ಬಗ್ಗೆ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇ 20ರಂದು ಆರೋಪಿ ಸುರೇಶ ಸೇಬಿನಕಟ್ಟಿ ಎಂಬುವವರು ಕೊಪ್ಪಳ ನಗರ ಪೊಲೀಸ್ ಠಾಣೆಗೆ ಶಾಂತರಾಜ ಅವರ ವಿರುದ್ಧ ಸುಳ್ಳು ಅರ್ಜಿ ಸಲ್ಲಿಸಿ ಕಿರುಕುಳ ನೀಡುತ್ತ ಬಂದಿದ್ದರು. ಕುಷ್ಟಗಿಯ ಸಾಮಿಲ್ಗೆ ಬಂದು ಅವಾಚ್ಯಪದಗಳಿಂದ ನಿಂದಿಸಿದ್ದಲ್ಲದೆ ನೀನು (ಶಾಂತರಾಜ) ಸತ್ತರೆ ಆಸ್ತಿ ಹೇಗೆ ತೆಗೆದುಕೊಳ್ಳಬೇಕೆಂಬುದು ನಮಗೆ ಗೊತ್ತಿದೆ. ತಮ್ಮ ವಿರುದ್ಧ ದಾಖಲಾಗಿರುವ ಸಿವಿಲ್ ಪ್ರಕರಣ ಹಿಂದಕ್ಕೆ ಪಡೆಯಬೇಕು ಎಂದು ಬೆದರಿಕೆಯೊಡ್ಡಿದ್ದರು ಎನ್ನಲಾಗಿದೆ.

ಆಸ್ತಿ ವಿಚಾರದಲ್ಲಿ ಹೈಕೋರ್ಟ್ ಯಥಾಸ್ಥಿತಿ ಆದೇಶ ನೀಡಿದೆ. ಹೀಗಿದ್ದರೂ ಸಾಮಿಲ್ಗೆ ನುಗ್ಗಿದ ಆರೋಪಿ ಸುರೇಶ ಸೇಬಿನಕಟ್ಟಿ ಮತ್ತು ಮಂಜುನಾಥ ನಾಲಗಾರ ಇತರೆ ಮೂವರು ಜಾತಿ ನಿಂದನೆ ಪ್ರಕರಣ ದಾಖಲಿಸುವುದಾಗಿ ಬೆದರಿಕೆಯೊಡ್ಡಿದರು. ಈ ವಿಷಯವಾಗಿ ಮನನೊಂದಿದ್ದ ಶಾಂತರಾಜ ಸಾಯುವಂತೆ ತಮಗೆ ಪ್ರಚೋದನೆ ನೀಡುತ್ತಿದ್ದಾರೆ. ಬಹಳಷ್ಟು ಅವಮಾನವಾಗಿದೆ ಎಂದು ಆರೋಪಿಗಳಾಗಿರುವವರ ಬಗ್ಗೆ ಕುಟುಂಬದವರ ಬಳಿ ಹೇಳಿಕೊಂಡಿದ್ದರು. ಪದೆ ಪದೇ ಸಾಯುವುದಾಗಿ ಹೇಳುತ್ತಿದ್ದರು. ಆತ್ಯಹತ್ಯೆಗೆ ಪ್ರಚೋದನೆ ನೀಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರು ಸಲ್ಲಿಕೆಯಾಗಿದೆ ಎಂದು ಎಫ್ಐಆರ್ದಲ್ಲಿ ವಿವರಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದೂರು ದಾಖಲಿಸಿಕೊಳ್ಳಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಯಲಬುರ್ಗಾ ಸಿಪಿಐ ಮೌನೇಶ ಮಾಲೀಪಾಟೀಲ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-35-1185501630

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.