ಕೊಪ್ಪಳ: ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾಯಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಯ ಕನಸಿಗೂ ರೆಕ್ಕೆ ಬಂದಿದೆ. ಇದರ ಬೆನ್ನಲ್ಲೇ ಸಚಿವರಾಗಲು ಜಿಲ್ಲೆಯಲ್ಲಿ ಇಬ್ಬರು ಶಾಸಕರು ಕಸರತ್ತು ನಡೆಸಿದ್ದರೆ, ಈಗಾಗಲೇ ಸಚಿವರಾಗಿರುವ ಶಿವರಾಜ ತಂಗಡಗಿ ಅವರಿಗೆ ಸ್ಥಾನ ಉಳಿಯುವುದೊ? ಇಲ್ಲವೊ? ಎನ್ನುವ ಚಡಪಡಿಕೆ ಶುರುವಾಗಿದೆ.

ಸಿದ್ದರಾಮಯ್ಯನವರೇ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ ಎನ್ನುವ ಹೇಳಿಕೆಗಳನ್ನು ಜಿಲ್ಲೆಯ ಕಾಂಗ್ರೆಸ್ ಶಾಸಕರು ಮಾಧ್ಯಮಗಳ ಮುಂದೆ ನಿರಂತರವಾಗಿ ಹೇಳಿಕೊಂಡು ಬಂದಿದ್ದರೂ ಈಗ ಪಕ್ಷದ ವರಿಷ್ಠರೇ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಆಯ್ಕೆಗೆ ಮುಂದಾಗಿದ್ದಾರೆ. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರೂ ಹಾಗೂ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಅವರು ಸಿದ್ದರಾಮಯ್ಯನವರೇ ಐದು ವರ್ಷ ಸಿಎಂ ಎಂದು ಅನೇಕ ಬಾರಿ ಹೇಳಿದ್ದರು. ಸಿ.ಎಂ. ಆಪ್ತರಲ್ಲಿ ಪ್ರಮುಖವಾದ ಶಾಸಕ ಕೊಪ್ಪಳ ಕ್ಷೇತ್ರದ ರಾಘವೇಂದ್ರ ಹಿಟ್ನಾಳ ಕೂಡ ಇದನ್ನು ಹೇಳಿದ್ದರು.

ಆಗ ಆದ ದಿಢೀರ್ ಬೆಳವಣಿಗೆಯಿಂದಾಗಿ ಸಂಪುಟ ವಿಸ್ತರಣೆ, ಪುನರ್ರಚನೆಯ ಆಸೆಯೂ ಚಿಗುರಿದೆ. 2013, 2018 ಹಾಗೂ 2023ರ ಮೂರೂ ಚುನಾವಣೆಗಳಲ್ಲಿ ಹ್ಯಾಟ್ರಿಕ್ ಗೆಲುವು ಪಡೆದಿರುವ ರಾಘವೇಂದ್ರ ಹಿಟ್ನಾಳ ಅವರು ಸಿದ್ದರಾಮಯ್ಯನವರಿಗೆ ಆಪ್ತರು ಎನ್ನುವುದು ಗುಟ್ಟೇನಲ್ಲ. ಸಚಿವ ಸ್ಥಾನಕ್ಕಾಗಿ ಮೊದಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದ ಹಿಟ್ನಾಳ ಹಲವು ತಿಂಗಳುಗಳ ಹಿಂದೆ ಬಹಿರಂಗವಾಗಿಯೇ ತಮ್ಮ ಆಸೆ ವ್ಯಕ್ತಪಡಿಸಿದ್ದರು. ಸಚಿವ ಸ್ಥಾನದ ಆಕಾಂಕ್ಷಿಗಳ ಶಾಸಕರ ಜೊತೆ ದೆಹಲಿಗೆ ಹೋಗಿ ಕೈಕಮಾಂಡ್ನ ವರಿಷ್ಠರನ್ನೂ ಭೇಟಿ ಯಾಗಿದ್ದರು. ಸಹೋದರ, ಸಂಸದ ಕೂಡ ‘ರಾಘವೇಂದ್ರ ಹಿಟ್ನಾಳ ಸಚಿವರಾಗಬೇಕು’ ಎಂದು ಬಲ ನೀಡಿದ್ದಾರೆ.

ನಿರ್ದೇಶಕರಲ್ಲದಿದ್ದರೂ ಏಕಾಏಕಿ ನಡೆದ ಬೆಳವಣಿಗೆಯಲ್ಲಿ ರಾಘವೇಂದ್ರ ಹಿಟ್ನಾಳ ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ, (ರಾಬಕೊವಿ) ಹಾಲು ಒಕ್ಕೂಟದ ನಿರ್ದೇಶಕರಾಗಿ ಅದರ ಅಧ್ಯಕ್ಷರೂ ಆದರು. ಈಗ ಕೆಎಂಎಫ್ ಗಾದಿ ಮೇಲೆ ಕಣ್ಣಿಟ್ಟಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿಂದೆ ಸಿದ್ದರಾಮಯ್ಯನವರ ಆಶೀರ್ವಾದ ಇರುವುದಂತೂ ನಿಶ್ಚಿತ. ಹ್ಯಾಟ್ರಿಕ್ ಗೆಲುವು ಪಡೆದು ಸಚಿವರಾಗದಿದ್ದರೂ ಸಿದ್ದರಾಮಯ್ಯ ಅವರ ಜೊತೆಗಿದ್ದ ಆಪ್ತತೆಯಿಂದಾಗಿ ಕ್ಷೇತ್ರಕ್ಕೆ ಅನುದಾನವನ್ನು ತಂದಿದ್ದಾರೆ. ತಮಗೆ ಬೇಕಾದ ಕೆಲಸಗಳನ್ನು ಕಡಿಮೆ ಸಮಯದಲ್ಲಿ ಮಾಡಿಸಿಕೊಂಡು ಬರುವ ಛಾತಿಯೂ ಅವರಲ್ಲಿದೆ. ಆದ್ದರಿಂದ ಸಚಿವ ಸ್ಥಾನ ನೀಡಬೇಕು ಎಂದು ಬೇಡಿಕೆ ಮುಂದಿಟ್ಟಿದ್ದಾರೆ.

ಹೆಚ್ಚು ಬಾರಿ ಚುನಾವಣೆಯಲ್ಲಿ ಗೆಲುವು ಪಡೆದ ಸಾಧನೆ ಮಾಡಿರುವ ಪಕ್ಷದ ಹಿರಿಯರೂ ಆದ ಬಸವರಾಜ ರಾಯರಡ್ಡಿ ಅವರಿಗೆ ಈ ಸಲದ ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲಿ ಸ್ಥಾನ ಇರಲಿಲ್ಲ. ಕೆಲವು ತಿಂಗಳುಗಳ ಬಳಿಕ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿ ಅವಕಾಶ ಪಡೆದರು. ಆದರೆ ಸಚಿವರಾಗಬೇಕು ಎನ್ನುವ ಆಸೆ ಹೊಂದಿರುವ ರಾಯರಡ್ಡಿ ಅವರು ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ಸಿದ್ಧರಿಲ್ಲ. ‘ಇನ್ನು ಎರಡು ವರ್ಷ ಸರ್ಕಾರದ ಅವಧಿಯಿದೆ. ಆಡಳಿತ ಚುರುಕಾಗಬೇಕಿರುವ ಕಾರಣ ಒಂದಷ್ಟು ಸಚಿವರನ್ನು ಬದಲಿಸಿ ಹೊಸಬರು, ಹಿರಿಯರಿಗೆ ಅವಕಾಶ ಕೊಡಿ’ ಎನ್ನುತ್ತಿದ್ದಾರೆ. ರಾಯರಡ್ಡಿ ಅವರು ಸಿದ್ದರಾಮಯ್ಯ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದು ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರ ಅನುದಾನ ತಂದಿದ್ದಾರೆ.

ಗೆದ್ದ ಪ್ರತಿ ಬಾರಿಯೂ ಸಚಿವರಾಗಿರುವ ಕನಕಗಿರಿ ವಿಧಾನಸಭಾ ಕ್ಷೇತ್ರದ ಶಿವರಾಜ ತಂಗಡಗಿ ಪ್ರಸ್ತುತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಖಾತೆಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರ ಬಳಿಯೂ ತಂಗಡಗಿ ಉತ್ತಮ ಬಾಂಧವ್ಯ ಹೊಂದಿದ್ದು ಭೋವಿ ಸಮುದಾಯದಲ್ಲಿ ಪ್ರಮುಖರು ಎನ್ನುವ ಬೆಂಬಲವೂ ಇದೆ. ಸಮುದಾಯದ ಬಲ ಹಾಗೂ ಸಚಿವರಾಗಿ ಮೂರು ಅವಧಿಯಲ್ಲಿ ಕೆಲಸ ಮಾಡಿದ್ದು ವರವಾಗಬಹುದು ಎನ್ನುವ ನಿರೀಕ್ಷೆ ಅವರಲ್ಲಿದೆ. ಹೀಗಾಗಿ ಕರ್ನಾಟಕದ ರಾಜಕೀಯದಲ್ಲಿ ಆಗುತ್ತಿರುವ ಬದಲಾವಣೆ ಜಿಲ್ಲೆಯಲ್ಲಿಯೂ ಹೇಗೆ ಪರಿಣಾಮ ಬೀರಲಿದೆ ಎನ್ನುವ ಕುತೂಹಲ ಮೂಡಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-35-1969400338

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.