ಕೊಪ್ಪಳ: ನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡುವ ಜನ, ಕಾಯಂ ನಿವಾಸಿಗಳು, ಹಿರಿಯರು, ಮಕ್ಕಳು ತಮ್ಮ ಬದುಕಿನ ಖುಷಿಯ ಕ್ಷಣಗಳನ್ನು ಕಳೆಯಲು ಬಯಸಿದರೆ ಒಂದು ಸುಂದರ ಉದ್ಯಾನವಿಲ್ಲ. ಸುತ್ತಲೂ ಹಸಿರಿನ ತೋರಣವಿಲ್ಲ. ಆರೋಗ್ಯವೇ ಪ್ರಮುಖವಾಗಿರುವ ಈಗಿನ ದಿನಗಳಲ್ಲಿ ವ್ಯಾಯಾಮ ಮಾಡಲು ಸುಸಜ್ಜಿತ ಸಲಕರಣೆಗಳಿಲ್ಲ.

ಇದು ಕೊಪ್ಪಳದ ಉದ್ಯಾನಗಳ ಸ್ಥಿತಿ. ಕೊಪ್ಪಳ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದರೂ ಬದುಕಿನ ಇಳಿಸಂಜೆಯಲ್ಲಿ ಸುಂದರ ಸಮಯವನ್ನು ಕಳೆಯಲು ಕ್ರೀಡಾಂಗಣ ಅಥವಾ ತಮ್ಮ ಮನೆಯ ಸಮೀಪದ ಸ್ಥಳವನ್ನು ಜನ ಅವಲಂಬಿಸಬೇಕಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ 25ಕ್ಕೂ ಹೆಚ್ಚು ಉದ್ಯಾನಗಳಿದ್ದರೂ ಅಭಿವೃದ್ಧಿ ಕಂಡಿಲ್ಲ. ಇತ್ತೀಚಿನ ಹಲವು ವರ್ಷಗಳಲ್ಲಿ ಜಿಲ್ಲಾಕೇಂದ್ರದಲ್ಲಿ 150ಕ್ಕೂ ಹೆಚ್ಚು ಬಡಾವಣೆಗಳು ನಿರ್ಮಾಣವಾಗಿವೆ. ಪ್ರತಿ ಬಡಾವಣೆಗೊಂದು ಉದ್ಯಾನ ನಿರ್ಮಾಣ ಮಾಡಬೇಕೆಂದು ನಿಯಮವಿದೆ. ಕೆಲವು ಕಡೆ ಆಯಾ ಬಡಾವಣೆಯವರೇ ತಕ್ಕಷ್ಟು ಮಟ್ಟಿಗೆ ಅಭಿವೃದ್ಧಿ ಕೆಲಸ ಮಾಡಿಕೊಂಡಿದ್ದಾರೆ.

ಆದರೆ ನಗರಸಭೆ ವ್ಯಾಪ್ತಿಯಲ್ಲಿರುವ ಉದ್ಯಾನಗಳಲ್ಲಿ ಸೌಲಭ್ಯಗಳು ಅಧ್ವಾನಗಳಾಗಿವೆ. ನಗರದ ಹೃದಯಭಾಗದಲ್ಲಿರುವ ಕಾವ್ಯಾನಂದ ಉದ್ಯಾನ ಬಿಡಾಡಿ ದನಗಳ ಆಶ್ರಯ ತಾಣವಾಗಿದ್ದರೆ, ವಾರ್ಡ್ ಸಂಖ್ಯೆ 28ರಲ್ಲಿರುವ ಅನ್ನದಾನಯ್ಯ ಪುರಾಣಿಕ ಉದ್ಯಾನದಲ್ಲಿ ಜಾಲಿ ಗಿಡಗಳು ಬೆಳೆದಿವೆ. ಗವಿಶ್ರೀ ನಗರದಲ್ಲಿನ ರೇಣುಕಾಚಾರ್ಯ ಉದ್ಯಾನದಲ್ಲಿ ನಿರ್ವಹಣೆಯಿಲ್ಲದೆ ಗೇಟ್ ಕಿತ್ತು ಹೋಗಿದೆ. ಹಮಾಲರ ಕಾಲೊನಿಯಲ್ಲಿರುವ ಉದ್ಯಾನದಲ್ಲಿ ಕಿಡಿಗೇಡಿಗಳಿಂದಾಗಿ ಮಕ್ಕಳ ಆಟಕೆಗಳು ಹಾಳಾಗಿವೆ. ಪದಕಿ ಲೇ ಔಟ್ನಲ್ಲಿರುವ ಉದ್ಯಾನದಲ್ಲಿಯೂ ಇದೇ ಸಮಸ್ಯೆ. ಈಶ್ವರ ಪಾರ್ಕ್ನಲ್ಲಿರು ಆಟಿಕೆ ಸಾಮಗ್ರಿ ಮುರಿದು ಹೋಗಿದ್ದು ಸ್ವಚ್ಛತೆಯ ಸಮಸ್ಯೆ ಕಾಡುತ್ತಿದೆ.

ಮದ್ಯದ ಹಾವಳಿ: ಹಮಾಲರ ಕಾಲೊನಿ ಮತ್ತು ವಿಠ್ಠಲ ಮಾದರಿ ನಗರಗಳಲ್ಲಿನ ಉದ್ಯಾನಗಳು ಅನೈತಿಕ ಚಟುವಟಿಕೆಗಳ ತಾಣಗಳಾಗಿವೆ. ಸಂಜೆಯಾದರೆ ಸಾಕು ಈ ಉದ್ಯಾನಗಳು ಮದ್ಯ ಕುಡಿಯುವವರ ಸ್ಥಳಗಳಾಗುತ್ತವೆ. ಮಕ್ಕಳು ಆಟವಾಡಲು ಅಳವಡಿಸಲಾಗಿದ್ದ ಸ್ಟೀಲ್ ಆಟಿಕೆ ಸಾಮಗ್ರಿಗಳು ಪುಂಡರ ದಾಂಧಲೆಯಿಂದಾಗಿ ಹಾಳಾಗಿವೆ. ಬಹುತೇಕ ಯುವಕರೇ ಇಲ್ಲಿಗೆ ಹೆಚ್ಚಾಗಿ ಬರುವುದರಿಂದ ಜೋರಾಗಿ ಶಬ್ದ ಮಾಡುವುದು, ಅವಾಚ್ಯ ಶಬ್ದಗಳಿಂದ ಬಯ್ಯುವುದು, ಕಲ್ಲು ತೂರುವುದು ಮಾಡಿ ಸುತ್ತಮುತ್ತಲಿನ ಮನೆಗಳ ನಿವಾಸಿಗಳನ್ನು ಭಯಭೀತಗೊಳಿಸುತ್ತಾರೆ. ಈ ಬಗ್ಗೆ ಹಲವು ಬಾರಿ ಪೊಲೀಸರಿಗೆ ಮಾಹಿತಿ ನೀಡಿದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ.

ಉದ್ಯಾನದ ಪಕ್ಕದಲ್ಲೇ ಮಹಿಳಾ ಹಾಸ್ಟೆಲ್ಗಳಿವೆ, ಮುಂಭಾಗದಲ್ಲಿ ಖಾಸಗಿ ಶಾಲೆಯೊಂದಿದೆ. ಇಷ್ಟಿದ್ದರೂ ಪುಂಢರು ಭಯವಿಲ್ಲದೆ ರಾಜಾರೋಷವಾಗಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಕತ್ತಲಾದ ಮೇಲೆ ಮನೆಯ ಮಕ್ಕಳನ್ನು ಹೊರಗೆ ಕಳುಹಿಸಲೂ ಸಹ ಭಯವಾಗುತ್ತದೆ ಎಂದು ಅಲ್ಲಿನ ನಿವಾಸಿಗಳು ಅಳಲು ತೋಡಿಕೊಂಡರು.

ಕೊಪ್ಪಳದ ಗಣೇಶ ತೆಗ್ಗಿನಲ್ಲಿರುವ ಬುದ್ಧ ಥೀಮ್ ಪಾರ್ಕ್ ಹಾಗೂ ಈಶ್ವರ ಪಾರ್ಕ್ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಅಮೃತ–2 ಯೋಜನೆಯಲ್ಲಿ ತಲಾ ₹50 ಲಕ್ಷ ಅನುದಾನ ಮೀಸಲಿಟ್ಟು ಕಾಮಗಾರಿ ಕಾರ್ಯಾದೇಶ ನೀಡಲಾಗಿದೆ. ಹಂತಹಂತವಾಗಿ ಅಭಿವೃದ್ಧಿಪಡಿಸಲಾಗುವುದು

ಮಂಜುನಾಥ ಗುಂಡೂರು ,ಕೊಪ್ಪಳ ನಗರಸಭೆ ಪೌರಾಯುಕ್ತ

ಮಾದರಿಯಂತಿದೆ ಓಪನ್ ಜಿಮ್

ಕೊಪ್ಪಳದ ತಹಶೀಲ್ದಾರ್ ಕಚೇರಿಯ ಆವರಣದಲ್ಲಿರುವ ಕಿರು ಉದ್ಯಾನದಲ್ಲಿ ಓಪನ್ ಜಿಮ್ ಸಲಕರಣೆಗಳನ್ನು ಅಳವಡಿಸಲಾಗಿದೆ. ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಮಾನಸಿಕ ಆರೋಗ್ಯವನ್ನು ಗಟ್ಟಿ ಮಾಡಿಕೊಳ್ಳಲು ದೈಹಿಕ ಕಸರತ್ತು ಅಗತ್ಯವಾಗಿದೆ. ಮಕ್ಕಳ ಆಟಿಕೆಗೂ ಅವಕಾಶವಿದೆ. ಇಂಥ ಸೌಲಭ್ಯಗಳನ್ನು ಜಿಲ್ಲಾಕೇಂದ್ರದ ಅಲ್ಲಲ್ಲಿ ಅಳವಡಿಸಿದರೆ ಜನರಿಗೆ ಅನುಕೂಲವಾಗುತ್ತದೆ. ಉದ್ಯಾನಗಳಿಗೂ ಜನರ ಬರುವಿಕೆ ಹೆಚ್ಚಾಗುತ್ತದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-35-1272263600

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.