ಕೊಪ್ಪಳ: ’ಎಸ್ಐಆರ್ನಿಂದ ಸಾಕಷ್ಟು ಸಮಸ್ಯೆಯಾಗುತ್ತಿದ್ದರೂ ಕಾಂಗ್ರೆಸ್ ಪಕ್ಷದವರು ಮಲಗಿದ್ದಾರೆ. ಪಕ್ಷದವರು ಸೋಂಬೇರಿಗಳು’ ಎಂದು ಕೆಪಿಸಿಸಿ ವಕ್ತಾರೆ ಶೈಲಜಾ ಹಿರೇಮಠ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಶನಿವಾರ ನಡೆದ ಎಸ್ಐಆರ್ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಸಂವಾದದ ವೇಳೆ ಚಿಂತಕ ಶಿವಸುಂದರ್ ಅವರು ’ಎಸ್ಐಆರ್ನಿಂದಾಗಿ ಕಾಂಗ್ರೆಸ್ ಪಕ್ಷದವರ ಮತಗಳು ಹೋಗುತ್ತಿದ್ದರೂ ಆ ಪಕ್ಷದವರಿಗೆ ಪರಿವೇ ಇಲ್ಲ’ ಎಂದರು. ಇದಕ್ಕೆ ಪ್ರತಿಯಾಗಿ ಮಾತು ಮುಂದುವರಿಸಿದ ಶೈಲಜಾ ಹಿರೇಮಠ ’ಕಾಂಗ್ರೆಸ್ ಪಕ್ಷದವರು ಸೋಂಬೇರಿಗಳು. ನಮ್ಮ ಸಮೀಪದಲ್ಲಿಯೇ ಅತ್ಯಾಚಾರ ಆಗಿದ್ದರೂ ನಮ್ಮ ಮನೆಗೆ ಏನೂ ಆಗಿಲ್ಲ ಎನ್ನುವ ಮನಸ್ಥಿತಿ ಹೊಂದಿದ್ದಾರೆ’ ಎಂದು ಹೇಳಿದರು. ‘ಪಕ್ಷದಲ್ಲಿ ಸ್ಥಾನಮಾನ ಹೊಂದಿಯೂ ಈ ಹೇಳಿಕೆ ನೀಡುತ್ತಿರುವುದಕ್ಕೆ ವರಿಷ್ಠರಿಗೆ ನನ್ನ ವಿರುದ್ಧ ದೂರು ಹೋದರೂ ಚಿಂತೆಯಿಲ್ಲ. ಹೋದರೂ ನಾ ಹೇಳಬೇಕಾದ ವಿಷಯವನ್ನು ಹೇಳುವೆ. ಎಸ್ಐಆರ್ ವಿರೋಧಿಸಿ ಬೆಂಗಳೂರಿನ ವಿಧಾನಸೌಧದ ಕಟ್ಟೆಯ ಮೇಲೆ ಹೋರಾಟ ರೂಪಿಸಬೇಕಿದೆ’ ಎಂದು ಹೇಳಿದರು. ನೀವೆಲ್ಲರೂ ಗಟ್ಟಿಯಾದರೆ ವಿಧಾನಸೌಧದ ಒಳಗೂ ಹೋರಾಟ ಮಾಡೋಣ ಎಂದು ಶಿವಸುಂದರ ಪ್ರತಿಕ್ರಿಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-35-1402716142

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.