ಕೊಪ್ಪಳ: ನಿತ್ಯ ಬಳಕೆಯ ಅಗತ್ಯ ವಸ್ತುಗಳಲ್ಲಿ ಒಂದಾದ ಗೃಹಪಯೋಗಿ ಹಾಗೂ ವಾಣಿಜ್ಯ ಬಳಕೆಯ ಅಡುಗೆ ಅನಿಲಕ್ಕೆ ಜಿಲ್ಲಾಕೇಂದ್ರದಲ್ಲಿ ಇತ್ತೀಚೆಗೆ ಕೃತಕ ಅಭಾವ ಸೃಷ್ಟಿಸುತ್ತಿರುವ ಪ್ರಕರಣ ನಡೆಯುತ್ತಿದ್ದು, ಕಾಳಸಂತೆ ಯಲ್ಲಿ ಮಾರಾಟವಾಗುತ್ತಿವೆ.

ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಪರಿಣಾಮ ಕೊಲ್ಲಿ ರಾಷ್ಟ್ರಗಳ ಮೇಲೂ ಆಗಿರುವುದರಿಂದ ಹಲವು ತಿಂಗಳುಗಳಿಂದ ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಹೊಸ ಸಂಪರ್ಕ ಪಡೆದು ಕೊಳ್ಳಲಾಗದೆ, ಅನುಮತಿ ಇರುವ ಸಿಲಿಂಡರ್ಗಳನ್ನು ನಿಯಮಿತವಾಗಿ ಪಡೆಯಲು ಕೂಡ ಆಗದೇ ವ್ಯಾಪಾರಿಗಳಿಗೆ ಸಮಸ್ಯೆಯಾಗುತ್ತಿದೆ. ಅದರಲ್ಲಿಯೂ ಹೋಟೆಲ್ ಉದ್ಯಮದವರು ಇದನ್ನೇ ನೆಚ್ಚಿಕೊಂಡಿದ್ದರಿಂದ ಅವರ ವಹಿವಾಟಿನ ಮೇಲೂ ಪೆಟ್ಟು ಬಿದ್ದಿದೆ. ಅನೇಕರು ಕುಲುಮೆಯ ಒಲೆ ಮೊರೆಹೋಗಿದ್ದಾರೆ.

ಇಂತಹ ಸಂಕಷ್ಟದಲ್ಲಿಯೂ ನಗರದಲ್ಲಿ ಕಾನೂನುಬಾಹಿರವಾಗಿ ಮನೆಯಲ್ಲಿ ಸಿಲಿಂಡರ್ ಸಂಗ್ರಹಿಸುತ್ತಿರುವ ಘಟನೆಗಳು ನಡೆಯುತ್ತಲೇ ಇವೆ. ಹೋಟೆಲ್ ಉದ್ಯಮದವರು ಹಾಗೂ ಬೀದಿಬದಿಯಲ್ಲಿ ಆಹಾರ ತಯಾರಿಸಿ ಬದುಕು ನೆಚ್ಚಿಕೊಂಡ ವ್ಯಾಪಾರಿಗಳಿಗೂ ಸಿಲಿಂಡರ್ಗಳ ಕೃತಕ ಅಭಾವ ಸೃಷ್ಟಿ ದೊಡ್ಡ ತಲೆನೋವು ತಂದಿದೆ. ಹೋಟೆಲ್ ಉದ್ಯಮದವರಿಗೆ ಬೆಲೆ ಏರಿಕೆ ಬಿಸಿ ತಟ್ಟುತ್ತಿದ್ದರೆ ಇನ್ನೊಂದೆಡೆ ಕೊರತೆಯೂ ಬೇಸರವೂ ಕಾಡುತ್ತಿದೆ.

ಇಲ್ಲಿನ ವಿನೋದ ಚೋಪ್ರಾ ಎನ್ನುವವರ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ತಲಾ 19 ಕೆ.ಜಿ. ತೂಕವುಳ್ಳ 8 ತುಂಬಿದ ಸಿಲಿಂಡರ್ಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದು, ದಾಳಿ ಮಾಡಿ ಅವುಗಳನ್ನು ಜಪ್ತಿ ಮಾಡಿದ್ದಾರೆ. ವಿನೋದ ಚೋಪ್ರಾ ಲಾಭದ ಉದ್ದೇಶಕ್ಕಾಗಿ ಹೆಚ್ಚಿನ ಬೆಲೆಗಾಗಿ ಸಿಲಿಂಡರ್ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ ಎನ್ನುವ ಗುಮಾನಿಯ ಮೇರೆಗೆ ದಾಳಿ ನಡೆಸಿದಾಗ ಪತ್ತೆಯಾಗಿವೆ.

ಮಾರ್ಚ್ನಲ್ಲಿ ಸಮಸ್ಯೆ ತೀವ್ರವಾಗಿದ್ದಾಗ ಆಹಾರ ಇಲಾಖೆ ಜಿಲ್ಲಾಕೇಂದ್ರದ ಆರು ಹೋಟೆಲ್ಗಳಲ್ಲಿ ಕಾರ್ಯಾಚರಣೆ ನಡೆಸಿ ಅಲ್ಲಿ ಗೃಹಬಳಕೆ ಸಿಲಿಂಡರ್ಗಳನ್ನು ಬಳಕೆ ಮಾಡುತ್ತಿದ್ದ ವಿಷಯವನ್ನು ಬಹಿರಂಗ ಮಾಡಿ ಪ್ರಕರಣ ದಾಖಲಿಸಿದ್ದರು. ಆರಂಭದಲ್ಲಿ ಕಾಟಾಚಾರಕ್ಕೆ ಎನ್ನುವಂತೆ ನಡೆದಿದ್ದ ಕಾರ್ಯಾಚರಣೆ ನಿಂತು ಹೋಗಿತ್ತು. ಈಗ ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ.

ನಗರ ಠಾಣೆಯಲ್ಲಿ ಎಫ್ಐಆರ್ ದಾಖಲು

ವಿನೋದ ಚೋಪ್ರಾ ಅವರ ಮನೆಯಲ್ಲಿ ಸಿಲಿಂಡರ್ ಸಿಕ್ಕ ಪ್ರಕರಣದಲ್ಲಿ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳು ಕೊಪ್ಫಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೊಪ್ಪಳ ಆಹಾರ ನಿರೀಕ್ಷಕ ಬಸವರಾಜ ಚಿನ್ನೂರ ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಾಗಿದೆ.260604-35-1169177057

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.