ಕೊಪ್ಪಳ: ‘ಮಳೆಯಿಂದ ಹಾನಿಗೊಳಗಾದ ತೋಟಗಾರಿಕೆ, ಕೃಷಿ ಬೆಳೆ ಬೆಳೆದ ಕೊಪ್ಪಳ ತಾಲ್ಲೂಕಿನ ಹೊಸಹಳ್ಳಿ, ಮುದ್ದಾಬಳ್ಳಿ, ಹ್ಯಾಟಿ ಗ್ರಾಮದ ರೈತರ ಜಮೀನುಗಳಿಗೆ ಬಿಜೆಪಿ ನಾಯಕರು ಭೇಟಿ ನೀಡಿ ಪರಿಶೀಲಿಸಿ, ರೈತರಿಗೆ ಸರ್ಕಾರ ಕೂಡಲೇ ಪ್ರತಿ ಎಕರೆಗೆ ₹ 5 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಕೊಪ್ಪಳ ಲೋಕಸಭಾ ಕ್ಷೇತ್ರದ ನಿಕಟಪೂರ್ವ ಅಭ್ಯರ್ಥಿ ಬಸವರಾಜ ಕ್ಯಾವಟರ ಮಾತನಾಡಿ, ‘ರೈತರು ಕಷ್ಟ ಪಟ್ಟು ಬೆಳೆದ ಬೆಳೆಗಳೆಲ್ಲ ಹಾಳಾಗಿರುವುದು ಸಂಕಟ ತಂದಿದೆ. ಎಕರೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಇನ್ನೇನು ಬೆಳೆ ಕೈಗೆ ಬರುತ್ತದೆ ಎನ್ನುವಷ್ಟರಲ್ಲಿ ಅಕಾಲಿಕ ಮಳೆಗೆ ಬೆಳೆ ಹಾಳಾಗಿದೆ. ಸರ್ಕಾರ ಹಾಳಾದ ಬೆಳೆಗೆ ಪ್ರತಿ ಎಕರೆಗೆ ₹22,500 ಕೊಡಲು ಮುಂದಾಗಿದೆ. ಆದರೆ ಇದು ಸರಿಯಲ್ಲ. ಪ್ರತಿ ಎಕರೆಗೆ ಕನಿಷ್ಠ ₹5 ಲಕ್ಷ ಕೊಡಬೇಕು. ಬಹಳಷ್ಟು ರೈತರು ವರ್ಷಕ್ಕೆ ಇಂತಿಷ್ಟು ಹಣವಂತೆ ಗುತ್ತಿಗೆ ಆಧಾರದ ಮೇಲೆ ಹೊಲ ಪಡೆದು ಉಳುಮೆ ಮಾಡಿದ್ದಾರೆ. ಹೀಗಾಗಿ ಸರ್ಕಾರ ಕೊಡುವ ಪರಿಹಾರ ಸಾಲುವುದಿಲ್ಲ’ ಎಂದರು.

‘ಮೂರು ತಿಂಗಳ ಹಿಂದೆ ಬಸಾಪುರ ಬಳಿ ಕಾಲುವೆ ಒಡೆದು ಅಪಾರ ಪ್ರಮಾಣದಲ್ಲಿ ಭತ್ತದ ಬೆಳೆ ಹಾಳಾದರೂ ಈವರೆಗೆ ರೈತರಿಗೆ ಪರಿಹಾರ ಕೊಟ್ಟಿಲ್ಲ. ಅದರಂತೆ ಈಗಲೂ ಮಳೆಗೆ ಹಾನಿಗೊಳಗಾದ ರೈತರ ಪರಿಸ್ಥಿತಿ ಆಗಬಾರದು. ಶಾಸಕ ಹಿಟ್ನಾಳ ಕೇವಲ ಕಾಟಾಚಾರಕ್ಕೆ ಬೆಳೆ ಹಾನಿ ವೀಕ್ಷಣೆ ಮಾಡುವುದಲ್ಲ. ಕೂಡಲೇ ಸರ್ಕಾರದಿಂದ ಪರಿಹಾರ ಕೊಡಿಸುವುದಕ್ಕೆ ಮೊದಲ ಆದ್ಯತೆ ನೀಡಬೇಕು. ಇಲ್ಲದಿದ್ದರೇ ರೈತರು ದಂಗೆ ಏಳಲಿದ್ದಾರೆ. ಅನ್ನದಾತರೊಂದಿಗೆ ನಾವು ಕೂಡ ಜತೆಯಾಗಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ‘ಅಕಾಲಿಕ ಮಳೆಗೆ ರೈತರು ಬೆಳೆದ ತೋಟಗಾರಿಕೆ ಬೆಳೆಗಳು ಸಂಪೂರ್ಣ ಹಾಳಾಗಿವೆ. ರೈತರ ಕಷ್ಟವನ್ನು ನೋಡಲಾಗುತ್ತಿಲ್ಲ. ನಮಗೆ ಅನ್ನ ಕೊಡುವ ರೈತನಿಗೆ ಸಂಕಷ್ಟ ಎದುರಾಗಿದೆ. ಸರ್ಕಾರ, ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದೇ ಕೂಡಲೇ ಹೆಚ್ಚಿನ ಮಟ್ಟದಲ್ಲಿ ಪರಿಹಾರ ವಿತರಣೆಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮೀಣ ಹಾಗೂ ನಗರ ಮಂಡಲದ ಬಿಜೆಪಿ ಅಧ್ಯಕ್ಷ ವೀರೇಶ ಸಜ್ಜನ, ಅಮರೇಶ ಮುರುಳಿ, ಮುಖಂಡರಾದ ಅಪ್ಪಣ್ಣ ಪದಕಿ, ಮಹಾಂತೇಶ ಪಾಟೀಲ ಮೈನಳ್ಳಿ, ಚಂದ್ರಶೇಖರ ಕವಲೂರ, ವೆಂಕಟೇಶ, ಗಣೇಶ ಹೊರತಟ್ನಾಳ, ಪ್ರದೀಪ ಹಿಟ್ನಾಳ, ರಮೇಶ ಕವಲೂರ, ಯೋಗಾನಂದ ಲೇಬಗೇರಿ, ಚನ್ನಬಸವ ಗಾಳಿ, ಗವಿ ಹಲವರ್ತಿ, ಮಾರುತಿ ಹಡಪದ, ಗುರಪ್ಪ, ದೇವರಾಜ ಹಾಲಸಮುದ್ರ, ಸಿದ್ದನಗೌಡ ಪಾಟೀಲ, ಸ್ಥಳೀಯರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-35-493959044

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.